ಮುಂದುವರಿದ ಮಳೆ ಅಬ್ಬರ | ರಾಜ್ಯದ ಪ್ರಮುಖ 14 ಜಲಾಶಯಗಳ ಪೈಕಿ 8 ಬಹುತೇಕ ಭರ್ತಿ
ರಾಜ್ಯದಲ್ಲಿ ಈ ಬಾರಿ ಮುಂಗಾರು ಅಬ್ಬರಿಸುತ್ತಿದೆ. ಹಾಗಾಗಿ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ರಾಜ್ಯದ ಪ್ರಮುಖ 14 ಜಲಾಶಯಗಳ ಪೈಕಿ 8 ಜಲಾಶಯಗಳು ಜುಲೈ ಮೂರನೇ ವಾರದ ಹೊತ್ತಿಗೇ ಬಹುತೇಕ ಭರ್ತಿಯಾಗಿವೆ. ಕೆಲವು ಜಲಾಶಯದ ಅಚ್ಚುಕಟ್ಟು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ, ಕೆಆರ್‌ಎಸ್, ಹಾರಂಗಿ, ಘಟಪ್ರಭಾ ಜಲಾಶಯಗಳು ಭರ್ತಿಯಾಗಿವೆ. ಹೆಚ್ಚುವರಿ ನೀರನ್ನು ಹೊರ ಹರಿಸಲಾಗುತ್ತಿದೆ.
ರಾಜ್ಯದ ಪ್ರಮುಖ 14 ಜಲಾಶಯಗಳ ನೀರಿನ ಮಟ್ಟದ ವಿವರವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಪ್ರಕಟಿಸಿದ್ದು, ತುಂಗಭದ್ರಾ, ಕೆಆರ್‌ಎಸ್, ಹಾರಂಗಿ, ಘಟಪ್ರಭಾ ಮತ್ತು ಇತರೆ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ.
ಜಲಾಶಯಗಳ ನೀರಿನ ಮಟ್ಟ
ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ 519.60ಮೀ ಇದ್ದು, ಒಟ್ಟು ಸಾಮರ್ಥ್ಯ 123.08 ಟಿಎಂಸಿ. ಇಂದಿನ ನೀರಿನ ಮಟ್ಟ 83.49ಟಿಎಂಸಿ ಇದ್ದು, ಕಳೆದ ವರ್ಷ 82.49ಟಿಎಂಸಿ ಇತ್ತು. ನೀರಿನ ಒಳಹರಿವು 2,04,098ಕ್ಯೂಸೆಕ್ ಮತ್ತು ಹೊರಹರಿವು 2,66,586ಕ್ಯೂಸೆಕ್ ಇದೆ.
ತುಂಗಭದ್ರಾ ಜಲಾಶಯ ಗರಿಷ್ಠ ನೀರಿನ ಮಟ್ಟ 497.71ಮೀ ಇದ್ದು, ಒಟ್ಟು ಸಾಮರ್ಥ್ಯ 105.79ಟಿಎಂಸಿ. ಇಂದಿನ ನೀರಿನ ಮಟ್ಟ 101.73ಟಿಎಂಸಿ ಇದ್ದು, ಕಳೆದ ವರ್ಷ 40.14ಟಿಎಂಸಿ ಇತ್ತು. ನೀರಿನ ಒಳಹರಿವು 87,766ಕ್ಯೂಸೆಕ್ ಮತ್ತು ಹೊರಹರಿವು 84,149ಕ್ಯೂಸೆಕ್ ಇದೆ.
ಮಲಪ್ರಭಾ ಜಲಾಶಯದ ಗರಿಷ್ಠ ನೀರಿನ ಮಟ್ಟ 633.80ಮೀ ಇದ್ದು, ಒಟ್ಟು ಸಾಮರ್ಥ್ಯ 37.73 ಟಿಎಂಸಿ. ಇಂದಿನ ನೀರಿನ ಮಟ್ಟ 25.46ಟಿಎಂಸಿ ಇದ್ದು, ಕಳೆದ ವರ್ಷ 15.77ಟಿಎಂಸಿ ಇತ್ತು. ನೀರಿನ ಒಳಹರಿವು 21,606ಕ್ಯೂಸೆಕ್ ಮತ್ತು ಹೊರಹರಿವು 194ಕ್ಯೂಸೆಕ್ ಇದೆ.
