ವೈದ್ಯ ಶಿಕ್ಷಣ ಪ್ರವೇಶ | ನೀಟ್, ಸಿಇಟಿ ಸೀಟು ಹಂಚಿಕೆ ಫಲಿತಾಂಶ ಸೆ.1ಕ್ಕೆ
x
ನೀಟ್‌ ಪರೀಕ್ಷೆ

ವೈದ್ಯ ಶಿಕ್ಷಣ ಪ್ರವೇಶ | ನೀಟ್, ಸಿಇಟಿ ಸೀಟು ಹಂಚಿಕೆ ಫಲಿತಾಂಶ ಸೆ.1ಕ್ಕೆ

ಮೊದಲ ಸುತ್ತಿನ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಆಯ್ಕೆ/ಇಚ್ಛೆ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್ ಸೈಟ್‌ನಲ್ಲಿ ಪೋರ್ಟಲ್ ತೆರೆದಿದೆ.


ಮೊದಲ ಸುತ್ತಿನ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಆಯ್ಕೆ/ಇಚ್ಛೆ(ಆಪ್ಪನ್‌) ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೆಬ್ ಸೈಟ್‌ನಲ್ಲಿ ಪೋರ್ಟಲ್ ತೆರೆದಿದೆ.

ಆಗಸ್ಟ್ 22ರಂದು ಬೆಳಿಗ್ಗೆ 10ರವರೆಗೆ ತಮಗೆ ಇಚ್ಛೆ ಇರುವ ಕಾಲೇಜು ಮತ್ತು ಕೋರ್ಸ್‌ಗಳನ್ನು ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ನೋಂದಾಯಿತ ಮೊಬೈಲ್‌ಗೆ ವಾಟ್ಸ್ಆ್ಯಪ್ ಸಂದೇಶ ರವಾನಿಸುವ ವ್ಯವಸ್ಥೆ ಆರಂಭಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಎಂಜಿನಿಯರಿಂಗ್ ಹಾಗೂ ಇತರೆ ಕೋರ್ಸುಗಳಿಗೂ ಅಪ್ಪನ್‌ಗಳನ್ನು ದಾಖಲಿಸಲು ಅವಕಾಶ ಇರಲಿದೆ ಎಂದು ಅವರು ವಿವರಿಸಿದ್ದಾರೆ.

ಆಗಸ್ಟ್ 25ರ ರಾತ್ರಿ 8ಕ್ಕೆ ಎರಡನೇ ಅಣಕು ಸೀಟು ಹಂಚಿಕೆಯ ಫಲಿತಾಂಶ (ಯುಜಿ ಸಿಇಟಿ/ನೀಟ್) ಪ್ರಕಟಿಸಲಾಗುವುದು. 27ರಂದು ಬೆಳಿಗ್ಗೆ 11ರವರೆಗೆ ಇಚ್ಛೆಗಳನ್ನು ಬದಲಿಸಿಕೊಳ್ಳಬಹುದು. ಸೆ.1ರಂದು ಸಂಜೆ 6ಕ್ಕೆ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವೆಬ್ ಸೈಟ್‌ನಲ್ಲಿ ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಪರಿಶೀಲಿಸಿ ಅಪ್ಸನ್‌ಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಬೇಕು. ಅಲ್ಲದೆ, ಕಾಲೇಜು ಶುಲ್ಕದ ಮಾಹಿತಿ ಕೂಡ ನೀಡಲಾಗಿದ್ದು, ಅದನ್ನೂ ಗಮನಿಸಿಯೇ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

Read More
Next Story