ರಾಮೇಶ್ವರಮ್‌ ಕೆಫೆ ಬಾಂಬ್‌ ಸ್ಫೋಟ  ಪ್ರಕರಣ: ಬೆಂಗಳೂರು, ಕೇರಳದಲ್ಲಿ ದಾಳಿ ಮುಂದುವರಿಸಿದ ಎನ್‌ಐಎ
x

ರಾಮೇಶ್ವರಮ್‌ ಕೆಫೆ ಬಾಂಬ್‌ ಸ್ಫೋಟ ಪ್ರಕರಣ: ಬೆಂಗಳೂರು, ಕೇರಳದಲ್ಲಿ ದಾಳಿ ಮುಂದುವರಿಸಿದ ಎನ್‌ಐಎ


ರಾಮೇಶ್ವರ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳ ಮಾಹಿತಿ ಮೇರೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬೆಂಗಳೂರು ಮತ್ತು ಕೇರಳದಲ್ಲಿ ಒಟ್ಟು 11 ಕಡೆ ದಾಳಿ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ರಾಮೇಶ್ವರ ಕೆಫೆಯಲ್ಲಿ ಮಾ.1 ರಂದು ಬಾಂಬ್‌ ಸ್ಫೋಟಿಸಿದ್ದ ಆರೋಪದಲ್ಲಿ ಭಯೋತ್ಪಾದನಾ ನಿಗ್ರಹ ಕಾಯಿದೆ ಪ್ರಕಾರ ಕೃತ್ಯ ಎಸಗಿದ್ದ ಮೊಹಮ್ಮದ್‌ ಮತೀನ್‌ ಮತ್ತು ಮುಸಾವಿರ್‌ ಹುಸೇನ್‌ ಎಂವರನ್ನು ಬಂಧಿಸಲಾಗಿತ್ತು. ಘಟನೆ ನಡೆದು 43 ದಿನಗಳ ಬಳಿಕ ಪಶ್ಚಿಮ ಬಂಗಾಲದಲ್ಲಿ ಆರೋಪಿಗಳನ್ನು ಎನ್‌ಐಎ ಪೊಲೀಸರು ಸೆರೆಹಿಡಿದಿದ್ದರು.

ಬಂಧಿತ ಆರೋಪಿಗಳ ತನಿಖೆ ವೇಳೆ ಗೊತ್ತಾದ ಅಂಶಗಳ ಆಧಾರದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸುತ್ತಿರುವ ಅವರ ಸಹಚರರರನ್ನು ಪತ್ತೆ ಮಾಡಲು ಮತ್ತು ಇತರ ಮಾಹಿತಿಗಳನ್ನು ಕಲೆ ಹಾಕಲು ಎನ್‌ಐಎ ಪೊಲೀಸರು ಕೇರಳದ ಕೊಯಮತ್ತೂರು ಮತ್ತು ಬೆಂಗಳೂರಿನ ಬನಶಂಕರಿ ಮತ್ತು ಕುಮಾರಸ್ವಾಮಿ ಬಡಾವಣೆಯಲ್ಲಿ ದಾಳಿ ನಡೆಸಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.

ಕೊಯಮತ್ತೂರಿನ ವೈದ್ಯರಾದ ಜಾಫರ್‌ ಇಕ್ಬಾಲ್‌ ಮತ್ತು ನಯನ್‌ ಸಾದಿಕ್‌ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಬಂಧಿತ ಆರೋಪಿಗಳಾದ ಮುಸಾವಿರ್‌ ಮತ್ತು ಮತೀನ್‌ ಇಬ್ಬರೂ ಬೆಗಳೂರು ಸೇರಿದಂತೆ ಇತರ ಕಡೆಯಲ್ಲೂ ಬಾಂಬ್‌ ಸ್ಫೋಟಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

Read More
Next Story