Job Fair 26,27ಕ್ಕೆ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ: ಫೇಲಾಗಿದ್ರೂ ಬನ್ನಿ..!
ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ | ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಗೆ ಸರ್ಕಾರದ ಪ್ಲಾನ್
ರಾಜ್ಯ ಸರ್ಕಾರವು ಉದ್ಯೋಗ ಹುಡುಕುತ್ತಿರುವ ಯುವಕ ಮತ್ತು ಯುವತಿಯರಿಗೆ ಬಿಗ್ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಹಾಗೂ ಉದ್ಯೋಗ ಅವಕಾಶ ನೀಡುವ ಸಂಸ್ಥೆಗಳನ್ನು ಒಂದೇ ಸೂರಿನಡಿ ತರಲಾಗಿದೆ.
ಇದಕ್ಕಾಗಿ ಇದೇ 26 ಮತ್ತು 27ರಂದು ಪ್ಯಾಡಕ್ ಮೈದಾನ ಬೆಂಗಳೂರಿನ ಅರಮನೆ ಹಿಂಭಾಗದಲ್ಲಿ ರಾಜ್ಯ ಮಟ್ಟದ ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ -2024 ನಡೆಯಲಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಮಗದಿಂದ ಈ ಬೃಹತ್ ಮೇಳ ಆಯೋಜಿಸಲಾಗಿದೆ.
ವಿಶೇಷವೆಂದರೆ ಈ ಮೇಳಕ್ಕೆ ಯಾವುದೇ ವಿದ್ಯಾಹರ್ತೆಯನ್ನು ಹೊಂದಿದ್ದು, ಉದ್ಯೋಗ ಹುಡುಕುತ್ತಿರುವವರು ಭಾಗವಹಿಸಬಹುದು.
ಯಾವುದೇ ಪದವಿ ಅಥವಾ ಕೋರ್ಸ್‌ನಲ್ಲಿ ಅನುತ್ತೀರ್ಣರಾದವರೂ ಸಹ ಭಾಗವಹಿಸಬಹುದಾಗಿದೆ.
ಉದ್ಯೋಗ ಹುಡುಕುತ್ತಿರುವವರು ಏನು ಮಾಡಬೇಕು ?
ಉದ್ಯೋಗ ಹುಡುಕುತ್ತಿರುವವರು ಸರಳವಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಲಿಂಕ್ ಒಂದನ್ನು ಸರ್ಕಾರ ಸೃಷ್ಟಿಸಿದೆ.
ಮೊದಲಿಗೆ https://skillconnect.kaushalkar.com ಲಿಂಕ್‌ಗೆ ಭೇಟಿ ನೀಡಿ. ನಂತರ ಎರಡನೇ ಹಂತದಲ್ಲಿ
* ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ
* ಉದ್ಯೋಗ ಮೇಳದ ಮೇಲೆ ಕ್ಲಿಕ್ ಮಾಡಿ
* ನಂತರ ಅಭ್ಯರ್ಥಿ ನೋಂದಣಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿ
ಇದೇ ಸಂದರ್ಭದಲ್ಲಿ ಉದ್ಯೋಗದಾತರಿಗೂ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ..
ಉದ್ಯೋಗದಾತರು ನೋಂದಣಿಯಾಗಲು ಮೊದಲು https://skillconnect.kaushalkar.com ಗೆ ಭೇಟಿ ನೀಡಬೇಕು.
* ನಂತರ ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ
* ಮೂರನೇ ಹಂತದಲ್ಲಿ ಉದ್ಯೋಗ ಮೇಳದ ಮೇಲೆ ಕ್ಲಿಕ್ ಮಾಡಿ
* ನಂತರ ಉದ್ಯೋಗದಾತ ನೋಂದಣಿ ಮೇಲೆ ಕ್ಲಿಕ್ ಮಾಡಿ
* ಕೊನೆಯದಾಗಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿ
ಉದ್ಯೋಗ ಹುಡುಕುತ್ತಿರುವವರು ಹಾಗೂ ಉದ್ಯೋಗದಾತರು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 1800 599 9918ಕ್ಕೆ ಕರೆ ಮಾಡಬಹುದು.
ಒಂದು ಕೋಟಿ ಉದ್ಯೋಗ ಸೃಷ್ಟಿ ಗುರಿ
ರಾಜ್ಯ ಸರ್ಕಾರವು 2026ರ ವೇಳೆಗೆ ಕರ್ನಾಟಕದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಹಾಕಿಕೊಂಡಿದೆ.
ಕರ್ನಾಟಕ ಕೌಶಲ್ಯಾಭಿವೃದ್ಧಿಯ ಅಡಿಯಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.