ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಅಗತ್ಯ
x

ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಅಗತ್ಯ


ಮೀಸಲಿಟ್ಟ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸಂಬಂಧಪಟ್ಟ ಉಪಯೋಗಿ ಸಂಸ್ಥೆಗಳು ನಿಯಮಾನುಸಾರ ಪೂರ್ವಾನುಮತಿ ಪಡೆಯುವುದು ಅತ್ಯಗತ್ಯ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಬೆಳಗಾವಿ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಈ ವಿಷಯತಿಳಿಸಿದ್ದಾರೆ. ಚಿಮ್ಮನಕಟ್ಟಿ ಬಿ.ಬಿ. ಅವರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಉಪಯೋಗಿ ಸಂಸ್ಥೆ ವನ (ಸಂರಕ್ಷಣಾ ಏವಂ ಸಂವರ್ಧನ್) ಅಧಿನಿಯಮ 1980ರನ್ವಯ ಹಾಗೂ 2023ರ ನಿಯಮಗಳ ಅನುಸಾರ www.parivesh.nic.in ಅಂತರ್ಜಾಲ ತಾಣದಲ್ಲಿ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ವಿವರಿಸಿದರು.

ನಿಯಮಾನುಸಾರ ಅನುಮತಿ ಪಡೆದು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕಲ್ಲು ಕ್ವಾರಿಗಳಿಗೆ ಯಾವುದೇ ತೊಂದರೆ ಆಗುತ್ತಿಲ್ಲ ಎಂದೂ ಅವರು ತಿಳಿಸಿದರು.

Read More
Next Story