ಪೋಕ್ಸೋ ಪ್ರಕರಣ ಪ್ರಸ್ತಾಪಿಸಿ ಯಡಿಯೂರಪ್ಪಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
x

ಪೋಕ್ಸೋ ಪ್ರಕರಣ ಪ್ರಸ್ತಾಪಿಸಿ ಯಡಿಯೂರಪ್ಪಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ʻʻಯಡಿಯೂರಪ್ಪ ಮೇಲೆ ಪೋಕ್ಸೋ ಕೇಸ್ ಇದೆ. 82 ವರ್ಷ ವಯಸ್ಸಿನಲ್ಲಿ ಇದು ಬೇಕಿತ್ತಾ. ಚಿಕ್ಕ ಮಗುವಿನ ಮೇಲೆ ಈ ರೀತಿ ಮಾಡಬೇಕಿತ್ತಾ. ಅಂತಹ ಯಡಿಯೂರಪ್ಪಗೆ ನನ್ನ ಬಗ್ಗೆ ಮಾತನಾಡುವುದ್ದಕ್ಕೆ ಯಾವ ನೈತಿಕತೆ ಇದೆ" ಎಂದು ಮೈಸೂರಿನಲ್ಲಿ ಬಿಜೆಪಿ ನಾಯಕ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಜಿ ಸಿಎಂ ಬಿಎಸ್‌ವೈ ನೀಡಿದ್ದ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಬುಧವಾರ ತಿರುಗೇಟು ನೀಡಿದ್ದು, ʻʻಯಡಿಯೂರಪ್ಪ ಪೋಕ್ಸೋ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು, ದೋಷಾರೋಪ ಪಟ್ಟಿಯನ್ನೂ ಹಾಕಲಾಗಿದೆ. ನ್ಯಾಯಾಲಯದ ದಯೆಯಿಂದಾಗಿ ಅವರು ಹೊರಗಿದ್ದಾರೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಅವರು ಒಳ ಹೋಗಬೇಕಿತ್ತು. ಪೋಕ್ಸೋ ಪ್ರಕರಣದಲ್ಲಿ ಜಾಮೀನೇ ಸಿಗುವಂತಿಲ್ಲ. ಅಂಥವರಿಗೆ ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಈ ವಯಸ್ಸಿನಲ್ಲಿ (82 ವರ್ಷ) ಪೋಕ್ಸೋ ಕೇಸ್‌ನಲ್ಲಿ ಸಿಲುಕಿದ್ದಾರೆಂದರೆ ಏನು? ನೀವು (ಮಾಧ್ಯಮದವರು) ಅದನ್ನು ಜಾಸ್ತಿ ತೋರಿಸುವುದಿಲ್ಲ. ಹಾಗೆ ನೋಡಿದರೆ ಅವರು ಸಾರ್ವಜನಿಕ ಜೀವನದಿಂದಲೇ ನಿವೃತ್ತಿಯಾಗಬೇಕುʼʼ ಎಂದು ಕಿಡಿ ಕಾರಿದರು.

ʻʻಅವರು ಚೆಕ್‌ ಮೂಲಕ ದುಡ್ಡು ತೆಗೆದುಕೊಂಡಿದ್ದರು. ಡಿ-ನೋಟಿಫೈ ಮಾಡಿದ್ದರು. ನಾನೇನು ಮಾಡಿದ್ದೇನೆ? ನನ್ನದೇನಾದರೂ ಪತ್ರ, ಆದೇಶ ಅಥವಾ ಹೇಳಿಕೆ ಇದೆಯಾ? ನಾನು ಯಾವುದೇ ಪ್ರಭಾವವನ್ನೂ ಬೀರಿಲ್ಲʼʼ ಎಂದು ಹೇಳಿದರು.

ʻʻಯಡಿಯೂರಪ್ಪ ಪ್ರಕರಣವೇ ಬೇರೆ. ಅವರು 18ರಿಂದ 20 ಕೇಸ್‌ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅದೆಲ್ಲವನ್ನೂ ಸಮಾವೇಶದಲ್ಲಿ ಬಹಿರಂಗಪಡಿಸುತ್ತೇನೆ. ಬುಧವಾರವೇ ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಹೇಳಲು ಉದ್ದೇಶಿಸಿದ್ದೆ. ಆದರೆ, ಸಮಾವೇಶದಲ್ಲೇ ತಿಳಿಸಲೆಂದು ಪತ್ರಿಕಾಗೋಷ್ಠಿ ಮುಂದೂಡಿದೆʼʼ ಎಂದು ತಿಳಿಸಿದರು.

ʻʻಅವರ ಕಾಲದಲ್ಲಿ ಆಗಿದ್ದ ಹಗರಣಗಳನ್ನೆಲ್ಲಾ ಸಮಾವೇಶದಲ್ಲಿ ಬಿಚ್ಚಿಡುತ್ತೇನೆ. ಯಾವ್ಯಾವ ಹಗರಣ ಆಗಿದ್ದವು, ಅವು ಯಾವ್ಯಾವ ಹಂತದಲ್ಲಿವೆ, ಜಂತಕಲ್ ಪ್ರಕರಣವೇನು, ಯಡಿಯೂರಪ್ಪ ಹಾಗೂ ಅವರ ಮಗ ಮಾಡಿದ್ದ ಶೆಲ್ ಕಂಪನಿ ಪ್ರಕರಣ, ದೇವರಾಜ ಅರಸು ಟ್ರಕ್ ಟರ್ಮಿನಲ್‌ ಪ್ರಕರಣ, ಭೋವಿ ಅಭಿವೃದ್ಧಿ ನಿಗಮದಲ್ಲಾದ ಹಗರಣಗಳನ್ನೆಲ್ಲಾ ತಿಳಿಸುತ್ತೇನೆʼʼ ಎಂದು ಸಿದ್ದರಾಮಯ್ಯ ಹೇಳಿದರು.

Read More
Next Story