
Pahalgam Terror Attack | ಮಾಜಿ ಸ್ಪೀಕರ್ ಕೆ. ಬಿ ಕೋಳಿವಾಡ ಸ್ನೇಹಿತನ ಸಾವು, ಇಬ್ಬರು ಕನ್ನಡಿಗರ ಹತ್ಯೆ, ಇಬ್ಬರಿಗೆ ಗಾಯ
ಘಟನೆಯಲ್ಲಿ ಒಟ್ಟು 26 ಮಂದಿ ಮೃತಪಟ್ಟಿದ್ದು ಪುಲ್ವಾಮ ದಾಳಿ ಬಳಿಕ ಅತ್ಯಂತ ದೊಡ್ಡ ದಾಳಿಯಾಗಿದೆ ಲಷ್ಕರ್-ಎ-ತೊಯ್ಬಾದ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ದಾಳಿಯ ಹೊಣೆ ಹೊತ್ತುಕೊಂಡಿದೆ. ಭರತ್ ಭೂಷಣ್ ಅವರ ವೈಯಕ್ತಿಕ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಜಮ್ಮು ಮತ್ತು ಕಾಶ್ಮೀರದ ಪಾಹಲ್ಗಾಮ್‌ನ ಬೈಸರಾನ್ ವ್ಯಾಲಿಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಒಟ್ಟು ಇಬ್ಬರು ಕನ್ನಡಿಗರು ಮೃತಪಟ್ಟಿದ್ದಾರೆ. ಹಾವೇರಿಯ ರಾಣೇಬೆನ್ನೂರಿನ ಭರತ್ ಭೂಷಣ್ ಮತ್ತು ಶಿವಮೊಗ್ಗದ ವಿಜಯನಗರದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಮೃತಪಟ್ಟವರು. ಅವರು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಸಂಬಂಧಿ
ಘಟನೆಯಲ್ಲಿ ಒಟ್ಟು 26 ಮಂದಿ ಮೃತಪಟ್ಟಿದ್ದು ಪುಲ್ವಾಮ ದಾಳಿ ಬಳಿಕ ಅತ್ಯಂತ ದೊಡ್ಡ ದಾಳಿಯಾಗಿದೆ ಲಷ್ಕರ್-ಎ-ತೊಯ್ಬಾದ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ದಾಳಿಯ ಹೊಣೆ ಹೊತ್ತುಕೊಂಡಿದೆ. ಭರತ್ ಭೂಷಣ್ ಅವರ ವೈಯಕ್ತಿಕ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಚಿಕ್ಕಮಗಳೂರಿನ ಕೊಪ್ಪದವರು
47 ವರ್ಷದ ಶಿವಮೊಗ್ಗದ ವಿಜಯನಗರ ನಿವಾಸಿ ಮಂಜುನಾಥ್ ರಿಯಲ್ ಎಸ್ಟೇಟ್ ಉದ್ಯಮಿ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದವರಾದ ಇವರು, ಪತ್ನಿ ಪಲ್ಲವಿ ಮತ್ತು ಮಗ ಅಭಿಜೇಯ ಜೊತೆ ಏಪ್ರಿಲ್ 19ರಂದು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ದಾಳಿಯಲ್ಲಿ ಮಂಜುನಾಥ್ ಮೃತಪಟ್ಟಿದ್ದು, ಪತ್ನಿ ಮತ್ತು ಮಗ ಸುರಕ್ಷಿತವಾಗಿದ್ದಾರೆ. ಆದರೆ, ಮಗನಿಗೆ ಸಣ್ಣ ಗಾಯಗಳಾಗಿವೆ ಎಂದು ಪೊಲೀಸರ ಪಟ್ಟಿಯಲ್ಲಿದೆ.
ಪಲ್ಲವಿ ಅವರು ಮಾತನಾಡುವ ವಿಡಿಯೊ ವೈರಲ್ ಆಗಿದ್ದು, ಉಗ್ರರು ಸಮೀಪದಿಂದಲೇ ತಮ್ಮ ಪತಿಯನ್ನು ಕೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಾನು ನಮ್ಮನ್ನೂ ಕೊಲ್ಲುವಂತೆ ಉಗ್ರರಿಗೆ ಕೋರಿಕೊಂಡೆವು.ಅದಕ್ಕೆ ಅವರು ನಿಮ್ಮನ್ನು ಕೊಲ್ಲುವುದಿಲ್ಲ. ಹೋಗಿ ಮೋದಿಗೆ ಹೇಳಿ ಎಂದಿದ್ದಾರೆ. ಅಲ್ಲದೆ, ಜಮ್ಮು- ಕಾಶ್ಮೀರಕ್ಕೆ ಬರುವುದು ನಮ್ಮ ಪತಿಯ ಆಸೆಯಾಗಿತ್ತು. ಯಾವ ಕರ್ಮಕ್ಕೆ ಇಲ್ಲಿಗೆ ಬಂದಿದ್ದೇನೋ ಎಂದು ಟಿವಿ೯ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಅದೇ ರೀತಿ ಕರ್ನಾಟಕ ಮೂಲದ ಶಶಿ ಕುಮಾರಿ ನಾಯಕ್ ಎಂಬುವರೂ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅವರಿಗೆ ಮೂಳೆ ಮುರಿತವಾಗಿದೆ ಎಂಬುದಾಗಿ ಪೊಲೀಸರ ದಾಖಲೆಯಲ್ಲಿದೆ.
ಸರ್ಕಾರದ ಕ್ರಮ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಮೊಗ್ಗದ ಮಂಜುನಾಥ್ ರಾವ್ ಅವರ ಮೃತದೇಹವನ್ನು ತರಲು ಮತ್ತು ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ಪೊಲೀಸ್ ತಂಡವನ್ನು ಕಳುಹಿಸಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಮೃತದೇಹವನ್ನು ಬೆಟ್ಟದಿಂದ ಕೆಳಗೆ ತರಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ವಹಿಸಿಕೊಂಡಿದ್ದು, ಏಪ್ರಿಲ್ 23ರಂದು ಸ್ಥಳಕ್ಕೆ ಭೇಟಿ ನೀಡಲಿದೆ.