ಪೆನ್‌ಡ್ರೈವ್ ಪ್ರಕರಣ: ಕುಮಾರಸ್ವಾಮಿ ಹೋರಾಟ ಮಾಡದಂತೆ ಕಟ್ಟಿಹಾಕಿರುವವರು ಯಾರು?: ಡಿ.ಕೆ.ಶಿವಕುಮಾರ್ ತಿರುಗೇಟು
ಪೆನ್‌ಡ್ರೈವ್ ಪ್ರಕರಣದಲ್ಲಿ ಹೋರಾಟ ಮಾಡದಂತೆ ಕುಮಾರಸ್ವಾಮಿಯನ್ನು ಹಿಡಿದು ನಿಲ್ಲಿಸಿಕೊಂಡಿರುವವರು ಯಾರು? ಕಟ್ಟಿ ಹಾಕಿರುವವರು ಯಾರು?" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಗುರುವಾರ ಸದಾಶಿವನಗರದ ನಿವಾಸದ ಬಳಿ ಡಿಕೆ ಶಿವಕುಮಾರ್ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ರಾಜಭವನಕ್ಕೆ ಭೇಟಿ ನೀಡಿ ಪ್ರಜ್ವಲ್ ಪ್ರಕರಣವನ್ನು ಸಿಬಿಐ ನೀಡುವಂತೆ ಹೋರಾಟ ಮಾಡುತ್ತಿರುವ ಬಗ್ಗೆ ಕೇಳಿದಾಗ, ʻʻಅವರನ್ನು ಹೋರಾಟ ಮಾಡದಂತೆ ಯಾರೂ ತಡೆದಿಲ್ಲ, ಅವರು ಹೋರಾಟ ಮಾಡಲಿ. ಆಂಧ್ರಪ್ರದೇಶದ ಚುನಾವಣಾ ಪ್ರಚಾರದಿಂದ ವಾಪಸು ಬಂದ ನಂತರ ಈ ಬಗ್ಗೆ ಮಾತನಾಡುತ್ತೇನೆʼʼ ಎಂದು ಹೇಳಿದರು.
ಪೆನ್ ಡ್ರೈವ್ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ ಎಂದು ಒಕ್ಕಲಿಗ ಸಚಿವರು ಮಾತನಾಡಿರುವ ವಿಚಾರವಾಗಿ ಮಾತನಾಡಿದ ಅವರು, ʻʻಚಾರದಲ್ಲಿ ನಾನು ಏನು ಹೇಳಬೇಕೊ ಅದನ್ನೆಲ್ಲಾ ಈಗಾಗಲೇ ಹೇಳಿ ಆಗಿದೆ. ಈಗ ನಾನು ಏನೂ ಹೇಳಬೇಕಿಲ್ಲ. ಮಿಕ್ಕಿದ್ದೆಲ್ಲಾ ವಿಧಾನಸಭೆ ಅಧಿವೇಶನ ಕಲಾಪದಲ್ಲಿ ಚರ್ಚೆ ಮಾಡೋಣʼʼಎಂದರು.