ಕೆ.ಆರ್.ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 38.04ಮೀ ಇದ್ದು, ಒಟ್ಟು ಸಾಮರ್ಥ್ಯ 49.45 ಟಿಎಂಸಿ. ಇಂದಿನ ನೀರಿನ ಮಟ್ಟ48.82ಟಿಎಂಸಿ ಇದ್ದು, ಕಳೆದ ವರ್ಷ 26.81ಟಿಎಂಸಿ ಇತ್ತು. ನೀರಿನ ಒಳಹರಿವು 66,945ಕ್ಯೂಸೆಕ್ ಮತ್ತು ಹೊರಹರಿವು 74,021ಕ್ಯೂಸೆಕ್ ಇದೆ.
ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಮಟ್ಟ 554.44ಮೀ ಇದ್ದು, ಒಟ್ಟು ಸಾಮರ್ಥ್ಯ 151.75 ಟಿಎಂಸಿ. ಇಂದಿನ ನೀರಿನ ಮಟ್ಟ 108.40ಟಿಎಂಸಿ ಇದ್ದು, ಕಳೆದ ವರ್ಷ 58.63ಟಿಎಂಸಿ ಇತ್ತು. ನೀರಿನ ಒಳಹರಿವು 65,167ಕ್ಯೂಸೆಕ್ ಮತ್ತು ಹೊರಹರಿವು 1,853ಕ್ಯೂಸೆಕ್ ಇದೆ.
ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟ 696.13ಮೀ ಇದ್ದು, ಒಟ್ಟು ಸಾಮರ್ಥ್ಯ 19.52 ಟಿಎಂಸಿ. ಇಂದಿನ ನೀರಿನ ಮಟ್ಟ 18.41ಟಿಎಂಸಿ ಇದ್ದು, ಕಳೆದ ವರ್ಷ 18.16ಟಿಎಂಸಿ ಇತ್ತು. ನೀರಿನ ಒಳಹರಿವು 19,729ಕ್ಯೂಸೆಕ್ ಮತ್ತು ಹೊರಹರಿವು 19,250 ಕ್ಯೂಸೆಕ್ ಇದೆ.
ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 657.73ಮೀ ಇದ್ದು, ಒಟ್ಟು ಸಾಮರ್ಥ್ಯ 71.54 ಟಿಎಂಸಿ. ಇಂದಿನ ನೀರಿನ ಮಟ್ಟ 57.54ಟಿಎಂಸಿ ಇದ್ದು, ಕಳೆದ ವರ್ಷ 38.65ಟಿಎಂಸಿ ಇತ್ತು. ನೀರಿನ ಒಳಹರಿವು 35,318ಕ್ಯೂಸೆಕ್ ಮತ್ತು ಹೊರಹರಿವು 202 ಕ್ಯೂಸೆಕ್ ಇದೆ.
ಘಟಪ್ರಭಾ ಜಲಾಶಯದ ಗರಿಷ್ಠ ನೀರಿನ ಮಟ್ಟ 662.91ಮೀ ಇದ್ದು, ಒಟ್ಟು ಸಾಮರ್ಥ್ಯ 51.00 ಟಿಎಂಸಿ. ಇಂದಿನ ನೀರಿನ ಮಟ್ಟ 46.30ಟಿಎಂಸಿ ಇದ್ದು, ಕಳೆದ ವರ್ಷ 26.50ಟಿಎಂಸಿ ಇತ್ತು. ನೀರಿನ ಒಳಹರಿವು 33,385ಕ್ಯೂಸೆಕ್ ಮತ್ತು ಹೊರಹರಿವು 26,900ಕ್ಯೂಸೆಕ್ ಇದೆ.
ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 890.58ಮೀ ಇದ್ದು, ಒಟ್ಟು ಸಾಮರ್ಥ್ಯ 37.10 ಟಿಎಂಸಿ. ಇಂದಿನ ನೀರಿನ ಮಟ್ಟ 35.22ಟಿಎಂಸಿ ಇದ್ದು, ಕಳೆದ ವರ್ಷ 25.94ಟಿಎಂಸಿ ಇತ್ತು. ನೀರಿನ ಒಳಹರಿವು 52,999ಕ್ಯೂಸೆಕ್ ಮತ್ತು ಹೊರಹರಿವು 63,580ಕ್ಯೂಸೆಕ್ ಇದೆ.
