Mysore Dasara | ಬಲೂನ್‌ ಮಾರುತ್ತಿದ್ದ ಬಾಲಕಿ ಸಾವು; ಅತ್ಯಾಚಾರ, ಕೊಲೆ ಶಂಕೆ
x

Mysore Dasara | ಬಲೂನ್‌ ಮಾರುತ್ತಿದ್ದ ಬಾಲಕಿ ಸಾವು; ಅತ್ಯಾಚಾರ, ಕೊಲೆ ಶಂಕೆ

ವಸ್ತು ಪ್ರದರ್ಶನ ಮೈದಾನದಲ್ಲಿ ವ್ಯಾಪಾರ ಮುಗಿಸಿ ಕುಟುಂಬದೊಂದಿಗೆ ಮಲಗಿದ್ದ ಬಾಲಕಿ ದಿಢೀರ್‌ ಕಾಣೆಯಾಗಿದ್ದಳು. ಬೆಳಿಗ್ಗೆ ಟೆಂಟ್‌ನಿಂದ 50 ಮೀಟರ್ ದೂರದಲ್ಲೇ ಬಾಲಕಿಯ ಶವ ಪತ್ತೆಯಾಗಿತ್ತು.


Click the Play button to hear this message in audio format

ಮೈಸೂರು ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಬಲೂನ್‌ ಮಾರಾಟ ಮಾಡುತ್ತಿದ್ದ ಕಲಬುರಗಿ ಮೂಲದ 9 ವರ್ಷದ ಬಾಲಕಿಯೊಬ್ಬಳು ನಿಗೂಢವಾಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ವಸ್ತು ಪ್ರದರ್ಶನ ಮೈದಾನದಲ್ಲಿ ಬುಧವಾರ ರಾತ್ರಿ ವ್ಯಾಪಾರ ಮುಗಿಸಿ ಕುಟುಂಬದೊಂದಿಗೆ ಟೆಂಟ್‌ನಲ್ಲಿ ಮಲಗಿದ್ದ ಬಾಲಕಿ ದಿಢೀರ್‌ ಕಾಣೆಯಾಗಿದ್ದಳು. ಬೆಳಗಿನ ಜಾವ ಮಳೆ ಬಂದಾಗ ಬಾಲಕಿ ನಾಪತ್ತೆಯಾಗಿರುವುದನ್ನು ಕಂಡು ಪೋಷಕರು ಹುಡುಕಾಡಿದ್ದಾರೆ. ಬೆಳಿಗ್ಗೆ 6.30 ರ ಸುಮಾರಿಗೆ ಟೆಂಟ್‌ನಿಂದ ಸುಮಾರು 50 ಮೀಟರ್ ದೂರದಲ್ಲೇ ಬಾಲಕಿಯ ಶವ ನಗ್ನವಾಗಿ ಪತ್ತೆಯಾಗಿದೆ.

ಪ್ರಕರಣ ಏನು?

ಹಕ್ಕಿಪಿಕ್ಕಿ ಜನಾಂಗದ ಸುಮಾರು 50 ಕುಟುಂಬಗಳು ಮೈಸೂರು ದಸರಾ ಹಿನ್ನೆಲೆಯಲ್ಲಿ ಕಲಬುರಗಿಯಿಂದ ಮೈಸೂರಿಗೆ ಬಲೂನ್ ಮಾರಾಟಕ್ಕಾಗಿ ಬಂದಿದ್ದವು. ಚಾಮುಂಡಿ ಬೆಟ್ಟ ಹಾಗೂ ವಸ್ತು ಪ್ರದರ್ಶನ ಪ್ರದೇಶಗಳಲ್ಲಿ ವ್ಯಾಪಾರ ನಡೆಸುತ್ತಿದ್ದವು. ಅ.8ರಂದು ರಾತ್ರಿ 12ರವರೆಗೆ ವ್ಯಾಪಾರ ಮಾಡಿದ ಬಳಿಕ ಎಲ್ಲರೂ ಒಟ್ಟಿಗೆ ಮಲಗಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಮಳೆ ಸುರಿಯಲಾರಂಭಿಸಿತು. ಆಗ ಪೋಷಕರು ನೋಡಿದಾಗ ಬಾಲಕಿ ಕಾಣೆಯಾಗಿದ್ದಳು. ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

ಕೂಡಲೇ ಪೋಷಕರು ನಜರಾಬಾದ್ ಠಾಣೆಗೆ ದೂರು ನೀಡಿದ್ದರು. ಟೆಂಟ್‌ ಸಮೀಪ ಕಂಡು ಬಂದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

Read More
Next Story