ಮೋದಿ 3.0| ಕುಮಾರಸ್ವಾಮಿಗೆ ಕೈಗಾರಿಕೆ,  ಜೋಶಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಸೇರಿದಂತೆ ರಾಜ್ಯದ ಸಚಿವರಿಗೆ ಖಾತೆ  ಹಂಚಿಕೆ
x

ಮೋದಿ 3.0| ಕುಮಾರಸ್ವಾಮಿಗೆ ಕೈಗಾರಿಕೆ, ಜೋಶಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಸೇರಿದಂತೆ ರಾಜ್ಯದ ಸಚಿವರಿಗೆ ಖಾತೆ ಹಂಚಿಕೆ


ನರೇಂದ್ರ ಮೋದಿ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು ಕರ್ನಾಟಕದಿಂದ ಆಯ್ಕೆಯಾದ ಇಬ್ಬರು ಕ್ಯಾಬಿನೆಟ್‌ ದರ್ಜೆ ಸಚಿವರಿಗೆ ಮತ್ತು ಇನ್ನಿಬ್ಬರು ರಾಜ್ಯಖಾತೆ ಸಚಿವರಗೂ ಪ್ರಮುಖ ಖಾತೆಗಳು ದೊರೆತಿವೆ. ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್‌ ಅವರೂ ಸೇರಿದಂತೆ ರಾಜ್ಯ ಪ್ರತಿನಿಧಿಸುವ ಐವರಿಗೆ ಸಚಿವ ಸ್ಥಾನ ದೊರೆತಂತಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಖಾತೆ ದೊರೆತಿದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮನ್‌ ಅವರಿಗೆ ಹಣಕಾಸು ಮತ್ತು ಕಾರ್ಪೋರೇಟ್‌ ವ್ಯವಹಾರಗಳ ಸಚಿವಾಲಯವನ್ನು ಮತ್ತೆ ಹಂಚಿಕೆ ಮಾಡಲಾಗಿದೆ. ಮೋದಿ ೨.೦ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್‌ ದರ್ಜೆ ಸಚಿವರಾಗಿದ್ದ ಪ್ರಲ್ಹಾದ್‌ ಜೋಷಿ ಅವರಿಗೆ ಈ ಬಾರಿ ಖಾತೆ ಬದಲಾವಣೆ ಮಾಡಲಾಗಿದ್ದು ಆಹಾರ ಮತ್ತು ನಾಗರಿಕ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ನವೀಕರಿಸಬಹುದಾದ ಇಂಧನ ಖಾತೆ ಹಂಚಿಕೆ ಮಾಡಲಾಗಿದೆ.

ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಎಂಎಸ್‌ಎಂಇ, ಕಾರ್ಮಿಕ ಮತ್ತು ಉದ್ಯೋಗ‌ ರಾಜ್ಯ ಖಾತೆ ನೀಡಲಾಗಿದೆ. ಹಾಗೆಯೇ ನೂತನ ಸಚಿವ ವಿ. ಸೋಮಣ್ಣ ಅವರಿಗೆ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಹಂಚಿಕೆ ಮಾಡಲಾಗಿದೆ.

ಸಂಪೂರ್ಣ ವಿವರ

ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಒಟ್ಟು ೭೨ ಸಚಿವರ ಖಾತೆಗಳ ವಿವರ ಹೀಗಿದೆ:

Read More
Next Story