ಪೆನ್‌ಡ್ರೈವ್‌ ಪ್ರಕರಣದಿಂದ ಪಕ್ಷದ ಕಾರ್ಯಕರ್ತರಿಗೆ ಆಘಾತ: ನಿಖಿಲ್‌ ಕುಮಾರಸ್ವಾಮಿ
x

ಪೆನ್‌ಡ್ರೈವ್‌ ಪ್ರಕರಣದಿಂದ ಪಕ್ಷದ ಕಾರ್ಯಕರ್ತರಿಗೆ ಆಘಾತ: ನಿಖಿಲ್‌ ಕುಮಾರಸ್ವಾಮಿ


ʻʻಪ್ರಜ್ವಲ್ ಪ್ರಕರಣದಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಆಘಾತಕ್ಕೆ ಒಳಗಾಗಿದ್ದಾರೆ. ತಂದೆ (ಎಚ್.ಡಿ. ಕುಮಾರಸ್ವಾಮಿ) ಜತೆ ಹಾಸನಕ್ಕೆ ತೆರಳಿ ಅವರಿಗೆ ಆತ್ಮಸ್ಥೆರ್ಯ ತುಂಬಲಾಗುವುದು" ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ʻʻಈ ಘಟನೆಯಿಂದ ದೇವೇಗೌಡರು ಆಘಾತಕ್ಕೆ ಒಳಗಾಗಿದ್ದಾರೆ. 91ರ ಇಳಿವಯಸ್ಸಿನಲ್ಲಿ ಅವರಿಗಾದ ನೋವು ಊಹಿಸಲೂ ಸಾಧ್ಯವಿಲ್ಲ, ಸಾಕಷ್ಟು ನೊಂದಿದ್ದಾರೆ. ವಿಶ್ರಾಂತಿಯಲ್ಲಿ ಇದ್ದಾರೆ' ಎಂದು ತಿಳಿಸಿದರು.

ʻʻವಿಡಿಯೊಗಳನ್ನು ನಾನು ನೋಡಿಲ್ಲ. ಬೇರೆಯವರಿಂದ ವಿಡಿಯೊಗಳ ಬಗ್ಗೆ ಕೇಳಿದ್ದೇನೆ. ಸದ್ಯ ಪ್ರಜ್ವಲ್ ಆರೋಪಿ ಸ್ಥಾನದಲ್ಲಿದ್ದಾರೆ. ಎಸ್‌ಐಟಿ ತನಿಖೆ ನಡೆಯುತ್ತಿದೆ. ತಪ್ಪು ಮಾಡಿದ್ದರೆ ಖಂಡಿತ ಶಿಕ್ಷೆ ಅನುಭವಿಸುತ್ತಾರೆ. ಆದರೆ, ವಿಡಿಯೊ ಪ್ರಸಾರ ಮಾಡಿದವರು ಮಹಿಳೆಯರ ಘನತೆಗೆ ಕುತ್ತು ತಂದಿದ್ದಾರೆ. ಕೊನೆಯ ಪಕ್ಷ ಬ್ಲರ್ ಮಾಡಬಹುದಿತ್ತು' ಎಂದು ಹೇಳಿದರು.‌

'ಹಾಸನ ಸಂಸದರ ವಿಚಾರದಲ್ಲಿ ದೇಶದ ಪ್ರಧಾನಿಗಳನ್ನು ಎಳೆದು ತರುವ ಕೆಲಸವನ್ನು ಕಾಂಗ್ರೆಸ್‌ ಮಾಡಬಾರದು. ಅವರಿಗೂ ಇದಕ್ಕೂ ಸಂಬಂಧವಿಲ್ಲ' ಎಂದು ಹೇಳಿದರು.

Read More
Next Story