ಸಚಿವ ಸಂಪುಟ ಪುನರ್ರಚನೆ ಪ್ರಸ್ತಾಪ ಇಲ್ಲ: ಸಿದ್ದರಾಮಯ್ಯ
x

ಸಚಿವ ಸಂಪುಟ ಪುನರ್ರಚನೆ ಪ್ರಸ್ತಾಪ ಇಲ್ಲ: ಸಿದ್ದರಾಮಯ್ಯ


ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 15 ಸ್ಥಾನ ಗರಿಷ್ಠ 20 ಸ್ಥಾನ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನ ಸಾಧನೆಗಳು ಮತ್ತು ನುಡಿದಂತೆ ನಡೆಯುವ ಕಾಂಗ್ರಸ್‌ ಪಕ್ಷವನ್ನು ಜನ ಬೆಂಬಲಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಮಾಧ್ಯಮದ ಜತೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರಂತೆ 28 ಸ್ಥಾನಗಳನ್ನೂ ಗೆಲ್ಲತ್ತೇವೆ ಎಂದು ಅಂತ ನಾನು ಹೇಳುವುದಿಲ್ಲ ಎಂದರು. ಸರ್ಕಾರಕ್ಕೆ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಚಿವ ಸಂಪುಟ ಪುನರ್ರಚನೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸದ್ಯಕ್ಕೆ ಅಂತಹ ಪ್ರಸ್ತಾಪ ತಮ್ಮಮುಂದೆ ಇಲ್ಲ ಎಂದು ಹೇಳಿದರು. "ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನರ್ ರಚನೆ ವಿಚಾರ ನಮ್ಮ ಮುಂದೆ ಇಲ್ಲ . ಅದರೆ ಹೈಕಮಾಂಡ್ ನಿರ್ದೇಶನದಂತೆ ನಮ್ಮ ಪಕ್ಷದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ," ಎಂದು ಸ್ಪಷ್ಟಪಡಿಸಿದರು.

Read More
Next Story