
ಸಾಂದರ್ಭಿಕ ಚಿತ್ರ
ಪತ್ನಿ ವಿರುದ್ಧ ಲೈಂಗಿಕ ಕಿರುಕುಳ; ಹಲ್ಲೆ, ಮಾನನಷ್ಟ ಪ್ರಕರಣ ದಾಖಲಿಸಿದ ಪತಿ
ವೈವಾಹಿಕ ಜವಾಬ್ದಾರಿ ಪೂರೈಸಿಲ್ಲವೆಂದು ಆರೋಪಿಸಿ ಪತ್ನಿಯು ಪತ್ನಿ-ಪತಿಯ ವಿರುದ್ಧ 2 ರೂ.ಕೋಟಿ ಪರಿಹಾರ ನೀಡುವಂತೆ ದೂರು ದಾಖಲಿಸಿದ್ದಾರೆ.
ಪತಿಯನ್ನು ನಪುಂಸಕ ಎಂದು ನಿಂದಿಸಿ 2 ಕೋಟಿ ರೂ. ಪರಿಹಾರಕ್ಕೆ ಒತ್ತಾಯಿಸಿ ದೂರು ನೀಡಿದ್ದ ಪತ್ನಿಯ ವಿರುದ್ಧ ಇದೀಗ ಲೈಂಗಿಕ ಕಿರುಕುಳ, ಹಲ್ಲೆ ಹಾಗೂ ಮಾನನಷ್ಟ ಮೊಕದ್ದಮೆ ಹೂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
35 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಂಪತಿಗೆ ಇದೇ ಮೇ 5ರಂದು ವಿವಾಹವಾಗಿತ್ತು. ಮದುವೆಯಾದ ಕೆಲ ತಿಂಗಳಲ್ಲೇ ಪತ್ನಿಯು ತನ್ನ ಪತಿಯನ್ನು ನಪುಂಸಕ ಎಂದು ನಿಂದಿಸಿ ವೈದ್ಯಕೀಯ ಪರೀಕ್ಷೆಗೆ ಒತ್ತಾಯಿಸಿದ್ದಳು. ವೈದ್ಯಕೀಯ ತಪಾಸಣೆಯಲ್ಲಿ ಪತಿಯು ದೈಹಿಕವಾಗಿ ಆರೋಗ್ಯವಾಗಿದ್ದು, ಮಾನಸಿಕ ಒತ್ತಡದಿಂದ ದೌರ್ಬಲ್ಯವಿತ್ತು ಎಂದು ವರದಿ ನೀಡಲಾಗಿತ್ತು. ಆದಾಗ್ಯೂ, ವೈವಾಹಿಕ ಜವಾಬ್ದಾರಿ ಪೂರೈಸಿಲ್ಲವೆಂದು ಆರೋಪಿಸಿ ಪತ್ನಿಯು 2 ರೂ.ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿ ದೂರು ದಾಖಲಿಸಿದ್ದಳು.
ಅಲ್ಲದೇ ಆ.17ರಂದು ಪತ್ನಿ ಹಾಗೂ ಆಕೆಯ ಸಂಬಂಧಿಕರು ಮನೆಗೆ ನುಗ್ಗಿ, ಪತಿ ಮತ್ತು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ವಿಚಲಿತರಾದ ವ್ಯಕ್ತಿಯು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ತನ್ನ ಪತ್ನಿ ಮತ್ತು ಆಕೆಯ ಸಂಬಂಧಿಕರ ವಿರುದ್ಧ ಹಲ್ಲೆ ಹಾಗೂ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ವಿಡಿಯೊ ಬಿಡುಗಡೆ ಮಾಡಿರುವ ದೂರುದಾರ ವ್ಯಕ್ತಿ, ತನ್ನ ಪತ್ನಿ ಬಿಜೆಪಿ ಮಾಧ್ಯಮ ವಿಭಾಗದೊಂದಿಗೆ ಸಂಪರ್ಕ ಹೊಂದಿದ್ದಾಳೆ. ಬಿಜೆಪಿ ನಾಯಕರು ಮಧ್ಯಪ್ರವೇಶಿಸಿ ತನಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ.
ಪತ್ನಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ
ಕಳೆದ ವರ್ಷ ಡಿಸೆಂಬರ್ 9 ರಂದು ಅತುಲ್ ಸುಭಾಷ್ ಎಂಬ ಟೆಕ್ಕಿ ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಚ್ಛೇದನ, ಜೀವನಾಂಶ ಮತ್ತು ಮಕ್ಕಳ ಕಸ್ಟಡಿ ಕುರಿತು ಪತಿ-ಪತ್ನಿ ಮಧ್ಯೆ ಗಲಾಟೆ ನಡೆದಿತ್ತು. ಪತ್ನಿ ನಿಕಿತಾ, ಆಕೆಯ ತಾಯಿ ನಿಶಾ, ಸಹೋದರ ಅನುರಾಗ್ ಮತ್ತು ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ 90 ನಿಮಿಷಗಳ ವಿಡಿಯೊ ಮತ್ತು 40 ಪುಟಗಳ ಡೆತ್ ನೋಟ್ ಬರೆದಿಟ್ಟು ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ ಮೇ ತಿಂಗಳಿನಲ್ಲಿ ಹೆಂಡತಿ ಕಾಟಕ್ಕೆ ಬೇಸತ್ತು ತನ್ನದೇ ಕಂಪ್ಯೂಟರ್ ಶಾಪ್‌ನಲ್ಲಿ ಸುನೀಲ್ ಎಂಬಾತ ವೈಯರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 4 ವರ್ಷಗಳ ಹಿಂದೆ ಪೂಜಾ ಎಂಬಾಕೆಯನ್ನು ಸುನೀಲ್ ಮದುವೆಯಾಗಿದ್ದರು. ತನ್ನ ಸಾವಿಗೆ ಹೆಂಡತಿ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.