
ಮೋದಿ ಪ್ರಧಾನ ಮಂತ್ರಿಯಲ್ಲ ಪ್ರಚಾರ ಮಂತ್ರಿ! ಪ್ರಿಯಾಂಕ್ ಖರ್ಗೆ ವ್ಯಂಗ್ಯ
ನರೇಂದ್ರ ಮೋದಿ ಈ ದೇಶದ ಪ್ರಧಾನಿ ಅಲ್ಲ ಪ್ರಚಾರ ಮಂತ್ರಿ, ಅವರು ಇವೆಂಟ್ ಮ್ಯಾನೇಜಮೆಂಟ್ ನಲ್ಲಿ ಪರಣಿತರು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮೋದಿ, ಗೇಮಿಂಗ್ ಉದ್ಯಮಗಳಿಗೆ 2 ಲಕ್ಷ ಕೋಟಿ ಟ್ಯಾಕ್ಸ್ ಹಾಕಿದ್ದಾರೆ, ಹೀಗಾಗಿ ಗೇಮಿಂಗ್ ಕಂಪನಿಗಳ ಬಂಡವಾಳ ವಿದೇಶಕ್ಕೆ ಹೋಗುತ್ತಿದೆ ಎಂದು ಆರೋಪಿಸಿದರು. "ಒಂದು ಸರ್ವೆ ಪ್ರಕಾರ ಕಳೆದ ಹತ್ತು ವರ್ಷದಲ್ಲಿ 67% ಯುವಕರಿಗೆ ಉದ್ಯೋಗ ಸಿಗುವುದು ಕಷ್ಟ ಎಂದು ಹೇಳುತ್ತದೆ. ಅದರ ಬಗ್ಗೆ ಮೋದಿ ಅವರು ಮಾತಾಡಬೇಕು. ದೇಶದಲ್ಲಿ ಸಧ್ಯ ನಿರುದ್ಯೋಗ ದೊಡ್ಡ ವಿಷಯವಾಗಿದೆ. ಗೇಮರ್ಸ್ ಜೊತೆಗೆ ಕರೆಸಿ ಮಾತನಾಡಿದಂತೆ ನಿರುದ್ಯೋಗಿ ಯುವಕರನ್ನು ಕರೆಸಿ ಮಾತನಾಡಿಸಬೇಕಲ್ಲವೇ? ಅವರ ಸಮಸ್ಯೆಗಳು ಕೇಳಿಸಿಕೊಳ್ಳಬೇಕಲ್ಲವೇ? ಅದನ್ನು ಎರಡು ಅವಧಿಯಲ್ಲಿ ಯಾಕೆ ಮಾಡಿಲ್ಲ? ಸ್ಕಿಲ್ ಇಂಡಿಯಾದಲ್ಲಿ ಎಷ್ಟು ಯಶಸ್ಸು ಕಂಡಿದ್ದಾರೆ?" ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಮನಸು ಮಾಡಿದ್ದರೆ ಕೋಲಿ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬಹುದೆಂದು ಹೇಳುವ ಸಂಸದ ಡಾ. ಉಮೇಶ್ ಜಾಧವ್ ಅವರು, ಡಬಲ್ ಎಂಜಿನ ಸರಕಾರದ ಐದು ವರ್ಷಗಳಲ್ಲಿ ಯಾಕೆ ಮಾಡಿಲ್ಲ? ಈಗ ಈ ವಿಚಾರವನ್ನು ನನ್ನ ತಲೆ ಮೇಲೆ ಹಾಕುತ್ತಾರೆ ಎಂದು ಆರೋಪಿಸಿದರು.