Yellow Line Boosts ‘Namma Metro’: Ridership Crosses 10 Lakh, Sets Historic Record
x

ಯೆಲ್ಲೋ ಲೈನ್‌ ಮೆಟ್ರೋ ರೈಲು ಹತ್ತಲು ಕಾಯುತ್ತಿರುವ ಪ್ರಯಾಣಿಕರು.

ಹಳದಿ ಮೆಟ್ರೋ ಪ್ರಯಾಣಿಕರಿಗೆ ಅನವಶ್ಯಕ 'ದಂಡ'ದ ಬರೆ: 25 ನಿಮಿಷ ಕಾದರೆ ಪ್ರಯಾಣ, ಹೊರ ನಡೆದರೆ ಫೈನ್​

ಹಳದಿ ಮಾರ್ಗ ಮೆಟ್ರೋದಲ್ಲಿ ಪ್ರಯಾಣಿಸಲು ಬಂದಿದ್ದ ವ್ಯಕ್ತಿಯೋರ್ವನಿಗೆ ದಂಡದ ಅನುಭವವಾಗಿದ್ದು, 20 ನಿಮಿಷಕ್ಕಿಂತ ಹೆಚ್ಚು ಸಮಯ ಕಾದಿದ್ದಕ್ಕೆ 50 ರೂ. ದಂಡ ಪಾವತಿಸಲಾಗಿದೆ.


ನಗರದ ಐಟಿ ಕೇಂದ್ರವನ್ನು ಸಂಪರ್ಕಿಸುವ, ಬಹುನಿರೀಕ್ಷಿತ 'ಹಳದಿ ಮಾರ್ಗ'ದ ಮೆಟ್ರೋ ಇತ್ತೀಚೆಗೆ ಕಾರ್ಯಾಚರಣೆ ಆರಂಭಿಸಿದೆ. ಆದರೆ, ಕಡಿಮೆ ಸಂಖ್ಯೆಯ ರೈಲುಗಳು ಮತ್ತು 25 ನಿಮಿಷಗಳ ಸುದೀರ್ಘ ಕಾಯುವಿಕೆಯಿಂದಾಗಿ, ಈ ಮಾರ್ಗವು ಮೊದಲ ವಾರದಲ್ಲೇ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ರೈಲು ತಪ್ಪಿಸಿಕೊಂಡರೆ, ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಕಳೆದಿದ್ದಕ್ಕೆ ದಂಡ ಪಾವತಿಸಬೇಕಾದ ವಿಚಿತ್ರ ಸನ್ನಿವೇಶ ನಿರ್ಮಾಣವಾಗಿದೆ.

ಹಳದಿ ಮಾರ್ಗ ಉದ್ಘಾಟನೆಯಾದ ಎರಡನೇ ದಿನವೇ ಐಟಿ ಉದ್ಯೋಗಿ ರಮೇಶ್ ಅವರಿಗೆ ಈ ದಂಡದ ಬಿಸಿ ತಟ್ಟಿದೆ. ಸಿಲ್ಕ್ ಬೋರ್ಡ್ನಿಂದ ಆರ್.ವಿ. ರಸ್ತೆಗೆ ಹೋಗಲು ಟಿಕೆಟ್ ಖರೀದಿಸಿದ್ದ ಅವರು, ನಿಲ್ದಾಣದಲ್ಲಿದ್ದ ಜನದಟ್ಟಣೆಯಿಂದಾಗಿ ರೈಲು ಹತ್ತಲು ಸಾಧ್ಯವಾಗಲಿಲ್ಲ. ಮುಂದಿನ ರೈಲು ಬರಲು 25 ನಿಮಿಷ ಬೇಕು ಎಂದು ತಿಳಿದು ನಿಲ್ದಾಣದಿಂದ ಹೊರಹೋಗಲು ಮುಂದಾದಾಗ, ಬಿಎಂಆರ್​ಸಿಎಲ್​ ಸಿಬ್ಬಂದಿ ಅವರನ್ನು ತಡೆದು, 'ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ನಿಲ್ದಾಣದಲ್ಲಿದ್ದೀರಿ' ಎಂದು 50 ರೂಪಾಯಿ ದಂಡ ವಿಧಿಸಿದ್ದಾರೆ.

ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಐಟಿ ಉದ್ಯೋಗಿ ರಮೇಶ್, "ಜನದಟ್ಟಣೆಯಿಂದಾಗಿ ರೈಲು ಹತ್ತಲು ಸಾಧ್ಯವಾಗಲಿಲ್ಲ. ಮುಂದಿನ ರೈಲಿಗೆ 25 ನಿಮಿಷ ಕಾಯಬೇಕು ಎಂದು ತಿಳಿದು ಹೊರಗೆ ಹೋಗಲು ನಿರ್ಧರಿಸಿದರೆ, ಅದಕ್ಕೆ ದಂಡ ಹಾಕುವುದು ಯಾವ ನ್ಯಾಯ? ಹಸಿರು ಮತ್ತು ನೇರಳೆ ಮಾರ್ಗದಲ್ಲಿ 5 ನಿಮಿಷಕ್ಕೊಮ್ಮೆ ರೈಲಿದೆ, ಅಲ್ಲಿ ಈ ನಿಯಮ ಸರಿ. ಆದರೆ ಇಲ್ಲಿ ಒಂದು ರೈಲು ತಪ್ಪಿದರೆ ಮುಂದಿನದಕ್ಕೆ 25 ನಿಮಿಷ ಕಾಯಬೇಕು. ಇದು ನಮ್ಮ ತಪ್ಪಲ್ಲ, ಕಡಿಮೆ ರೈಲು ಓಡಿಸುತ್ತಿರುವ ಮೆಟ್ರೋ ಸಂಸ್ಥೆಯ ತಪ್ಪು. ರೈಲುಗಳ ಸಂಖ್ಯೆ ಹೆಚ್ಚಾಗುವವರೆಗೂ ಬಸ್ನಲ್ಲೇ ಪ್ರಯಾಣಿಸುವುದು ಉತ್ತಮ" ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ.

ಸಮಸ್ಯೆ ಮೂಲವೇನು?

ಹಳದಿ ಮಾರ್ಗದಲ್ಲಿ ಸದ್ಯ ಕೇವಲ ಮೂರು ರೈಲುಗಳು ಮಾತ್ರ ಸಂಚರಿಸುತ್ತಿರುವುದರಿಂದ, ರೈಲುಗಳ ನಡುವಿನ ಕಾಯುವಿಕೆಯ ಸಮಯ 25 ನಿಮಿಷಗಳಷ್ಟಿದೆ. ರೈಲುಗಳ ಸಂಖ್ಯೆ ಕಡಿಮೆ ಇರುವುದು ಸಂಸ್ಥೆಯ ಆಡಳಿತಾತ್ಮಕ ಸಮಸ್ಯೆ, ಅದರ ಹೊರೆಯನ್ನು ಪ್ರಯಾಣಿಕರ ಮೇಲೆ ಹಾಕುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆದರೆ, ಈ ಗೊಂದಲದ ಬಗ್ಗೆ ಮೆಟ್ರೋ ಸಂಸ್ಥೆಯು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Read More
Next Story