NBEMS Admission | NEET PG ಕನಿಷ್ಠ ಅರ್ಹತೆ ಅಂಕ ಇಳಿಕೆ; ಜ.18ರವರೆಗೆ ನೋಂದಣಿಗೆ ಅವಕಾಶ
x

NBEMS Admission | NEET PG ಕನಿಷ್ಠ ಅರ್ಹತೆ ಅಂಕ ಇಳಿಕೆ; ಜ.18ರವರೆಗೆ ನೋಂದಣಿಗೆ ಅವಕಾಶ

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ( NEET PG 2024) ಅಭ್ಯರ್ಥಿಗಳಿಗೆ ಕನಿಷ್ಠ ಅರ್ಹತಾ ಅಂಕಗಳಲ್ಲಿ ಶೇ 15 ರಷ್ಟು(15 ಪರ್ಸೆಂಟೈಲ್‌) ಇಳಿಕೆ ಮಾಡಲಾಗಿದೆ.


ನವದೆಹಲಿಯ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) 2024ನೇ ಸಾಲಿನ ಪಿಜಿ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಮಂಡಳಿ(NBE) ಸಿಹಿ ಸುದ್ದಿ ನೀಡಿದೆ.

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ( NEET PG 2024) ಅಭ್ಯರ್ಥಿಗಳಿಗೆ ಕನಿಷ್ಠ ಅರ್ಹತಾ ಅಂಕಗಳಲ್ಲಿ ಶೇ 15 ರಷ್ಟು(15 ಪರ್ಸೆಂಟೈಲ್‌) ಇಳಿಕೆ ಮಾಡಿದೆ.

ಹಾಗಾಗಿ ಆನ್‌ಲೈನ್ ನೋಂದಣಿ, ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಲು ಪ್ರಾಧಿಕಾರದ ಪೋರ್ಟಲ್ ಅನ್ನು ಸಕ್ರಿಯಗೊಳಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.

ನೀಟ್ ಪಿಜಿ 2024 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಮಂಡಳಿ ಪಿಜಿ ವೈದ್ಯಕೀಯ ಕೋರ್ಸ್‌ಗಳಿಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ ಹೊಂದಿರುವ ಸಾಮಾನ್ಯ ವರ್ಗ, ಎಸ್‌ಸಿ / ಎಸ್‌ಟಿ / ಓಬಿಸಿ ಅಭ್ಯರ್ಥಿಗಳು ಜ. 18ರ ಬೆಳಿಗ್ಗೆ 11 ರೊಳಗೆ ನೋಂದಣಿ ಹಾಗೂ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅಭ್ಯರ್ಥಿಗಳು ಮಾಪ್ ಅಪ್ ಸುತ್ತಿನಲ್ಲಿ ಲಭ್ಯವಾಗುವ ಸೀಟುಗಳ ಹಂಚಿಕೆಗೆ ಮಾತ್ರ ಇತರೆ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಬಹುದು. ಇದುವರೆವಿಗೂ ನೋಂದಣಿ ಮಾಡದಿರುವ ಪಿಜಿ ವೈದ್ಯಕೀಯ ಅರ್ಹ ಅಭ್ಯರ್ಥಿಗಳು ಸಹ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀಟ್-ಪಿಜಿ 2024 ಮಾಹಿತಿ ಪುಸ್ತಕದಲ್ಲಿ ನೀಡಿರುವ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ಇತರೆ ಮಾನದಂಡಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in.ದಲ್ಲಿ ಹಾಕಲಾಗಿದೆ. ಈ ಮೇಲಿನ ದಿನಾಂಕದಂದು ನೋಂದಣಿ ಮಾಡಿಕೊಂಡು, ಶುಲ್ಕ ಪಾವತಿಸುವ ಪಿಜಿ ವೈದ್ಯಕೀಯ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆ ಹಾಗೂ ಡಿಪಾಸಿಟ್ ಮಾಡಲು ಜ. 16ರಿಂದ ಜ‌18ರೊಳಗೆ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಮೂಲ ದಾಖಲೆಗಳ ಜೊತೆಗೆ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಅರ್ಹತೆ ಪಡೆಯುವ ಅಂಗವಿಕಲ ಅಭ್ಯರ್ಥಿಗಳು ಜ. 20ರಂದು ಬೆಳಿಗ್ಗೆ 11 ರಂದು ಕೆಇಎ ಕಚೇರಿಗೆ ವೈದ್ಯಕೀಯ ಪ್ರಮಾಣ ಪತ್ರಗಳು ಮತ್ತು ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು (ಸೀಟುಗಳು ಲಭ್ಯವಿದ್ದಲ್ಲಿ ಮಾತ್ರ) ಎಂದು ತಿಳಿಸಲಾಗಿದೆ.

