Target of 500 million tonnes of steel production per year by 2047: Minister HDK
x
ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ

ಪಿಎಂ ಇ-ಡ್ರೈವ್‌ ಯೋಜನೆಯ ಅವಧಿ ಎರಡು ವರ್ಷ ವಿಸ್ತರಣೆ: ಸಚಿವ ಹೆಚ್‌ಡಿಕೆ

ಇ-ಟ್ರಕ್‌ಗಳು, ಇ-ಬಸ್‌ಗಳು ಮತ್ತು ಪರೀಕ್ಷಾ ಏಜೆನ್ಸಿಗಳಿಗೆ ಬಲ ತುಂಬಲು ಈ ವಿಸ್ತರಣೆಯ ಅಗತ್ಯವಿದ್ದು, 2026 ಮಾರ್ಚ್ 31 ರಿಂದ 2028 ಮಾರ್ಚ್ 31ರವರೆಗೆ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಸಚಿವ ಹೆಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.


ಪಿಎಂ ಇ-ಡ್ರೈವ್‌ಯೋಜನೆಯು ಎಲೆಕ್ಟ್ರಿಕ್ ವಾಹನಗಳ (EV) ಅಳವಡಿಕೆಯನ್ನು ವೇಗಗೊಳಿಸಲು ಸಹಕಾರಿಯಾಗಿದೆ. ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ಮತ್ತು ದೇಶದಲ್ಲಿ ಇವಿ ವಾಹನಗಳ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಲು ಉದ್ದೇಶಿಸಿದ್ದು, ಯೋಜನೆಯ ಅವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಲಾಗಿದೆ ಎಂದು ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ನವದೆಹಲಿಯಲ್ಲಿ ಮಾತನಾಡಿದ ಅವರು, ಇ-ಟ್ರಕ್‌ಗಳು, ಇ-ಬಸ್‌ಗಳು ಮತ್ತು ಪರೀಕ್ಷಾ ಏಜೆನ್ಸಿಗಳಿಗೆ ಬಲ ತುಂಬಲು ಈ ವಿಸ್ತರಣೆಯ ಅಗತ್ಯವಿದ್ದು, 2026 ಮಾರ್ಚ್ 31 ರಿಂದ 2028 ಮಾರ್ಚ್ 31ರವರೆಗೆ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇ-ವಾಹನಗಳನ್ನು ಬಳಸುವತ್ತ ದೇಶವು ತ್ವರಿತಗತಿಯಲ್ಲಿ ಹೆಜ್ಜೆ ಇಡುತ್ತಿದೆ. ಪಿಎಂ ಇ-ಡ್ರೈವ್ ಯೋಜನೆಯು ತನ್ನ ಉತ್ಪಾದನೆಯ ಮೂಲಕ ಮೇಕ್ ಇನ್ ಇಂಡಿಯಾವನ್ನು ಸಕ್ರಿಯಗೊಳಿಸಲು ಸಹಕಾರಿಯಾಗಿದೆ ಎಂದರು.

ಇ-ಟ್ರಕ್‌ಗಳ ಮಾರುಕಟ್ಟೆ ಆರಂಭಿಕ ಹಂತದಲ್ಲಿದ್ದು, ಈ ದೃಷ್ಟಿಯಿಂದ ಪೂರ್ಣ ಪ್ರಮಾಣದ ವಾಣಿಜ್ಯ ಉತ್ಪಾದನೆಗೆ ಇನ್ನೂ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅದೇ ರೀತಿ, 14,028 ಘಟಕಗಳನ್ನು ನಿಯೋಜಿಸಲು 4,391 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದಲ್ಲದೆ, ಪರೀಕ್ಷಾ ಏಜೆನ್ಸಿ ಉಪಕರಣಗಳ ಖರೀದಿಗೆ ಈ ವಿಭಾಗಗಳಲ್ಲಿ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಾಪಾಡಿಕೊಳ್ಳಲು ಟೆಂಡರ್, ಮೌಲ್ಯಮಾಪನ, ಸಂಗ್ರಹಣೆ ಮತ್ತು ಕಾರ್ಯಾರಂಭಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.

Read More
Next Story