Operation Sindoor |ಪಾಕ್‌ ಉಗ್ರರ ದಾಳಿ ಭೀತಿ; ಜಲಾಶಯ, ಬಂದರು, ಬೃಹತ್‌ ಕೈಗಾರಿಕೆಗಳಿಗೆ ಭದ್ರತೆ ಹೆಚ್ಚಳ
x

ಬಂದರು, ಜಲಾಶಯ ಹಾಗೂ ಕೈಗಾರಿಕೆ

Operation Sindoor |ಪಾಕ್‌ ಉಗ್ರರ ದಾಳಿ ಭೀತಿ; ಜಲಾಶಯ, ಬಂದರು, ಬೃಹತ್‌ ಕೈಗಾರಿಕೆಗಳಿಗೆ ಭದ್ರತೆ ಹೆಚ್ಚಳ

ಕಾರವಾರದ ಕೈಗಾ ಅಣುಸ್ಥಾವರ, ಐಎನ್ಎಸ್ ಕದಂಬ ನೌಕಾನೆಲೆಗೆ ಭದ್ರತೆ ಬಿಗಿಗೊಳಿಸಲಾಗಿದೆ.ಮೀನುಗಾರಿಕಾ ದೋಣಿಗಳಲ್ಲಿ ಅಪರಿಚಿತರು ನುಸುಳಿ ಬರುವ ಸಾಧ್ಯತೆ ಇದ್ದು, ಕರಾವಳಿ ಕಾವಲು ಪಡೆ ಎಚ್ಚರಿಕೆ ನೀಡಿದೆ.


ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ʼಆಪರೇಷನ್ ಸಿಂಧೂರ್ʼ ಹೆಸರಿನಲ್ಲಿ ಭಾರತೀಯ ಸೇನೆ ವಾಯುದಾಳಿ ನಡೆಸಿದ ಬಳಿಕ ಉಭಯ ದೇಶಗಳ ಮಧ್ಯೆ ಪರಿಸ್ಥಿತಿ ಉದ್ವಿಗ್ನವಾಗಿದೆ.

ಪಾಕಿಸ್ತಾನದಿಂದ ಪ್ರತೀಕಾರದ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದೇ ರೀತಿ ಕರ್ನಾಟಕದ ಬಂದರು, ಜಲಾಶಯಗಳ ಬಳಿ ಭದ್ರತೆ ಹೆಚ್ಚಿಸಲಾಗಿದೆ.

ಕಾರವಾರ ಬಂದರಿಗೆ ಪಾಕಿಸ್ತಾನದ ಯಾವುದೇ ಹಡಗು ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸಿಂಗಪುರ,ಮಲೇಷ್ಯಾ ಅಥವಾ ಯಾವುದೇ ದೇಶದ ಹಡಗಿನಲ್ಲಿ ಪಾಕಿಸ್ತಾನಿಯರು ಬಂದರು ಹಡಗಿನಿಂದ ಕೆಳಗಿಳಿಯದಂತೆ ಸೂಚಿಸಲಾಗಿದೆ.

ಕಾರವಾರದ ಕೈಗಾ ಅಣುಸ್ಥಾವರ, ಐಎನ್ಎಸ್ ಕದಂಬ ನೌಕಾನೆಲೆಗೆ ಭದ್ರತೆ ಬಿಗಿಗೊಳಿಸಲಾಗಿದೆ.ಮೀನುಗಾರಿಕಾ ದೋಣಿಗಳಲ್ಲಿ ಅಪರಿಚಿತರು ನುಸುಳಿ ಬರುವ ಸಾಧ್ಯತೆ ಇದ್ದು, ಕರಾವಳಿ ಕಾವಲು ಪಡೆ ಎಚ್ಚರಿಕೆ ನೀಡಿದೆ.

“ಪಾಕಿಸ್ತಾನಿಯರು ಯಾವುದೇ ದೇಶದ ಹಡಗಿನಲ್ಲಿ ಬಂದರೂ ಅವರಿಗೆ ಹಡಗಿನಿಂದ ಕೆಳಕ್ಕಿಳಿಯಲು ಅವಕಾಶ ಇಲ್ಲ. ಪಾಕ್ ಹಡಗುಗಳಿಗೆ ಬಂದರು ಪ್ರವೇಶ ನೀಡುವುದಿಲ್ಲ ಎಂದು ಕಾರವಾರ ಬಂದರು ಅಧಿಕಾರಿ ರಾಜಕುಮಾರ ಹೆಡೆ ತಿಳಿಸಿದ್ದಾರೆ.

ಜಲಾಶಯಗಳಿಗೂ ಭಾರೀ ಭದ್ರತೆ

ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧ ಭೀತಿ ಹೆಚ್ಚಿರುವ ಕಾರಣ ರಾಜ್ಯದ ಎಲ್ಲಾ ಜಲಾಶಯಗಳಿಗೆ ಭದ್ರತೆ ಒದಗಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದೇನೆ. ಬೃಹತ್ ಕೈಗಾರಿಕೆ, ಜಲಾಶಯಗಳಿಗೆ ಭದ್ರತೆ ಕೊಡುವುದು ಮುಖ್ಯ. ಉಗ್ರರು ಸ್ಥಾವರ, ಜಲಾಶಯಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುತ್ತದೆ. ಇವುಗಳ ಸುರಕ್ಷತೆಗಾಗಿ ಜಲಾಶ ಭದ್ರತಾ ಪಡೆ ಇರುತ್ತದೆ. ಕೇಂದ್ರ ಸರ್ಕಾರದ ಗುಪ್ತಚರ ಮಾಹಿತಿ ಮೇರೆಗೆ ಜಲಾಶಯಗಳಿಗೆ ಹೆಚ್ಚಿನ ಭದ್ರತೆ ಕೊಡಬೇಕಿದೆ. ಈ ಸಂಬಂಧ ಜಲಸಂಪನ್ಮೂಲ ಇಲಾಖೆ, ಗೃಹ ಇಲಾಖೆ ಕ್ರಮ ಕೈಗೊಳ್ಳಲಿವೆ ಎಂದು ಹೇಳಿದ್ದಾರೆ.

ʼಆಪರೇಷನ್ ಸಿಂಧೂರʼ ಬಳಿಕ ಬೃಹತ್ ಕೈಗಾರಿಕೆಗಳು ಹಾಗು ವಿದ್ಯುತ್ ಸ್ಥಾವರಗಳಿಗೆ ಉಗ್ರರ ದಾಳಿ ಭೀತಿ ಎದುರಾಗಿದೆ. ಉಗ್ರರು ಯಾವುದೇ ಸ್ಥಳಗಳ ಮೇಲೆ ದಾಳಿ ನಡೆಸಬಹುದು. ಹಾಗಾಗಿ ರಾಜ್ಯದಲ್ಲಿ ಎಲ್ಲ ರೀತಿಯ ಸುರಕ್ಷತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತಕ್ಕೆ ಸಾಮರ್ಥ್ಯ ಇದೆ. ಎಲ್ಲದಕ್ಕೂ ನಾವು ಸನ್ನದ್ದರಾಗಿದ್ದೇವೆ. ದೇಶ ಮೊದಲು, ಪಕ್ಷ, ರಾಜಕಾರಣ ನಂತರ. ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ನಾವು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ ಎಂದು ಹೆಳಿದ್ದಾರೆ.

ಕಾಶ್ಮೀರದ ಗಡಿಯಲ್ಲಿ ಭಾರತೀಯ ನಾಗರೀಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಶೆಲ್ ದಾಳಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಜಲಾಶಯ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

Read More
Next Story