
ಅಪ್ಪ ಕುಮಾರಣ್ಣ ಅರೋಗ್ಯದ ಬಗ್ಗೆ ಚಿಂತೆ ಮಾಡಬೇಡಿ, ಸಿಎಂ ಆಗುವುದು ಖಚಿತ: ನಿಖಿಲ್ ಕುಮಾರಸ್ವಾಮಿ
ಯಾರು ಕೂಡಾ ಕುಮಾರಣ್ಣ ಅರೋಗ್ಯದ ಬಗ್ಗೆ ಚಿಂತೆ ಮಾಡಬೇಡಿ, ಕುಮಾರಣ್ಣ ಶತಾಯುಷಿ. ರಾಜ್ಯದ ಜನತೆ ಆಶೀರ್ವಾದ ದಿಂದ ಕುಮಾರಣ್ಣ ಅರೋಗ್ಯವಾಗಿದ್ದಾರೆ," ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
"ಯಾರು ಕೂಡಾ ಕುಮಾರಣ್ಣ ಅರೋಗ್ಯದ ಬಗ್ಗೆ ಚಿಂತೆ ಮಾಡಬೇಡಿ, ಕುಮಾರಣ್ಣ ಶತಾಯುಷಿ. ರಾಜ್ಯದ ಜನತೆ ಆಶೀರ್ವಾದ ಹಾಗೂ ಅವರ ತಂದೆ ತಾಯಿ ಮಾಡಿದ ಪುಣ್ಯದಿಂದ ಕುಮಾರಣ್ಣ ಅರೋಗ್ಯವಾಗಿದ್ದಾರೆ," ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ಹಾಸನದಲ್ಲಿ ಜೆಡಿಎಸ್ ಸರ್ವೋಚ್ಚ ನಾಯಕ ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಭಾಷಣದಲ್ಲಿ ಈ ಮೇಲಿನಂತೆ ಹೇಳಿದ್ದಾರೆ.
"ನಾನು ಮೂರು ಬಾರಿ ಸೋತಿದ್ದರು ಕೂಡ ಧೃತಿಗೆಡುವುದಿಲ್ಲ. 2028ಕ್ಕೆ ಕುಮಾರಣ್ಣ ಈ ರಾಜ್ಯದ ಮುಖ್ಯಮಂತ್ರಿ ಮಾಡೋದೆ ನಮ್ಮ ಗುರಿ. ಪಕ್ಷಕ್ಕಾಗಿ ನಾನು ಯಾವ ತ್ಯಾಗಕ್ಕೂ ನಾನು ಸಿದ್ದನಿದ್ದೇನೆ. ರಾಜ್ಯ ಪ್ರವಾಸ ಹೋದ ಕಡೆಯಲ್ಲೆಲ್ಲಾ ಹೇಳೋದು ಒಂದೇ ಕುಮಾರಣ್ಣ ಈ ರಾಜ್ಯದ ಮುಖ್ಯಮಂತ್ರಿ ಮಾಡಬೇಕೆಂದು," ಎಂದು ನಿಖಿಲ್ ಹೇಳಿದರು.
ಹಾಸನದಲ್ಲಿ ಜೆಡಿಎಸ್ ರ್ಯಾಲಿ
ನಮ್ಮ ಕುಟುಂಬವನ್ನ ಟೀಕಿಸಿದ್ದೆ ಕಾಂಗ್ರೆಸ್ ಸಾಧನೆ
"ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ, ಸಾಧನೆ ಹೆಸರಿನಲ್ಲಿ ಸಮಾವೇಶ ಮಾಡಿ ದೇವೇಗೌಡರ ಕುಟುಂಬವನ್ನ ಟೀಕಿಸಿದ್ದೆ ಅವರ ಸಾಧನೆ. ಜೆಡಿಎಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ದೇವೇಗೌಡರು ಹಾಗೂ ಕುಮಾರಣ್ಣ, ರೇವಣ್ಣ ಅವರು ಈ ಜಿಲ್ಲೆಗೆ ಕೊಟ್ಟಿರುವ ಸಾಧನೆ ಶಾಶ್ವತ," ಎಂದು ನಿಖಿಲ್ ಅಭಿಪ್ರಾಯಪಟ್ಟರು."
"ದೇವೇಗೌಡರು ಕೆಂಪುಕೋಟೆ ಮೇಲೆ ಬಾವುಟ ಹಾರಿಸೋಕೆ ಈ ಜಿಲ್ಲೆಯ ಜನ ಕಾರಣ. ಅನೇಕ ರಾಜಕೀಯ ನಾಯಕರು ರಾಜಕಾರಣ ಮಾಡಿದ್ದಾರೆ. ಒಂದು ಪ್ರಾದೇಶಿಕ ಪಕ್ಷ ಕಟ್ಟಿ ಇಲ್ಲಿವರೆಗೂ ಉಳಿಸಿಕೊಂಡಿರೋದು ದೇವೇಗೌಡರು ಮಾತ್ರ. ಮುಂದೆ ಬರುವ ಯುವ ಪೀಳಿಗೆಗೂ ದೇವೇಗೌಡರು ಮಾದರಿಯಾಗಿದ್ದಾರೆ," ಎಂದರು.
"ರಾಜಕೀಯ ಜೀವನದ ಉದ್ದಗಲಕ್ಕೂ ದೇವೇಗೌಡರು ಹೋರಾಟ ಮಾಡಿಯೇ ರಾಜಕಾರಣ ಮಾಡಿದ್ದಾರೆ. ಅವರು ಅಧಿಕಾರಕ್ಕಾಗಿ ಅಂಟಿಕೊಂಡು ಹೋಗಿಲ್ಲ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಬಲಕ್ಕೆ ಜನತೆ ನಿಲ್ಲಬೇಕು," ಎಂದ ಅವರು, "ಮುಂಬರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಲು ನಾವೆಲ್ಲರೂ ನಿರಂತರವಾಗಿ ಶ್ರಮಿಸೋಣ," ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ, ಎ. ಮಂಜು, ವೆಂಕಟರಾವ್ ನಾಡಗೌಡ, ಹೆಚ್.ಕೆ. ಕುಮಾರಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮೀಟಿ ಅಧ್ಯಕ್ಷ ಜೆ.ಕೆ. ಕೃಷ್ಣಾ ರೆಡ್ಡಿ, ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಹಿರಿಯ ನಾಯಕರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಉಪಸ್ಥಿತರಿದ್ದರು.

