ಪವಿತ್ರಾ ಗೌಡ ಜಾಮೀನು ವಿಚಾರಣೆ ಮುಂದೂಡಿಕೆ
57ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಆಕ್ಷೇಪಣೆ ಸಲ್ಲಿಸಲು ಎಸ್ ಪಿಪಿ ಕಾಲಾವಕಾಶ ಕೇಳಿದ್ದು, ಹೀಗಾಗಿ ವಿಚಾರಣೆಯನ್ನ ಕೋರ್ಟ್ ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಗುವ ನಿರೀಕ್ಷೆಯಲ್ಲಿ ನಟಿ ಪವಿತ್ರಾ ಗೌಡಗೆ ಮತ್ತೆ ನಿರಾಸೆ ಆಗಿದೆ. ಬುಧವಾರ 57ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಪವಿತ್ರಾ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಆಕ್ಷೇಪಣೆ ಸಲ್ಲಿಸಲು ಎಸ್ ಪಿಪಿ ಕಾಲಾವಕಾಶ ಕೇಳಿದ್ದು, ಹೀಗಾಗಿ ವಿಚಾರಣೆಯನ್ನ ಕೋರ್ಟ್ ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ.
ಈ ಹಿಂದೆ ಪವಿತ್ರಾ ಪರ ವಕೀಲರು ಈ ಪ್ರಕರಣದಲ್ಲಿ ನನ್ನ ಕಕ್ಷಿದಾರರ ಪಾತ್ರವಿಲ್ಲ ಎಂದು ವಾದ ಮಂಡಿಸಿದ್ದರು. ದರ್ಶನ್ ಸೂಚನೆಯಂತೆ ಪವನ್ ಹೋಗಿ ರಾಘವೇಂದ್ರಗೆ ಹೇಳಿದ್ದಾನೆ. ಅದರಂತೆ ರಾಘವೇಂದ್ರ ಹಾಗೂ ಉಳಿದ ಆರೋಪಿಗಳು ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಪವಿತ್ರಗೌಡಗೆ ತಮಗೆ ಬರ್ತಾ ಇದ್ದ ಮೆಸೇಜ್ ಬಗ್ಗೆ ಪವನ್ ಗೆ ಹೇಳಿದ್ದರು. ಪವನ್ ಈ ವಿಚಾರವನ್ನು ದರ್ಶನ್ ಅವರ ಗಮನಕ್ಕೆ ತಂದಿದ್ದಾರೆ. ಬಳಿಕ ಅವರೆಲ್ಲ ಸೇರಿ ಪ್ಲಾನ್ ಮಾಡಿ ರೇಣುಕಾಸ್ವಾಮಿಯನ್ನು ಕರೆತಂದಿದ್ದರು ಎಂದು ವಕೀಲರು ನ್ಯಾಯಾಲಕ್ಕೆ ತಿಳಿಸಿದರು.
ಚಿತ್ರದುರ್ಗದಿಂದ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್ ಗೆ ಕರ್ಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಪವಿತ್ರಾ ಗೌಡ ಪಾತ್ರ ಇಲ್ಲ. ಪೊಲೀಸರು ಆಕೆಯ ಸುತ್ತ ಮಾಡಿರೋ ಆರೋಪಗಳು ನಿಜವಲ್ಲ ಎಂದು ಟಾಮಿ ಸೆಬಾಸ್ಟಿಯನ್ ಅವರು ಈ ಹಿಂದೆ ವಾದ ಮಂಡಿಸಿದರು.