
ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ
ಕುಮಾರಸ್ವಾಮಿ, ಚಲುವರಾಯಸ್ವಾಮಿ ನಡುವೆ ಆಣೆ ಪ್ರಮಾಣ ಸವಾಲು
ಕುಮಾರಸ್ವಾಮಿ ಅವರನ್ನು ನಾಯಕರನ್ನಾಗಿ ಮಾಡಲು ನಾವು ಸಾಥ್ ಕೊಟ್ಟಿದ್ದೇವಾ? ಇಲ್ಲವಾ? ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತಾರೆಯೇ? ಕೇಳಿ, ಜೋಕರ್ ಪದ ನನಗಿಂತ ಅವರಿಗೆ ಹೆಚ್ಚು ಸೂಟ್ ಆಗುತ್ತದೆ ಎಂದು ಚಲುವರಾಯ ಸ್ವಾಮಿ ಹೆಚ್ಡಿಕೆ ಮಾತಿಗೆ ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ನಡುವೆ 'ಜೋಕರ್' ಹೇಳಿಕೆ ಮತ್ತಷ್ಟು ಮುಂದುವರಿದಿದ್ದು, ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ.
ಸಚಿವ ಚಲುವರಾಯಸ್ವಾಮಿ ಬಗ್ಗೆ ಮಾತನಾಡುವಾಗ ಕುಮಾರಸ್ವಾಮಿ, ''ಜೋಕರ್ಗಳ ಮಾತಿಗೆ ಉತ್ತರ ಕೊಡಲ್ಲ'' ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಚಲುವರಾಯಸ್ವಾಮಿ ಧರ್ಮಸ್ಥಳಕ್ಕೆ ಬಂದು ಆಣೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ತಮ್ಮನ್ನು ಕುಮಾರಸ್ವಾಮಿ 'ಜೋಕರ್' ಎಂದು ಕರೆದಿದ್ದಕ್ಕೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ರಮ್ಮಿ ಆಟದಲ್ಲಿ 'ಜೋಕರ್' ಅನ್ನು ಯಾವುದಕ್ಕೆ ಬೇಕಾದರೂ ಸೇರಿಸಬಹುದು. ಅಂತೆಯೇ ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದ್ರೂ ಹೋಗುವವರೇ 'ಜೋಕರ್' ಹೀಗಾಗಿ ಈ ಪದ ಅವರಿಗೆ ಸೂಕ್ತ ಎಂದು ಹೇಳಿದರು.
ಮುಂದುವರಿದ ಎನ್. ಚಲುವರಾಯಸ್ವಾಮಿ "ನನ್ನ ತಂದೆ ರೈತರಾಗಿದ್ದರು. ನಾನು ಜನರ ಕಷ್ಟ ಅರಿತವನು. ಐಐಟಿ ಮಂಡ್ಯಕ್ಕೆ ತರಲು ಪತ್ರ ಬರೆದಿದ್ದೇನೆ. ಆದರೆ, ಹಾಸನಕ್ಕೆ ಐಐಟಿ ಬೇಕೆಂದು ಪತ್ರ ಬರೆದವರು ಯಾರು? ಕುಮಾರ ಸ್ವಾಮಿ ಅವರ ತಂದೆಯಾಗಿರುವ ಮಾಜಿ ಪ್ರಧಾನಮಂತ್ರಿ. ಅವರು ನನ್ನನ್ನು ಮಂತ್ರಿ ಮಾಡಿದ್ದಾರೆ ಎಂದರೆ, ನಾನು ಅವರನ್ನು ಮುಖ್ಯಮಂತ್ರಿ ಮಾಡಿದ್ದೇನೆ ಎನ್ನುವುದರಲ್ಲಿ ತಪ್ಪೇನಿದೆ?" ಎಂದು ಅವರು ಪ್ರಶ್ನಿಸಿದರು.
ಚಲುವರಾಯಸ್ವಾಮಿ ಮಾತನ್ನು ಮುಂದುವರಿಸಿ "ಕುಮಾರಸ್ವಾಮಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ನನ್ನನ್ನು ಬೈಯ್ಯುವ ಚಪಲವಿದೆ. ಹೀಗಾಗಿ ಅವರ ಬಗ್ಗೆ ಮಾತನಾಡಿ ನಾಲಿಗೆ ಹೊಲಸು ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ಅವರಿಂದ ರಾಜಕಾರಣ ಕಲಿಯುವ ಅವಶ್ಯಕತೆ ನನಗಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳಕ್ಕೆ ಬರಲು ಸಿದ್ಧ
ಮಂಡ್ಯದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಎಲ್ಲ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. "ಧರ್ಮಸ್ಥಳಕ್ಕೆ ಬಂದು ಆಣೆ-ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ. ನಾನು ಮುಖ್ಯಮಂತ್ರಿಯಾದಾಗ ಚಲುವರಾಯಸ್ವಾಮಿಯನ್ನು ನೋಡಿ ಶಾಸಕರು ಬಂದಿದ್ದರಾ? ಚಲುವರಾಯಸ್ವಾಮಿಯನ್ನು ಮಂತ್ರಿಯಾಗಿ ಮಾಡಲು ನಾನು ಶ್ರಮಪಟ್ಟಿದ್ದೇನೆ. ಅವರು ಮಂತ್ರಿಯಾಗುವವರೆಗೂ ನನಗೆ ನಿದ್ದೆ ಮಾಡಲು ಬಿಟ್ಟಿರಲಿಲ್ಲ. ನಾನು ಪಟ್ಟ ಶ್ರಮವನ್ನು ಅವರು ಮರೆಯಬಾರದು" ಎಂದು ಹೇಳಿದ್ದಾರೆ. ಇದರ ಮೂಲಕ ಚಲುವರಾಯಸ್ವಾಮಿಯ ರಾಜಕೀಯ ಏಳಿಗೆಗೆ ತಾವೇ ಕಾರಣ ಎಂಬುದನ್ನು ಸೂಚ್ಯವಾಗಿ ವಿವರಿಸಿದ್ದಾರೆ. ಡಿಸಿಲ್ಲ