Heavy rains for two days, red alert declared for six districts
x
ಸಾಂದರ್ಭಿಕ ಚಿತ್ರ

ರಾಜ್ಯಕ್ಕೆ ಮುಂಗಾರು ಕೊರತೆ: ದ್ವಿತೀಯಾರ್ಧದಲ್ಲಿ ಶೇ. 80ರಷ್ಟು ಮಳೆ ಕೊರತೆ ಸಂಭವ

ಮುಂಗಾರಿನ ಮೊದಲ ಹಂತವು ಜೂನ್-ಜುಲೈ ತಿಂಗಳಲ್ಲಿ ಮುಕ್ತಾಯಗೊಂಡಿದ್ದು, ಈ ಅವಧಿಯಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ. 11ರಷ್ಟು ಅಧಿಕ ಮಳೆಯಾಗಿತ್ತು.


ಮುಂಗಾರಿನ ಮೊದಲಾರ್ಧದಲ್ಲಿ ಉತ್ತಮ ಮಳೆಗೆ ಸಾಕ್ಷಿಯಾಗಿದ್ದ ರಾಜ್ಯಕ್ಕೆ ಇದೀಗ ಆತಂಕಕಾರಿ ಸುದ್ದಿಯೊಂದು ಎದುರಾಗಿದೆ. ಮುಂಗಾರು ಅವಧಿಯ ದ್ವಿತೀಯಾರ್ಧದಲ್ಲಿ (ಆಗಸ್ಟ್ ಮತ್ತು ಸೆಪ್ಟೆಂಬರ್) ಕರ್ನಾಟಕದಲ್ಲಿ ಭಾರೀ ಮಳೆ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮಳೆಯ ಅಬ್ಬರ ತೀವ್ರವಾಗಿ ತಗ್ಗಲಿದ್ದು, ಕೆಲವು ಕಡೆ ಶೇ. 80ರಷ್ಟು ಕೊರತೆ ಉಂಟಾಗಬಹುದು ಎಂದು ಎಚ್ಚರಿಸಲಾಗಿದೆ.

ಮೊದಲಾರ್ಧದಲ್ಲಿ ಉತ್ತಮ ಮಳೆ, ದ್ವಿತೀಯಾರ್ಧದಲ್ಲಿ ಕೊರತೆ

ಮುಂಗಾರಿನ ಮೊದಲ ಹಂತವು ಜೂನ್-ಜುಲೈ ತಿಂಗಳಲ್ಲಿ ಮುಕ್ತಾಯಗೊಂಡಿದ್ದು, ಈ ಅವಧಿಯಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ. 11ರಷ್ಟು ಅಧಿಕ ಮಳೆಯಾಗಿತ್ತು. ಇದು ರೈತರಲ್ಲಿ ಆಶಾಭಾವನೆ ಮೂಡಿಸಿತ್ತು. ಆದರೆ, ಆಗಸ್ಟ್​​ನಿಂದ ಆರಂಭವಾಗುವ ಎರಡನೇ ಅವಧಿಯಲ್ಲಿ ಚಿತ್ರಣ ಸಂಪೂರ್ಣ ಬದಲಾಗುವ ಲಕ್ಷಣಗಳು ಕಾಣಿಸುತ್ತಿವೆ. ದೇಶದಾದ್ಯಂತ ವಾಡಿಕೆಯ ಮಳೆಯಾಗುವ ಮುನ್ಸೂಚನೆ ಇದ್ದರೂ, ಕರ್ನಾಟಕವು ಮಳೆ ಕೊರತೆಯನ್ನು ಎದುರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಗಸ್ಟ್​​ನಲ್ಲಿ ತೀವ್ರ ಕೊರತೆ

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಸರಾಸರಿ ಶೇ. 50ರಷ್ಟು ಮಳೆ ಕೊರತೆ ಉಂಟಾಗುವ ಸಾಧ್ಯತೆಯಿದೆ. ಈ ಕೊರತೆಯು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತ್ಯಂತ ತೀವ್ರವಾಗಿರಲಿದ್ದು, ಶೇ. 80ರಷ್ಟು ಕಡಿಮೆ ಮಳೆಯಾಗುವ ಆತಂಕಕಾರಿ ಮುನ್ಸೂಚನೆಯನ್ನು ನೀಡಲಾಗಿದೆ.

ಸೆಪ್ಟೆಂಬರ್​ನಲ್ಲಿ ಸ್ವಲ್ಪ ಚೇತರಿಕೆ

ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದ ಒಳನಾಡಿನ ಭಾಗಗಳಲ್ಲಿ ಉತ್ತಮ ಮಳೆಯಾಗುವ ಮೂಲಕ ಪರಿಸ್ಥಿತಿ ಸ್ವಲ್ಪ ಸುಧಾರಿಸುವ ನಿರೀಕ್ಷೆಯಿದೆ. ಆದರೆ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಳೆ ಕೊರತೆಯು ಮುಂದುವರಿಯಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Read More
Next Story