PG CET | ಕಂಪ್ಯೂಟರ್‌ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಈ ಬಾರಿ ಸಿಬಿಟಿ ಪರೀಕ್ಷೆ
x

PG CET | ಕಂಪ್ಯೂಟರ್‌ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಈ ಬಾರಿ ಸಿಬಿಟಿ ಪರೀಕ್ಷೆ

ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಪ್ರಾಯೋಗಿಕವಾಗಿ ಇದೇ ಮೊದಲ ಬಾರಿಗೆ ಮಾಡಲು ತೀರ್ಮಾನಿಸಿದ್ದು, ಮೂಲಸೌಕರ್ಯ ನೋಡಿಕೊಂಡು ಮುಂದಿನ ದಿನಗಳಲ್ಲಿ ಇತರ‌ ಕೋರ್ಸ್ ಗಳಿಗೂ ವಿಸ್ತರಿಸಲು ಕೆಇಎ ನಿರ್ಧರಿಸಿದೆ.


ಪಿಜಿಸಿಇಟಿ-2025ಕ್ಕೆ ಸಂಬಂಧಿಸಿ ಎಂ.ಇ ಮತ್ತು ಎಂ.ಟೆಕ್ ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಇದೇ ಮೊದಲ ಬಾರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.

ಜೂನ್ 2ರಂದು ಸಿಬಿಟಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸವಾಗಲಿ ಎನ್ನುವ ಕಾರಣಕ್ಕೆ ಮೇ 26 ಮತ್ತು 27ರಂದು ಅಣಕು ಪರೀಕ್ಷೆ ನಡೆಸಲಾಗುತ್ತದೆ.

ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿದ ನಂತರ ಪರೀಕ್ಷಾಭ್ಯಾಸಕ್ಕೆ ಪ್ರಾಯೋಗಿಕ ಲಿಂಕ್ ನೀಡಲಾಗುವುದು. ಲಿಂಕ್ ಮೂಲಕ ಅಭ್ಯಾಸ ಮಾಡಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಂಪ್ಯೂಟರ್ ಸೈನ್ಸ್ ಹೊರತುಪಡಿಸಿ, ಎಂಇ ಮತ್ತು ಎಂ.ಟೆಕ್ ನ ಇತರ ಕೋರ್ಸ್ ಗಳ ಪ್ರವೇಶಕ್ಕೆ ಮೇ 31ರಂದು ಲಿಖಿತ ಪರೀಕ್ಷೆ ನಡೆಯಲಿದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಪ್ರಾಯೋಗಿಕವಾಗಿ ಇದೇ ಮೊದಲ ಬಾರಿಗೆ ಮಾಡಲು ತೀರ್ಮಾನಿಸಿದ್ದು, ಮೂಲಸೌಕರ್ಯ ನೋಡಿಕೊಂಡು ಮುಂದಿನ ದಿನಗಳಲ್ಲಿ ಇತರ‌ ಕೋರ್ಸ್ ಗಳಿಗೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಿಬಿಟಿ ಪ್ರಯೋಜನ ಏನು?

ಕಂಪ್ಯೂಟರ್ ಆಧಾರಿತ ಪರೀಕ್ಷೆಯಿಂದ ಶೈಕ್ಷಣಿಕ, ವೃತ್ತಿಪರ ಪ್ರಮಾಣೀಕರಣ, ದಕ್ಷತೆ, ವೇಗ ಮತ್ತು ನಿಖರತೆಯ ನೇಮಕಾತಿಗೆ ಸಹಾಯವಾಗಲಿದೆ. ಸಿಬಿಟಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪ್ರಶ್ನೆಗಳನ್ನು ಕಂಪ್ಯೂಟರ್ ಇಂಟರ್ಫೇಸ್ ಮೂಲಕ ಉತ್ತರಿಸಬೇಕಿದೆ. ಇದರಲ್ಲಿ ಬಹು ಆಯ್ಕೆಯ ಪ್ರಶ್ನೆಗಳು, ಕಿರು ಉತ್ತರಗಳು ಅಥವಾ ಪ್ರಬಂಧಗಳಂತಹ ವೈಶಿಷ್ಟ್ಯಗಳು ಇರಲಿವೆ.

Read More
Next Story