ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ ಎಂದ ನಿಖಿಲ್ ಕುಮಾರಸ್ವಾಮಿ
x

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ ಎಂದು ನಿಖಿಲ್‌ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. 

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ ಎಂದ ನಿಖಿಲ್ ಕುಮಾರಸ್ವಾಮಿ

ರಾಜ್ಯದಲ್ಲಿ ರಣದೀಪ್ ಸುರ್ಜೇವಾಲ ಅವರ ಒನ್ ಟು ಒನ್ ಸಭೆ ನಡೆಸಿರುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.


ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ರಣದೀಪ್ ಸುರ್ಜೇವಾಲ ಅವರಿಗೆ ಅಭಿನಂದನೆಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ. ನಮ್ಮ ಚುನಾಯಿತ ಮುಖ್ಯಮಂತ್ರಿಗಳು ಸರ್ಕಾರ ನಡೆಸಲು ಅವರಿಗೆ ಜಿಪಿಎ ನೀಡಿದ್ದಾರೆ ಎಂದು ಸದ್ಯದ ಬೆಳವಣಿಗೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಖಾರವಾಗಿ ಪೋಸ್ಟ್ ಮಾಡಿದ್ದಾರೆ.

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಈಗ ಕ್ಷೇತ್ರದ ಅಭಿವೃದ್ಧಿಗೆ ಸುರ್ಜೇವಾಲ ಅವರನ್ನು ಸುತ್ತುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೊರಹೋಗುತ್ತಿದ್ದಾರೆ. ಇನ್ನು ಡಿ.ಕೆ ಶಿವಕುಮಾರ್ ಅವರು ಕುರ್ಚಿಗಾಗಿ ಕಾಯುತ್ತಿದಾರೆ, ಆದರೆ ಸುರ್ಜೇವಾಲ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಕೈಗೊಂಬೆ ರಾಜ್ಯವನ್ನಾಗಿ ಮಾಡಿಕೊಂಡು ಒಕ್ಕೂಟ ವ್ಯವಸ್ಥೆಯ ಮತ್ತು ಪ್ರಜಾಪ್ರಭುತ್ವವನ್ನು ಅಣಕ ಮಾಡುತ್ತಿದೆ ಎಂದು ರಾಜ್ಯದಲ್ಲಿ ರಣದೀಪ್ ಸುರ್ಜೇವಾಲ ಅವರ ಒನ್ ಟು ಒನ್ ಸಭೆ ನಡೆಸಿರುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.

Read More
Next Story