Petrol Price Hike|  ಚುನಾವಣಾ ಸೋಲಿನ ಸೇಡಿಗೆ ಬೆಲೆ ಏರಿಕೆ ಎಂಬ ಬಿಜೆಪಿ ಟೀಕೆಗೆ ಸಿಎಂ ತಿರುಗೇಟು
x

Petrol Price Hike| ಚುನಾವಣಾ ಸೋಲಿನ ಸೇಡಿಗೆ ಬೆಲೆ ಏರಿಕೆ ಎಂಬ ಬಿಜೆಪಿ ಟೀಕೆಗೆ ಸಿಎಂ ತಿರುಗೇಟು


ಚುನಾವಣಾ ಸೋಲಿನ ಸೇಡು ತೀರಿಸಲು ತೈಲ ಬೇಲೆ ಏರಿಕೆ ಮಾಡಲಾಗಿದೆ ಎಂಬ ಬಿಜೆಪಿ ಟೀಕೆಗೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೆಟ್ರೋಲ್‌ ಬೆಲೆ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆ ಇದೆ ಎಂದು ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಇಂಚಗೇರಿ ಗ್ರಾಮದ ಹೆಲಿಪ್ಯಾಡ್ ನಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ. ಕರ್ನಾಟಕದಲ್ಲಿ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ , ಈ ಬಾರಿ ಒಂಭತ್ತು ಸ್ಥಾನಗಳನ್ನು ಗಳಿಸಿದ್ದೇವೆ. ಬಿಜೆಪಿ ಕಳೆದ ಬಾರಿ 25 ಇದ್ದನ್ನು ಈ ಬಾರಿ 19 ಕ್ಕೆ ಇಳಿದಿದ್ದಾರೆ. ನಮಗೆ 13% ಮತ ಹಂಚಿಕೆಯಾಗಿದೆ. ನಾವು ಸೋತಿದ್ದೇವೆಯೇ ಎಂದು ಪ್ರಶ್ನಿಸಿದರು. ನಮ್ಮ ಲೆಕ್ಕಾಚಾರದ ಪ್ರಕಾರ, ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ. ಚುನಾವಣಾ ಫಲಿತಾಂಶಕ್ಕೂ ಬೆಲೆ ಏರಿಕೆಗೂ ಸಂಬಂಧವಿಲ್ಲ ಎಂದಿದ್ದಾರೆ.

ಪೆಟ್ರೋಲ್ ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. 11.4.2021ರಂದು ಪೆಟ್ರೋಲ್ ಮೇಲೆ 35% ತೆರಿಗೆ ಹಾಗೂ ಡೀಸೆಲ್ ಮೇಲೆ 24% ತೆರಿಗೆ ಹಾಕುತ್ತಿದ್ದರು. ನಂತರ ಕೇಂದ್ರದಲ್ಲಿ ಇಳಿಕೆ ಮಾಡಿದ್ದರಿಂದ ಇವರೂ 35 ರಿಂದ 25.92 ಕ್ಕೆ ನಂತರ ಇಳಿಸಿದರು. ಡೀಸಲ್ ಮೇಲೆ 14.34ಕ್ಕೆ ಇಳಿಸಿದರು. ಶೇ7 ರೂಪಾಯಿಯಷ್ಟು ಕಡಿಮೆ ಮಾಡಿದರು. ಏಕೆಂದರೆ ಕೇರಳ ಆಗಲಿ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಕಡಿಮೆ ಮಾಡಲಿಲ್ಲ. ಈಗ ಕರ್ನಾಟಕದಲ್ಲಿ 99.85 ರೂ ಪೆಟ್ರೋಲ್ ಬೆಲೆಯಿದೆ. ನಿನ್ನೆಯಿಂದ ಮೂರು ರೂಪಾಯಿ ಹೆಚ್ಚು ಮಾಡಿದ್ದೇವೆ. 102 ರೂ ಗೆ ಹೆಚ್ಚಾಗಿದೆ. ಇದು ತಮಿಳುನಾಡಿಗೆ ಸಮವಾಗಿದೆ. ಕೇರಳದ ಕಾಸರಗೋಡಿನಲ್ಲಿ 106.66 ರೂ.ಗಳಿದೆ. ಆಂಧ್ರದ ಅನಂತಪುರದಲ್ಲಿ 109.44 , ತೆಲಂಗಾಣದ ಹೈದರಾಬಾದ್ ನಲ್ಲಿ 107.40 ಹಾಗೂ ಮಹಾರಾಷ್ಟ್ರದಲ್ಲಿ 104.46 ರೂ.ಇದೆ. ಇವೆಲ್ಲಕ್ಕೆ ಹೋಲಿಸಿದರೆ ನಮ್ಮ ದರ ಕಡಿಮೆ ಇದೆ ಎಂದರು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಕರ್ನಾಟಕದ ಇತಿಹಾಸದಲ್ಲಿ ಪೆಟ್ರೋಲ್ ಬೆಲೆ ಇಷ್ಟು ದುಬಾರಿಯಾಗಿರಲಿಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ಕುಮಾರಸ್ವಾಮಿ ಹಿಂದೆ ಇದ್ದಾಗ ಶೇ 35% ಇತ್ತು. ಬಿಜೆಪಿ ಸರ್ಕಾರ ಇರುವ ರಾಜಸ್ಥಾನದಲ್ಲಿ 104.86 ರೂ.ಗಳಿದೆ ಹಾಗೂ ಮಧ್ಯಪ್ರದೇಶದಲ್ಲಿ 106.47 ರೂಗಳಿದೆ. ಕರ್ನಾಟದಲ್ಲಿ ಈ ರಾಜ್ಯಗಳಿಗಿಂತ ಕಡಿಮೆ ಇದೆ. ಪಕ್ಕದ ರಾಜ್ಯಗಳಿಗೆ ಸಮವಾಗಿರಲಿ ಎಂಬ ಕಾರಣಕ್ಕೆ ಬೆಲೆ ಏರಿಕೆ ಮಾಡಿರಲಿಲ್ಲ. ಇತರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚಿದೆ ಎಂದರು.


ಅನುದಾನ ನೀಡಲಾಗಿದೆ

ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ ಅನುದಾನವನ್ನು ನೀಡಲಾಗಿದೆ. ಗ್ಯಾರಂಟಿಗಳನ್ನು ಬಡವರ ಅನುಕೂಲಕ್ಕಾಗಿ ಜಾರಿಮಾಡಿದೆ ಚುನಾವಣೆಗಾಗಿ ಅಲ್ಲ. ಸಾರ್ವಜನಿಕರಲ್ಲಿ ಗ್ಯಾರಂಟಿ ಗಳನ್ನು ನಿಲ್ಲಿಸುತ್ತಾರೆ ಎಂಬ ಗಾಳಿಸುದ್ದಿ ಎದ್ದಿರುವ ಬಗ್ಗೆ ಮಾತನಾಡಿ ಗ್ಯಾರಂಟಿಗಳನ್ನು ಬಡವರ ಅನುಕೂಲಕ್ಕಾಗಿ ಜಾರಿಮಾಡಿದೆ ಚುನಾವಣೆಗಾಗಿ ಅಲ್ಲ ಎಂದರು.

Read More
Next Story