ವಿಜಯೇಂದ್ರ ವಿರುದ್ಧ ಶಾಸಕರ ಅಸಮಾಧಾನ ಚರ್ಚೆ ಆಗಿದೆ: ಆರ್‌ ಅಶೋಕ್‌
x

ವಿಜಯೇಂದ್ರ ವಿರುದ್ಧ ಶಾಸಕರ ಅಸಮಾಧಾನ ಚರ್ಚೆ ಆಗಿದೆ: ಆರ್‌ ಅಶೋಕ್‌


ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರಾಜೀನಾಮೆಗೆ ಕೆಲವು ಶಾಸಕರು ಒತ್ತಾಯಿಸುತ್ತಿರುವ ವಿಚಾರ ಈಗಾಗಲೇ ಪಕ್ಷದೊಳಗೆ ಬಹಳ ಚರ್ಚೆಯಾಗುತ್ತಿದೆ. ಶಾಸಕರ ಹೇಳಿಕೆಯನ್ನು ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಅವರು ನಿಲುವು ತೆಗೆದುಕೊಳ್ಳುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿದ್ದಾರೆ.

ಬಿಜೆಪಿಯಲ್ಲಿ ಶುರುವಾಗಿರುವ ಬಣ ರಾಜಕಾರಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻನಾನೂ ಸಹ ಸಮಯ ನೋಡಿ ದೆಹಲಿ ನಾಯಕರ ಭೇಟಿಯಾಗುತ್ತೇನೆ. ರಾಜ್ಯದ ಬೆಳವಣಿಗೆಗಳ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ. ಶೀಘ್ರದಲ್ಲೇ ಒಂದು ಪರಿಹಾರ ಕೊಡಿ ಎಂದು ವಿನಂತಿ ಮಾಡುತ್ತೇನೆ. ಇದನ್ನು ನಾನು ದೆಹಲಿಗೆ ಹೋದ ಸಂದರ್ಭದಲ್ಲಿ ಹೇಳುತ್ತೇನೆʼʼ ಎಂದರು.

ʻʻರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ರಾಜಕೀಯ ಪಕ್ಷವಲ್ಲ. ಆದ್ದರಿಂದ ರಾಜಕೀಯದ ಸಭೆ ಮಾಡುವ ಪದ್ಧತಿ ಸಂಘದಲ್ಲಿಲ್ಲ. 40 ವರ್ಷದ ಹಿಂದೆಯೇ ನಾನು ಆರ್​​ಎಸ್​​ಎಸ್ ಚಡ್ಡಿ ಹಾಕಿದವನು. ಆರ್​ಎಸ್​​ಎಸ್​​ನ ನೀತಿ, ನಿಯಮ ಎಲ್ಲವೂ ನನಗೂ ಗೊತ್ತಿದೆ. ಆರ್​ಎಸ್​​ಎಸ್​ ರಾಜಕಾರಣದಲ್ಲಿ ಭಾಗವಹಿಸುವುದು ಗೊತ್ತಿಲ್ಲ” ಎಂದು ಹೇಳಿದರು.

Read More
Next Story