ವರಾಹಿ ಜಲಾಶಯದ ಗರಿಷ್ಠ ನೀರಿನ ಮಟ್ಟ 594.36ಮೀ ಇದ್ದು, ಒಟ್ಟು ಸಾಮರ್ಥ್ಯ 31.10 ಟಿಎಂಸಿ. ಇಂದಿನ ನೀರಿನ ಮಟ್ಟ 14.66ಟಿಎಂಸಿ ಇದ್ದು, ಕಳೆದ ವರ್ಷ 9.16ಟಿಎಂಸಿ ಇತ್ತು. ನೀರಿನ ಒಳಹರಿವು 7,537ಕ್ಯೂಸೆಕ್ ಮತ್ತು ಹೊರಹರಿವು ಇಲ್ಲ.
ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 871.38ಮೀ ಇದ್ದು, ಒಟ್ಟು ಸಾಮರ್ಥ್ಯ 8.50 ಟಿಎಂಸಿ. ಇಂದಿನ ನೀರಿನ ಮಟ್ಟ 7.44ಟಿಎಂಸಿ ಇದ್ದು, ಕಳೆದ ವರ್ಷ 6.61ಟಿಎಂಸಿ ಇತ್ತು. ನೀರಿನ ಒಳಹರಿವು 9,288ಕ್ಯೂಸೆಕ್ ಮತ್ತು ಹೊರಹರಿವು 13,916ಕ್ಯೂಸೆಕ್ ಇದೆ.
ಸೂಫಾ ಜಲಾಶಯದ ಗರಿಷ್ಠ ನೀರಿನ ಮಟ್ಟ 564.00ಮೀ ಇದ್ದು, ಒಟ್ಟು ಸಾಮರ್ಥ್ಯ 145.33 ಟಿಎಂಸಿ. ಇಂದಿನ ನೀರಿನ ಮಟ್ಟ 86.89ಟಿಎಂಸಿ ಇದ್ದು, ಕಳೆದ ವರ್ಷ 64.78ಟಿಎಂಸಿ ಇತ್ತು. ನೀರಿನ ಒಳಹರಿವು 35,786ಕ್ಯೂಸೆಕ್ ಮತ್ತು ಹೊರಹರಿವು ಇಲ್ಲ.
ನಾರಾಯಣಪುರ ಜಲಾಶಯದ ಗರಿಷ್ಠ ನೀರಿನ ಮಟ್ಟ 492.25ಮೀ ಇದ್ದು, ಒಟ್ಟು ಸಾಮರ್ಥ್ಯ 33.31 ಟಿಎಂಸಿ. ಇಂದಿನ ನೀರಿನ ಮಟ್ಟ 26.86ಟಿಎಂಸಿ ಇದ್ದು, ಕಳೆದ ವರ್ಷ 82.51ಟಿಎಂಸಿ ಇತ್ತು. ನೀರಿನ ಒಳಹರಿವು 2,04,098ಕ್ಯೂಸೆಕ್ ಮತ್ತು ಹೊರಹರಿವು 2,66,586ಕ್ಯೂಸೆಕ್ ಇದೆ.
ವಾಣಿವಿಲಾಸ ಸಾಗರದ ಗರಿಷ್ಠ ನೀರಿನ ಮಟ್ಟ 652.24ಮೀ ಇದ್ದು, ಒಟ್ಟು ಸಾಮರ್ಥ್ಯ 30.42 ಟಿಎಂಸಿ. ಇಂದಿನ ನೀರಿನ ಮಟ್ಟ17.89ಟಿಎಂಸಿ ಇದ್ದು, ಕಳೆದ ವರ್ಷ 24.80ಟಿಎಂಸಿ ಇತ್ತು. ನೀರಿನ ಒಳಹರಿವು ಇಲ್ಲ ಮತ್ತು ಹೊರಹರಿವು 147ಕ್ಯೂಸೆಕ್ಸ್ ಇದೆ.