ನಮ್ಮ ಮೆಟ್ರೋ | ಹಸಿರು ಮಾರ್ಗದ ಸಂಚಾರ ವ್ಯತ್ಯಯ: ಮಾರ್ಗ ಮಧ್ಯದಲ್ಲೇ ನಿಂತ ರೈಲು
ವಿದ್ಯುತ್ ಸಮಸ್ಯೆಯಿಂದ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಮೆಟ್ರೋ ರೈಲು ನಿಂತಲ್ಲೇ ನಿಂತುಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ನಮ್ಮ ಮೆಟ್ರೋ ರೈಲು ಸಂಚಾರ ವ್ಯವಸ್ಥೆಯಲ್ಲಿ ಇತ್ತೀಚೆಗೆ ಪದೇಪದೆ ವ್ಯತ್ಯಯ ಉಂಟಾಗುತ್ತಿದ್ದು, ವಾರಾಂತ್ಯದ ಶನಿವಾರ(ಆ.24) ಕೂಡ ಮತ್ತೊಮ್ಮೆ ಸಂಚಾರ ವ್ಯತ್ಯಯ ಉಂಟಾಗಿದೆ.
ವಿದ್ಯುತ್ ಸಮಸ್ಯೆಯಿಂದಾಗಿ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಮೆಟ್ರೋ ರೈಲು ನಿಂತಲ್ಲೇ ನಿಂತುಕೊಂಡಿರುವ ಘಟನೆ ನಡೆದಿದೆ.
ಮೆಜೆಸ್ಟಿಕ್ನಿಂದ ಕುವೆಂಪು ಮೆಟ್ರೋ ನಿಲ್ದಾಣವರೆಗೆ ಸಂಜೆ 4.11ರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಸಮಸ್ಯೆ ಹಿನ್ನೆಲೆ ಹಸಿರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಪರದಾಡುವಂತಾಗಿದೆ. ಸದ್ಯ ಬಿಎಂಆರ್ಸಿಎಲ್ ಸಿಬ್ಬಂದಿ ಸಮಸ್ಯೆ ಸರಿಪಡಿಸುತ್ತಿದ್ದಾರೆ.
ಈ ಅವಧಿಯಲ್ಲಿ ನಾಗಸಂದ್ರ ಮತ್ತು ರಾಜಾಜಿನಗರ ನಡುವೆ, ನ್ಯಾಷನಲ್ ಕಾಲೇಜು ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ನಡುವೆ ಶಾರ್ಟ್ ಲೂಪ್ ಸೇವೆಗಳನ್ನು ನಡೆಸಲಾಯಿತು. ಸಂಜೆ 4.23ರ ಬಳಿಕ ಸಮಸ್ಯೆ ಪರಿಹಾರ ಕಂಡಿದ್ದು, ಬಳಿಕ ಎಂದಿನಂತೆ ರೈಲು ಸಂಚಾರ ಮುಂದುವರಿದಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಬಿ.ಎಂ.ಆರ್.ಸಿ.ಎಲ್ ತಿಳಿಸಿದೆ.