ಬೆಂಗಳೂರು ನಿಗೂಢ ಸ್ಫೋಟ: ಐವರ ಪ್ರಾಣ ಉಳಿಸಿದ ವರಮಹಾಲಕ್ಷ್ಮಿ ಪೂಜೆ
x

ಕುಮಾರ್‌

ಬೆಂಗಳೂರು ನಿಗೂಢ ಸ್ಫೋಟ: ಐವರ ಪ್ರಾಣ ಉಳಿಸಿದ ವರಮಹಾಲಕ್ಷ್ಮಿ ಪೂಜೆ

ಗೋಡೆ ಬಿದ್ದು ಹಲವರು ಗಾಯಗೊಂಡಿದ್ದರೆ, ಕುಮಾರ್ ಎಂಬುವವರ ಮನೆಗೂ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆ ನಡೆದ ಸಮಯದಲ್ಲಿ ಕುಟುಂಬದ ಸದಸ್ಯರು ಮನೆಯಲ್ಲಿ ಇರಲಿಲ್ಲ.


ಸಿಲಿಕಾನ್ ಸಿಟಿಯ ವಿಲ್ಸನ್ ಗಾರ್ಡನ್​​ನಲ್ಲಿ ಸಂಭವಿಸಿದ ಭೀಕರ ಸ್ಫೋಟವೊಂದು 10 ವರ್ಷದ ಬಾಲಕನ ಪ್ರಾಣ ಬಲಿ ಪಡೆದಿದ್ದು, ಹಲವರನ್ನು ಗಂಭೀರವಾಗಿ ಗಾಯಗೊಳಿಸಿದೆ. ಇಡೀ ಪ್ರದೇಶವೇ ಸ್ಮಶಾನದಂತಾಗಿದ್ದ ಈ ದುರಂತದ ನಡುವೆ, ಒಂದು ಕುಟುಂಬ ಮಾತ್ರ ವರಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ.

ಸ್ಫೋಟದ ತೀವ್ರತೆಗೆ ಹಲವು ಮನೆಗಳ ಗೋಡೆಗಳು ನೆಲಕ್ಕುರುಳಿದ್ದು, ಕುಮಾರ್ ಎಂಬುವವರ ಮನೆಯೂ ಜಖಂಗೊಂಡಿದೆ. ಒಂದು ವೇಳೆ ಆ ಸಮಯದಲ್ಲಿ ಅವರ ಕುಟುಂಬ ಮನೆಯಲ್ಲಿದ್ದಿದ್ದರೆ, ಮತ್ತೊಂದು ಘೋರ ದುರಂತವೇ ಸಂಭವಿಸುತ್ತಿತ್ತು. ಆದರೆ, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಇಡೀ ಕುಟುಂಬ ತಮ್ಮ ತಂಗಿಯ ಮನೆಗೆ ಹೋಗಿದ್ದೇ ಅವರ ಜೀವ ಉಳಿಸಿದೆ.

ಈ ಬಗ್ಗೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಕುಮಾರ್, "ನಾವು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ನಮ್ಮ ತಂಗಿ ಮನೆಗೆ ಹೋಗಿದ್ದೆವು. ನನ್ನ ತಂದೆ, ತಾಯಿ, ಪತ್ನಿ, ಮಕ್ಕಳು ಎಲ್ಲರೂ ಅಲ್ಲೇ ಉಳಿದುಕೊಂಡಿದ್ದೆವು. ಸ್ಫೋಟವಾದಾಗ ಮನೆಯಲ್ಲಿ ಯಾರೂ ಇರಲಿಲ್ಲ. ನಿಜಕ್ಕೂ ಆ ದೇವಿಯೇ ನಮ್ಮನ್ನು ಕಾಪಾಡಿದ್ದು" ಎಂದು ಭಾವಪರವಶರಾಗಿ ನುಡಿದರು.

ನಿಗೂಢ ಸ್ಫೋಟಕ್ಕೆ ಇಡೀ ಬಡಾವಣೆಯೇ ನಲುಗಿಹೋಗಿದ್ದು, ಹಲವು ಮನೆಗಳು ಜಖಂಗೊಂಡಿವೆ. ಗೋಡೆ ಕುಸಿದು ಅನೇಕರು ಗಾಯಗೊಂಡರೆ, ಕೆಲವರಿಗೆ ಸುಟ್ಟಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಎಸ್ಡಿಆರ್ಎಫ್ ತಂಡ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಸ್ಫೋಟದ ಹಿಂದಿನ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ತೀವ್ರಗೊಂಡಿದೆ.

Read More
Next Story