Naxal Surrender | ಉಡುಪಿ ಜಿಲ್ಲಾಡಳಿತದ ಎದುರು ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮೀ
x
ನಕ್ಸಲ್ ನಾಯಕಿ ಲಕ್ಷ್ಮೀ ಉಡುಪಿ ಜಿಲ್ಲಾಡಳಿತದ ಎದುರು ಶರಣಾದರು.

Naxal Surrender | ಉಡುಪಿ ಜಿಲ್ಲಾಡಳಿತದ ಎದುರು ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮೀ

Naxal Surrender: ಪೊಲೀಸ್‌ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ತೊಂಬಟ್ಟು ಲಕ್ಷ್ಮೀ (Naxalite Thombattu Lakshmi) ಅವರನ್ನು ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರ ಮುಂದೆ ಹಾಜರುಪಡಿಸಲಾಯಿತು.


ಎರಡು ದಶಕಗಳಿಂದ ನಕ್ಸಲ್ ಚಟುವಟಿಕೆಯಲ್ಲಿ (Naxal Acitivity) ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕುಂದಾಪುರ ತಾಲೂಕಿನ ಅಮಾಸೆಬೈಲು ಸಮೀಪದ ತೊಂಬಟ್ಟು ಗ್ರಾಮದ ಲಕ್ಷ್ಮೀ (Naxalite Thombattu Lakshmi) ಭಾನುವಾರ ಉಡುಪಿ ಜಿಲ್ಲಾಡಳಿತದ ಎದುರು ಶರಣಾದರು. (Naxal Surrender)

ಪೊಲೀಸ್‌ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ತೊಂಬೊಟ್ಟು ಲಕ್ಷ್ಮೀ (Naxalite Thombattu Lakshmi) ಅವರನ್ನು ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರ ಮುಂದೆ ಹಾಜರುಪಡಿಸಲಾಯಿತು.ಈ ಸಂದರ್ಭದಲ್ಲಿ ಲಕ್ಷ್ಮೀ ಅವರ ಸಹೋದರ ವಿಠಲ ಪೂಜಾರಿ ಹಾಗೂ ಸಂಬಂಧಿಕರು ಹಾಗೂ ನಕ್ಸಲ್ ಶರಣಾಗತಿ- ಪುನರ್ವಸತಿ ಸಮಿತಿಯ ಸದಸ್ಯರಾದ ವಕೀಲರಾದ ಶ್ರೀಪಾಲ್ , ಎಸ್. ಪಿ. ಡಾ.ಕೆ ಅರುಣ್ ಕುಮಾರ್, ಜಿ. ಪಂ ಸಿ ಇ ಒ ಪ್ರತೀಕ್ ಬಾಯಲ್, ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯಿತು.

ನಕ್ಸಲ್ ಚಳವಳಿಯಲ್ಲಿ ಉಡುಪಿ ಜಿಲ್ಲೆಯ ವಿಕ್ರಂ ಗೌಡ ಹಾಗೂ ಲಕ್ಷ್ಮಿ ತೊಂಬಟ್ಟು ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಅವರನ್ನು ಹತ್ಯೆ ಮಾಡಲಾಗಿತ್ತು. ಆ ಬಳಿಕ ಮುಂಡಗಾರು ಲತಾ ನೇತೃತ್ವದಲ್ಲಿ ಐವರು ನಕ್ಸಲರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದರು.

ಶನಿವಾರವಷ್ಟೇ ನಕ್ಸಲ್‌ ಕೋಟೆ ಹೊಂಡ ರವಿ ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಶರಣಾಗಿದ್ದಾರೆ. ಅವರು 18 ವರ್ಷಗಳಿಂದ ಭೂಗತನಾಗಿದ್ದರು. ಶೃಂಗೇರಿಯಿಂದ 4 ಕಿ.ಮೀ ದೂರದಲ್ಲಿರುವ ನೆಮ್ಮಾರ್ ಫಾರೆಸ್ಟ್ ಐಬಿಯಲ್ಲಿ ಪೊಲೀಸರ ಮುಂದೆ ಶರಣಾಗತರಾಗಿದ್ದಾರೆ. ಈ

ಇದರೊಂದಿಗೆ ಕರ್ನಾಟಕ, ನಕ್ಸಲ್ ಮುಕ್ತವಾಗಿದೆ. ನಕ್ಸಲ್‌ ಶರಣಾಗತಿ ಆಪರೇಷನ್‌ನಲ್ಲಿ ಭಾಗವಹಿಸಿದ್ದ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಪದಕವನ್ನು ಘೋಷಿಸಿದ್ದಾರೆ.

Read More
Next Story