No Rejection of Compassionate Job Citing Lack of Vacancy: High Court Order
x

ಕರ್ನಾಟಕ ಹೈಕೋರ್ಟ್‌ 

High Court News | ವಿದ್ಯುತ್‌ ಕನಿಷ್ಠ ಶುಲ್ಕದ ಮೇಲೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ತೀರ್ಪು

ಕನಿಷ್ಠ ವಿದ್ಯುತ್​ ಶುಲ್ಕದ ಮೇಲಿನ ತೆರಿಗೆ ವಿಧಿಸಲು ನಿಯಮಗಳಿಗೆ ಸರ್ಕಾರ ತಂದಿದ್ದ ತಿದ್ದುಪಡಿಯನ್ನು ಅಸಂವಿಧಾನಿಕ ಎಂದು ಹೈಕೋರ್ಟ್‌ ಘೋಷಿಸಿದೆ. ಕರ್ನಾಟಕ ವಿದ್ಯುತ್ ಕಾಯ್ದೆ ಸೆಕ್ಷನ್​ 3 (1) ರ ತಿದ್ದುಪಡಿಯನ್ನು ನ್ಯಾ.ಅನಂತ್ ರಾಮನಾಥ್ ಹೆಗ್ಡೆ ನೇತೃತ್ವದ ಹೈಕೋರ್ಟ್​ ಪೀಠ ರದ್ದುಪಡಿಸಿದೆ.


ವಿದ್ಯುತ್​ ಕನಿಷ್ಠ ಶುಲ್ಕಗಳ ಮೇಲೆ ತೆರಿಗೆ ವಿಧಿಸುವಂತಿಲ್ಲ. ಬಳಸಿದ ವಿದ್ಯುತ್ ಶುಲ್ಕಕ್ಕೆ ಮಾತ್ರ ತೆರಿಗೆ ವಿಧಿಸಬಹುದು. ಬಳಸದ ವಿದ್ಯುತ್​ಗೆ ಗ್ರಾಹಕರು ತೆರಿಗೆ ಕಟ್ಟಬೇಕಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೇ 1959ರ ಕರ್ನಾಟಕ ವಿದ್ಯುತ್ (ಬಳಕೆಯ ಮೇಲಿನ ತೆರಿಗೆ) ಕಾಯ್ದೆಯ ಸೆಕ್ಷನ್ 3(1)ಗೆ 2003 ಮತ್ತು 2004ರಲ್ಲಿ ರಾಜ್ಯ ಸರ್ಕಾರ ಮಾಡಿದ್ದ ತಿದ್ದುಪಡಿಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ.

ರಾಜ್ಯ ಸರ್ಕಾರ ಕರ್ನಾಟಕ ವಿದ್ಯುತ್ ಕಾಯ್ದೆ 1959ರ ಸೆಕ್ಷನ್​ 3 (1) ಕ್ಕೆ 2003 ಮತ್ತು 2004ರಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದು, ಈ ತಿದ್ದುಪಡಿ ಮೂಲಕ ವಿದ್ಯುತ್​ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸಲಾಗಿದೆ. ಈ ತಿದ್ದುಪಡಿಯು ನಿಯಮಬಾಹಿರವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಮೆಸರ್ಸ್‌ ಸೋನಾ ಸಿಂಥೆಟೆಕ್ ಕಂಪನಿ ಅರ್ಜಿ ಸಲ್ಲಿಸಿದ್ದವು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠ, ಈಗಾಗಲೇ ಸಂಗ್ರಹಿಸಿರುವ ತೆರಿಗೆಯನ್ನು ಹಿಂದಿರುಗಿಸುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಆದರೆ, ವಿದ್ಯುತ್​ ಶುಲ್ಕದ ಮೇಲಿನ ತೆರಿಗೆ ವಿಧಿಸುವ ತಿದ್ದುಪಡಿ ಅಸಂವಿಧಾನಿಕ ಎಂದು ಹೇಳಿದೆ. ಕರ್ನಾಟಕ ವಿದ್ಯುತ್ ಕಾಯ್ದೆ ಸೆಕ್ಷನ್​ 3 (1) ರ ತಿದ್ದುಪಡಿಯನ್ನು ನ್ಯಾ.ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಹೈಕೋರ್ಟ್​ ಪೀಠ ರದ್ದುಪಡಿಸಿದೆ.

ಕನಿಷ್ಠ ಶುಲ್ಕ ತೆರಿಗೆ ಎಂದರೆ ಏನು?

ಗ್ರಾಹಕರು ವಿದ್ಯುತ್ ಬಳಕೆಯ ಸ್ಥಿತಿಗತಿ ಏನೇ ಇದ್ದರೂ ಸರಬರಾಜು ಸಂಸ್ಥೆಯು ಕನಿಷ್ಠ ಶುಲ್ಕದ ಮೇಲೂ ತೆರಿಗೆ ವಿಧಿಸುತ್ತಿತ್ತು. ಇದನ್ನು ಬಳಕೆಯ ಆಧಾರವಾಗಿ ಇರದೇ ನಿಗದಿತ ಮೊತ್ತವಾಗಿ ಪಾವತಿಸಬೇಕಾಗಿತ್ತು. ಹೈಕೋರ್ಟ್‌ನ ಈ ತೀರ್ಪಿನಿಂದ ಅನೇಕ ಸಣ್ಣ ಉದ್ಯಮಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಸಾಮಾನ್ಯ ಗ್ರಾಹಕರಿಗೆ ಅನುಕೂಲವಾಗಲಿದೆ.

Read More
Next Story