Namma Metro| ಸೋಮವಾರ ನಮ್ಮ ಮೆಟ್ರೋ ಸಂಚಾರದಲ್ಲಿ ಸಮಯ ಬದಲಾವಣೆ
x
ನಮ್ಮ ಮೆಟ್ರೋ

Namma Metro| ಸೋಮವಾರ ನಮ್ಮ ಮೆಟ್ರೋ ಸಂಚಾರದಲ್ಲಿ ಸಮಯ ಬದಲಾವಣೆ

Namma Metro| ಜನವರಿ ಜನವರಿ 13 ರಿಂದ ಪ್ರತೀ ಸೋಮವಾರ ಮೆಟ್ರೋ ಸೇವೆ ಮುಂಜಾನೆ ಬೆಳಗ್ಗೆ 4.15ರಿಂದ ಆರಂಭವಾಗಲಿದೆ ಎಂದು ಬೆಂಗಳೂರು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.


ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ತನ್ನ ಮೆಟ್ರೋ ಸೇವಾ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಘೋಷಿಸಿದ್ದು, ಜನವರಿ 13 ರಿಂದ ಸೋಮವಾರ ಬೆಳಿಗ್ಗೆ 4:15 ರಿಂದ ರೈಲುಗಳು ಕಾರ್ಯನಿರ್ವಹಿಸಲಿವೆ ಎಂದು ಬಿಎಂಆರ್‌ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್ ಸಂಸ್ಥೆ, ಬೆಂಗಳೂರು ನಗರದಿಂದ ವಾರಾಂತ್ಯದಲ್ಲಿ ಊರಿಗೆ ತೆರಳಿ ನಂತರ ಸೋಮವಾರ ನಗರಕ್ಕೆ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸಬೇಕಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ಸಮಯದಲ್ಲಿ ಬದಲಾವಣೆಯಾಗಿದೆ. ಇನ್ನುಮುಂದೆ ಜನವರಿ ಜನವರಿ 13 ರಿಂದ ಪ್ರತೀ ಸೋಮವಾರ ಮೆಟ್ರೋ ಸೇವೆ ಮುಂಜಾನೆ ಬೆಳಗ್ಗೆ 4.15ರಿಂದ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ(ಬಿಎಂಆರ್‌ಸಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳವಾರದಿಂದ ಭಾನುವಾರದವರೆಗೆ ಸದ್ಯ ಇರುವ ವೇಳಾಪಟ್ಟಿಯ ಪ್ರಕಾರ ಬೆಳಿಗ್ಗೆ 5:00 ಗಂಟೆಗೆ ಮೆಟ್ರೋ ಸೇವೆಗಳು ಆರಂಭವಾಗಲಿದೆ.

ಸಾರ್ವಜನಿಕರು ತಮ್ಮ ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

ಸದ್ಯದಲ್ಲೇ ಪ್ರಯಾಣ ದರ ಏರಿಕೆ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ದರ ಏರಿಕೆಯ ಬಿಸಿಯೂ ತಟ್ಟಬಹುದು. ಶೀಘ್ರದಲ್ಲಿ ಮೆಟ್ರೋ ಟಿಕೆಟ್ ಬೆಲೆಗಳು 40-45% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸರ್ಕಾರ ನೇಮಿಸಿದ ದರ ನಿಗದಿ ಸಮಿತಿಯು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮಂಡಳಿಗೆ ತನ್ನ ಶಿಫಾರಸುಗಳನ್ನು ಈಗಾಗಲೇ ಸಲ್ಲಿಸಿದ್ದು, ಜನವರಿ 17 ರಂದು ನಡೆಯಲಿರುವ ಸಭೆಯಲ್ಲಿ ಮಂಡಳಿಯು ದರ ಏರಿಕೆ ಪ್ರಸ್ತಾವನೆಯನ್ನು ಪರಿಶೀಲಿಸಿ ಅನುಮೋದಿಸುವ ನಿರೀಕ್ಷೆಯಿದೆ.


Read More
Next Story