ನೀಟ್‌ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಕಟ್‌ ಆಪ್‌ ಅಂಕಗಳನ್ನು ಶೇ ೫೦ಕ್ಕೆ ನಿಗದಿಯಾಗಿತ್ತು. ಅಂದರೆ ೨೪೦ ರಿಂದ ೨೯೦ ಅಂಕ ಹೊಂದಿರಬೇಕಿತ್ತು. ಎಸ್‌ಸಿ, ಎಸ್ಟಿ ಹಾಗೂ ಒಬಿಸಿ ಅಭ್ಯರ್ಥಿಗಳ ಕಟ್‌ ಆಪ್‌ ಅಂಕಗಳನ್ನು ಶೇ ೪೦ಕ್ಕೆ ನಿಗದಿ ಮಾಡಲಾಗಿತ್ತು. ಅಂದರೆ 237 ರಿಂದ 277 ಅಂಕ ಗಳಿಸಬೇಕಿತ್ತು. ಈಗ ಇದರಲ್ಲಿ ಶೇ 15 ರಷ್ಟು ಅಂಕ ಕಡಿಮೆ ಮಾಡಿದ್ದು, ರಾಷ್ಟ್ರೀಯ ವೈದ್ಯಕೀಯ ಕೋರ್ಸ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಏನಿದು NBEMS ?

ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಪ್ರಸ್ತುತ ಅನುಮೋದಿತ ವಿಷಯಗಳಲ್ಲಿ ಸ್ನಾತಕೋತ್ತರ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ನಡೆಸುತ್ತದೆ, ಇದು ಕ್ರಮವಾಗಿ ರಾಷ್ಟ್ರೀಯ ಮಂಡಳಿಯ ಡಿಪ್ಲೊಮೇಟ್ (DNB) ಮತ್ತು ಡಾಕ್ಟರೇಟ್ ಆಫ್ ನ್ಯಾಷನಲ್ ಬೋರ್ಡ್ (DrNB) ಪ್ರಶಸ್ತಿಗೆ ಕಾರಣವಾಗುತ್ತದೆ.

NBEMS ನಡೆಸುವ ಪರೀಕ್ಷೆಗಳು ವೈದ್ಯಕೀಯ ವಿಶೇಷತೆಗಳ ಜ್ಞಾನ ಮತ್ತು ಸಾಮರ್ಥ್ಯಗಳ ಕನಿಷ್ಠ ಮಟ್ಟದ ಸಾಧನೆಯ ಮೌಲ್ಯಮಾಪನದ ಸಾಮಾನ್ಯ ಮಾನದಂಡ ಮತ್ತು ಕಾರ್ಯವಿಧಾನವನ್ನು ಒದಗಿಸುತ್ತದೆ. ಇದಲ್ಲದೆ, ಸಾಮಾನ್ಯ ಮೌಲ್ಯಮಾಪನ ಕಾರ್ಯವಿಧಾನದ ಲಭ್ಯತೆಯೊಂದಿಗೆ ದೇಶದೊಳಗಿನ ಮತ್ತು ಅಂತರರಾಷ್ಟ್ರೀಯ ಹೋಲಿಕೆಗಳನ್ನು ಸುಗಮಗೊಳಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Read More
Next Story