ಧರ್ಮಸ್ಥಳ ಪ್ರಕರಣ |ಇಡಿ ತನಿಖೆಗೆ ಒತ್ತಾಯಿಸಿ ಗೃಹ ಸಚಿವರಿಗೆ ಸಂಸದ ಕೋಟ‌ ಶ್ರೀನಿವಾಸ ಪೂಜಾರಿ ಪತ್ರ
x

ಧರ್ಮಸ್ಥಳ ಪ್ರಕರಣ |ಇಡಿ ತನಿಖೆಗೆ ಒತ್ತಾಯಿಸಿ ಗೃಹ ಸಚಿವರಿಗೆ ಸಂಸದ ಕೋಟ‌ ಶ್ರೀನಿವಾಸ ಪೂಜಾರಿ ಪತ್ರ

ಯೂಟ್ಯೂಬರ್ ಗಳ ಗುಂಪೊಂದು ಧರ್ಮಸ್ಥಳದ ಬಗ್ಗೆ ನಿರಂತರ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಕ್ಷೇತ್ರದ ಪಾವಿತ್ರ್ಯತೆ ಹಾಳು ಮಾಡಲು ಸಂಚು ರೂಪಿಸಿದೆ. ಈ ಬಗ್ಗೆ ಇಡಿ ತನಿಖೆ ನಡೆಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದಿದ್ದಾರೆ.


ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಕುರಿತು ವರದಿ‌ ಮಾಡುತ್ತಿರುವ ಯೂಟ್ಯೂಬ‌ರ್ ಗಳು ಸೇರಿದಂತೆ ಹಲವರಿಗೆ ವಿದೇಶದಿಂದ ಹಣಕಾಸು ನೆರವು ಹರಿದುಬಂದಿರುವ ಕುರಿತು ಜಾರಿ ನಿರ್ದೇಶನಾಲಯದಿಂದ (ಇ.ಡಿ). ತನಿಖೆ ನಡೆಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ಯೂಟ್ಯೂಬರ್ ಗಳ ಗುಂಪೊಂದು ಧರ್ಮಸ್ಥಳದ ಬಗ್ಗೆ ನಿರಂತರ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಕ್ಷೇತ್ರದ ಪಾವಿತ್ರ್ಯತೆ ಹಾಳು ಮಾಡಲು ಸಂಚು ರೂಪಿಸಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ರಾಜ್ಯದ ಉಪ ಮುಖ್ಯಮಂತ್ರಿ ಅವರು ಕೂಡ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿರುವ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ತನಿಖೆ ಅಗತ್ಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೆಲ ಎಡಪಂಥಿಯರ ಮನವಿ ಮೇರೆಗೆ ಸರ್ಕಾರವು ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಕುರಿತ ಆರೋಪದ ತನಿಖೆಗೆ ಎಸ್ಐಟಿ ರಚಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಸಹ ಹೇಳಿದ್ದಾರೆ. ಅನಾಮಿಕನ ಹೇಳಿಕೆ ಅಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಐಟಿ ರಚಿಸಿದ್ದಾರೆ. ಇಡೀ ಸರ್ಕಾರವೇ ಅನಾಮಿಕ ವ್ಯಕ್ತಿಗೆ ಶರಣಾದಂತೆ ಕಾಣುತ್ತಿದೆ. ಆ ಅನಾಮಿಕ ವ್ಯಕ್ತಿ ಬಾಹುಬಲಿ ಬೆಟ್ಟ‌ ಸೇರಿದಂತೆ ಎಲ್ಲೆಂದರಲ್ಲಿ ಗುಂಡಿ ಅಗೆಸುತ್ತಿದ್ದಾನೆ. ಇದರಿಂದ ಲಕ್ಷಾಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ತಮಿಳುನಾಡಿನ ರಾಜಕಾರಣಿಯೊಬ್ಬರು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತಂದು ಹಿಂದೂಗಳ ಭಾವನೆಗೆ ಧಕ್ಕೆ ತರುವ ಯೋಜನೆ ರೂಪಿಸಿರುವುದಾಗಿಯೂ ವರದಿಯಾಗಿದೆ ಎಂದು ದೂರಿದ್ದಾರೆ.

ಧರ್ಮಸ್ಥಳ ಹೆಸರಿಗೆ ಮಸಿ ಬಳಿಯಲು ಮುಸ್ಲಿಂ ಯೂಟ್ಯೂಬ‌ರ್ ಮತ್ತು ಆತನ ಸಹಚರರಿಗೆ ವಿದೇಶದಿಂದ ಹಣಕಾಸು ನೆರವು ದೊರೆತಿದೆ ಎಂಬ ಸುದ್ದಿ ಇದೆ. ಹಾಗಾಗಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಾರಿ ನಿರ್ದೇಶನಾಲಯದ ಮೂಲಕ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Read More
Next Story