
Pahalgam Terror Attack : ಭಯೋತ್ಪಾದಕ ದಾಳಿಗೆ ಬಲಿಯಾದ ಕನ್ನಡಿಗರ ಮೃತದೇಹ ಇಂದು ತವರಿಗೆ
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಶ್ರೀನಗರಕ್ಕೆ ತೆರಳಿ ಅಲ್ಲಿ ಸಿಲುಕಿದ್ದ ಕರ್ನಾಟಕದವರಿಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದಾರೆ. ಅಂತೆಯೇ ಸಂತ್ರಸ್ತರ ಕುಟುಂಬಗಳ ಜತೆ ನಿಂತು ಮೃತದೇಹವನ್ನು ಗುರುತಿಸಿ ಊರಿಗೆ ಕಳುಹಿಸುವ ಕೆಲಸಲ ನಿರ್ವಹಿಸುತ್ತಿದ್ದಾರೆ.
ಜಮ್ಮು- ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಗೀಡಾಗಿರುವ ಕರ್ನಾಟಕದ ಇಬ್ಬರ ಮೃತದೇಹಗಳು ಬುಧವಾರ ಅವರ ಊರು ತಲುಪಲಿದೆ. ಶ್ರೀನಗರದ ಆಸ್ಪತ್ರೆಯಿಂದ ಅವರವರ ಮೃತದೇಹಗಳನ್ನು ಸುರಕ್ಷಿತ ಪೆಟ್ಟಿಗೆಗಳ ಮೂಲಕ ಆಯಾ ಊರುಗಳಿಗೆ ತಲುಪಿಸಲಾಗುತ್ತದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಶ್ರೀನಗರಕ್ಕೆ ತೆರಳಿ ಅಲ್ಲಿ ಸಿಲುಕಿದ್ದ ಕರ್ನಾಟಕದವರಿಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದಾರೆ. ಅಂತೆಯೇ ಸಂತ್ರಸ್ತರ ಕುಟುಂಬಗಳ ಜತೆ ನಿಂತು ಮೃತದೇಹವನ್ನು ಗುರುತಿಸಿ ಊರಿಗೆ ಕಳುಹಿಸುವ ಕೆಲಸ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ಭರತ್ ಭೂಷಣ್ ಮತ್ತು ಶಿವಮೊಗ್ಗದ ಮಂಜುನಾಥ್ ರಾವ್ ಭಯೋತ್ಪಾದಕರ ದಾಳಿಗೆ ಸಿಲುಕಿದವರು. ಭರತ್ ಭೂಷಣ್ ಅವರ ಮೃತದೇಹ ಮಧ್ಯಾಹ್ನ 3 ಗಂಟೆಗೆ ಇಂಡಿಗೋ ಏರ್‌ಲೈನ್ಸ್‌ನ ವಿಮಾನ ಸಂಖ್ಯೆ 6E 3105 ಮತ್ತು 6E 5252 ಮೂಲಕ ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಬರಲಿದೆ. ಅವರೊಂದಿಗೆ ಒಟ್ಟು ಏಳು ಜನ ಕುಟುಂಬದ ಸದಸ್ಯರೂ ಇದ್ದಾರೆ. ಎಲ್ಲರೂ ಜತೆಯಾಗಿ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಪತ್ನಿ ಸುಜಾತ, ಮಗು ಹವಿಷ್, ಪ್ರೀತಂ ಚೆನ್ನವೀರಪ್ಪ ನರಸಿಂಹ, ಕೆ. ಜೆ. ಚಂದ್ರಶೇಖರ್, ಶ್ರೀಹರಿ ಪ್ರಸಾದ್ ಎನ್, ಎಂ. ದೀಪು, ಎಂ. ಎಸ್. ರಾಹುಲ್ ಅವರ ಕುಟುಂಬದ ಸದಸ್ಯರು.
ಮಂಜುನಾಥ್ ರಾವ್ ಅವರ ಮೃತದೇಹ ಬುಧವಾರ ಸಂಜೆ 6 ಗಂಟೆಗೆ ಶ್ರೀನಗರದಿಂದ ಹೊರಡಲಿದೆ. ಇಂಡಿಗೋ ಏರ್‌ಲೈನ್ಸ್‌ನ ವಿಮಾನ ಸಂಖ್ಯೆ 6E 3103, 6E 5269, ಮತ್ತು 6E 7731 ಮೂಲಕ ನವದೆಹಲಿ ಮತ್ತು ಬೆಂಗಳೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗಲಿದೆ. ಜತೆಗೆ ಪತ್ನಿ ಪಲ್ಲವಿ ಆರ್ ಹಾಗೂ ಪುತ್ರ ಅಭಿಜಯ ಇರುತ್ತಾರೆ.