ʻಚೊಂಬುʼ ಜಾಹೀರಾತು: ಕಾಂಗ್ರೆಸ್ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು
x
ಚೊಂಬು ಜಾಹೀರಾತು

ʻಚೊಂಬುʼ ಜಾಹೀರಾತು: ಕಾಂಗ್ರೆಸ್ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು

ಬಿಜೆಪಿಯ ವಿರುದ್ಧ ಕಾಂಗ್ರೆಸ್‌ ಸುಳ್ಳು ಜಾಹೀರಾತುಗಳನ್ನು ನೀಡುತ್ತಿದ್ದು, ಇದಕ್ಕೆ ತಡೆ ನೀಡಬೇಕು. ಕಾಂಗ್ರೆಸ್‌ ಮತ್ತೆ ಸುಳ್ಳು ಜಾಹೀರಾತು ನೀಡಲು ಪ್ರಾರಂಭಿಸಿದೆ ಎಂದು ಬಿಜೆಪಿ ದೂರಿದೆ.


ʻಕಾಂಗ್ರೆಸ್ ಪಕ್ಷವು, ಬಿಜೆಪಿಯ ಬಗ್ಗೆ ಸುಳ್ಳು ಹಾಗೂ ಅವಹೇಳನಕಾರಿ ಜಾಹೀರಾತು ನೀಡಿದೆʼ ಎಂದು ಬಿಜೆಪಿ ಆರೋಪಿಸಿದ್ದು, ಕೆಪಿಸಿಸಿ ಮತ್ತು ಡಿ.ಕೆ.ಶಿವಕುಮಾರ್ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ʻಕಾಂಗ್ರೆಸ್ ಪಕ್ಷ ಚೊಂಬು ಹೆಸರಿನಲ್ಲಿ ಜಾಹೀರಾತು ನೀಡಿದ್ದು, ಈ ಜಾಹೀರಾತು ಸುಳ್ಳು ಮಾಹಿತಿಗಳಿಂದ ಕೂಡಿದೆ. ಕಾಂಗ್ರೆಸ್ ಮತ್ತೆ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿದೆ. ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಇದೇ ರೀತಿಯ ಜಾಹೀರಾತು ನೀಡಿತ್ತು. ಆ ಪ್ರಕರಣ ಇನ್ನೂ ಹೈಕೋರ್ಟ್‌ನಲ್ಲಿ ಬಾಕಿ ಇದೆ. ಈಗ ನೀಡಿರುವ ಜಾಹೀರಾತು ಮಾನಹಾನಿಕಾರʼ ಎಂದು ಬಿಜೆಪಿ ದೂರಿದೆ.

ʻವಂಚಿಸಲಾಗಿದೆ ಅಥವಾ ಮೋಸ ಮಾಡಲಾಗಿದೆ ಎನ್ನುವುದಕ್ಕೆ ಕರ್ನಾಟಕದ ಆಡು ಮಾತಿನಲ್ಲಿ ಚೊಂಬು ಪದ ಬಳಸಲಾಗುತ್ತದೆ. ಕಾಂಗ್ರೆಸ್ ಪಕ್ಷ ಸುಳ್ಳು ಮಾಹಿತಿಯ ಜಾಹೀರಾತು ನೀಡುವುದನ್ನು ತಡೆಯಬೇಕು. ಅಲ್ಲದೇ ಕಾಂಗ್ರೆಸ್ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕುʼ ಎಂದು ಒತ್ತಾಯಿಸಿದೆ.

ʻಈ ರೀತಿ ಅವಹೇಳನಕಾರಿ ಜಾಹೀರಾತು ನೀಡಿರುವ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸುವಂತೆ ಬೇಕುʼ ಎಂದು ಬಿಜೆಪಿ ಆಗ್ರಹಿಸಿದೆ.

Read More
Next Story