ಸರ್ಕಾರಿ ವಕೀಲರ ನೇಮಕದಲ್ಲಿ ಪರಿಶಿಷ್ಟರಿಗೆ ಶೇ. 24 ಮೀಸಲಾತಿ; ಸರ್ಕಾರದ ಆದೇಶ
x

ಸರ್ಕಾರಿ ವಕೀಲರ ನೇಮಕದಲ್ಲಿ ಪರಿಶಿಷ್ಟರಿಗೆ ಶೇ. 24 ಮೀಸಲಾತಿ; ಸರ್ಕಾರದ ಆದೇಶ

ಪರಿಶಿಷ್ಟ ಜಾತಿಗಳಿಗೆ ಶೇ 17 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ 7 ರಷ್ಟು ಮೀಸಲಾತಿ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಕಲಾವತಿ ಎಸ್‌.ವಿ. ಆದೇಶ ಹೊರಡಿಸಿದ್ದಾರೆ.


ಸರ್ಕಾರಿ ವಕೀಲರ ನೇಮಕ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಕೀಲರ ನೇಮಕಾತಿಗೆ ಶೇ. 24 ರಷ್ಟು ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಪರಿಶಿಷ್ಟ ಜಾತಿಗಳಿಗೆ ಶೇ 17 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ. 7 ರಷ್ಟು ಮೀಸಲಾತಿ ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಕಲಾವತಿ ಎಸ್‌.ವಿ. ಆದೇಶ ಹೊರಡಿಸಿದ್ದಾರೆ.

2023 ಜೂನ್‌ 1 ರಂದು ಸಮಾಜ ಕಲ್ಯಾಣ ಇಲಾಖೆ ಸಚಿವರ ಅಧ್ಯಕ್ಷತೆಯಲಿ ನಡೆದ ಸಮಾಜ ಕಲ್ಯಾಣ ಇಲಾಖೆ ಹಾಗೂ ನಿಗಮದ ಅಧಿಕಾರಿಗಳ ಸಭೆಯಲ್ಲಿ ಈ ಸಂಬಂಧ ಕಾನೂನು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಲಾಗಿತ್ತು.

ಅದರಂತೆ ಕಾನೂನು ಇಲಾಖೆಯ ಟಿಪ್ಪಣಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇ 17 ಹಾಗೂ ಪರಿಶಿಷ್ಟ ಪಂಗಡದ ವಕೀಲರಿಗೆ ಶೇ 7 ರಷ್ಟು ಮೀಸಲಾತಿ ಸೇರಿ ಒಟ್ಟು ಶೇ 24 ರಷ್ಟು ಮೀಸಲಾತಿ ಕಲ್ಪಿಸಬಹುದು ಎಂದು 2024 ಅ.22 ರಂದು ಅಭಿಪ್ರಾಯ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಶೇ 24 ರಷ್ಟು ಮೀಸಲಾತಯಿ ಕಲ್ಪಿಸಿ ಆದೇಶಿಸಲಾಗಿದೆ.

ಇನ್ನು ಮುಂದೆ ಸರ್ಕಾರಿ ಅಭಿಯೋಜಕರ ನೇಮಕಾತಿ ಸಂದರ್ಭಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ನೇಮಕಾತಿ ಈ ಮೀಸಲಾತಿ ಅನುಕೂಲ ಮಾಡಿಕೊಡಲಿದೆ.

Read More
Next Story