Passenger Fined for Leaving Station Without Boarding Metro
x
ಸಾಂದರ್ಭಿಕ ಚಿತ್ರ

ಮೆಟ್ರೋ ಹತ್ತಲಾಗದೆ ನಿಲ್ದಾಣದಿಂದ ಹೊರಬಂದ ಪ್ರಯಾಣಿಕನಿಗೆ ಬಿತ್ತು ದಂಡ!

ಕೇಂದ್ರ ರೇಷ್ಮೆ ಮಂಡಳಿ (Central Silk Board) ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಿಖಿಲ್ ಎಂಬ ಪ್ರಯಾಣಿಕರು ತಮ್ಮ 'ಎಕ್ಸ್' (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಈ ಅನುಭವವನ್ನು ಹಂಚಿಕೊಂಡಿದ್ದಾರೆ.


ನಮ್ಮ ಮೆಟ್ರೋದಲ್ಲಿ ದಿನನಿತ್ಯ ಒಂದಿಲ್ಲೊಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ, ಜನದಟ್ಟಣೆಯಿಂದಾಗಿ ಮೆಟ್ರೋ ರೈಲು ಹತ್ತಲು ಸಾಧ್ಯವಾಗದೆ ನಿಲ್ದಾಣದಿಂದ ಹೊರಬಂದ ಪ್ರಯಾಣಿಕನೊಬ್ಬನಿಗೆ ದಂಡ ವಿಧಿಸಿದ ಪ್ರಸಂಗವೊಂದು ವರದಿಯಾಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮೆಟ್ರೋ ನಿಯಮಗಳ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ರೇಷ್ಮೆ ಮಂಡಳಿ (Central Silk Board) ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಿಖಿಲ್ ಎಂಬ ಪ್ರಯಾಣಿಕರು ತಮ್ಮ 'ಎಕ್ಸ್' (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಈ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಸುಮಾರು 20 ನಿಮಿಷಗಳ ಕಾಲ ರೈಲಿಗಾಗಿ ಕಾದ ನಂತರ ಬಂದ ಮೆಟ್ರೋದಲ್ಲಿ ವಿಪರೀತ ಜನಸಂದಣಿ ಇತ್ತು. ಇದರಿಂದಾಗಿ, ಅವರಿಗೂ ಸೇರಿದಂತೆ ಹಲವು ಪ್ರಯಾಣಿಕರಿಗೆ ರೈಲು ಹತ್ತಲು ಸಾಧ್ಯವಾಗಲಿಲ್ಲ. ಬೇರೆ ದಾರಿಯಿಲ್ಲದೆ ನಿಲ್ದಾಣದಿಂದ ಹೊರಬರಲು ನಿರ್ಧರಿಸಿದಾಗ, ಅವರಿಗೆ 50 ರೂಪಾಯಿ ದಂಡ ಹಾಗೂ 9.5 ರೂಪಾಯಿ ಪ್ರಯಾಣ ದರವನ್ನು ವಿಧಿಸಲಾಯಿತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೆಟ್ರೋ ಅಧಿಕಾರಿಗಳು, ಇದು ನಿಯಮಾನುಸಾರವೇ ನಡೆದಿದೆ ಎಂದು ತಿಳಿಸಿದ್ದಾರೆ. "ಯಾವುದೇ ಪ್ರಯಾಣಿಕರು ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ, ಅಲ್ಲಿಂದಲೇ ನಿರ್ಗಮಿಸಿದರೆ, ಅವರಿಗೆ ಕನಿಷ್ಠ ಪ್ರಯಾಣ ದರವಾದ 10 ರೂಪಾಯಿ (ಸ್ಮಾರ್ಟ್ ಕಾರ್ಡ್ ಇದ್ದರೆ 9.5 ರೂಪಾಯಿ) ವಿಧಿಸಲಾಗುತ್ತದೆ. ಅಲ್ಲದೆ, ನಿಲ್ದಾಣದ ಪಾವತಿ ಪ್ರದೇಶದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಕಳೆದು ಹೊರಬಂದರೆ, ಹೆಚ್ಚುವರಿಯಾಗಿ 50 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಇದು ಮೆಟ್ರೋದ ಜಾರಿಯಲ್ಲಿರುವ ನಿಯಮ" ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Read More
Next Story