ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ  ಪಾಕಿಸ್ತಾನಿ ಪ್ರಜೆಗಳಿಗೆ ಬರುತ್ತಿತ್ತು ಲಂಡನ್‌ನಿಂದ ಸೂಚನೆ
x
ಬೆಂಗಳೂರಿನಲ್ಲಿ ವಾಸವಿದ್ದ ಪಾಕಿಸ್ತಾನಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಪಾಕಿಸ್ತಾನಿ ಪ್ರಜೆಗಳಿಗೆ ಬರುತ್ತಿತ್ತು ಲಂಡನ್‌ನಿಂದ ಸೂಚನೆ

ಪಾಕಿಸ್ತಾನ ಪ್ರಜೆಗಳು ಲಂಡನ್​ನಲ್ಲಿದ್ದ ವ್ಯಕ್ತಿಯ ಅಣತಿಯಂತೆ ಕಾರ್ಯಚಟುವಟಿಕೆ ತೊಡಗಿಸಿಕೊಂಡಿದ್ದರು. ಇವರು ಸೂಫಿ ಪಂಗಡದವರಾಗಿದ್ದು, ತಮ್ಮ ಧರ್ಮ ಪ್ರಚಾರವಷ್ಟೇ ಉದ್ದೇಶವಾಗಿತ್ತು ಯಾವುದೇ ಉಗ್ರ ಚಟುವಟಿಕೆಗಳಲ್ಲಿ ಈ ಪಾಕಿಸ್ತಾನಿ ಪ್ರಜೆಗಳು ಭಾಗಿಯಾಗಿಲ್ಲ.


Click the Play button to hear this message in audio format

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿರುವ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆಗಳಿಗೆ ಲಂಡನ್​​ನಿಂದ ವ್ಯಕ್ತಿಯೊಬ್ಬ ನೀಡುತ್ತಿದ್ದ ಸಲಹೆ-ಸೂಚನೆಗಳ ಆಧಾರದಲ್ಲಿ ಅವರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಪಾಕಿಸ್ತಾನ ಪ್ರಜೆಗಳು ಲಂಡನ್​ನಲ್ಲಿದ್ದ ವ್ಯಕ್ತಿಯ ಅಣತಿಯಂತೆ ಕಾರ್ಯಚಟುವಟಿಕೆ ತೊಡಗಿಸಿಕೊಂಡಿದ್ದರು. ಇವರು ಸೂಫಿ ಪಂಗಡದವರಾಗಿದ್ದು, ತಮ್ಮ ಧರ್ಮ ಪ್ರಚಾರವಷ್ಟೇ ಉದ್ದೇಶವಾಗಿತ್ತು ಯಾವುದೇ ಉಗ್ರ ಚಟುವಟಿಕೆಗಳಲ್ಲಿ ಈ ಪಾಕಿಸ್ತಾನಿ ಪ್ರಜೆಗಳು ಭಾಗಿಯಾಗಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಇವರು ಮನೆ ಒಳಗೆ ಇದ್ದುಕೊಂಡೇ ಕಾರ್ಯಚಟುವಟಿಕೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಬಂಧಿತರ ಗುಂಪಿನಲ್ಲಿ ಇನ್ನು ಮೂವತ್ತು ಜನರಿದ್ದು, ಅವರೆಲ್ಲಾ ಉತ್ತರ ಭಾರತದ ಕೆಲ ಜಾಗಗಳಲ್ಲಿ ಉಳಿದುಕೊಂಡಿದ್ದಾರೆ. ಒಟ್ಟು 150 ಜನರ ತಂಡ ಇದ್ದು, ಎಲ್ಲರೂ ಸಂದೇಶಗಳ ಮೂಲಕ ಸಂಪರ್ಕ ಸಾಧಿಸಿಕೊಳ್ಳುತ್ತಿದ್ದಾರೆ. ಪಾಕಿಸ್ತಾನಿ ಪ್ರಜೆಗಳು ಭಾರತದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ವಾಸವಾಗಿದ್ದುದರಿಂದ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸದ್ಯ, ಎಫ್​​ಆರ್​ಆರ್​ಒ ಮೂಲಕ ಪಾಕಿಸ್ತಾನ ರಾಯಭಾರ ಕಚೇರಿಗೆ ಪತ್ರ ಬರೆಯಲು ಸಿದ್ಧತೆ ಮಾಡಲಾಗುತ್ತಿದೆ. ಬಂಧಿತರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲು ಅಲ್ಲಿನ ರಾಯಭಾರಿ ಜೊತೆ ಸಂಪರ್ಕಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read More
Next Story