ಎಚ್​​ಎಎಲ್​ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಅನಾಹುತ, ತಕ್ಷಣದ ಸ್ಪಂದನೆಯಿಂದ ತಪ್ಪಿದ ಭಾರೀ ಅವಘಡ
x

ಎಚ್​​ಎಎಲ್​ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಅನಾಹುತ, ತಕ್ಷಣದ ಸ್ಪಂದನೆಯಿಂದ ತಪ್ಪಿದ ಭಾರೀ ಅವಘಡ

ಎಚ್​ಎಎಲ್​ನ ವಿಮಾನ ವಿಭಾಗದ ಪ್ರಕ್ರಿಯೆ ಕಾರ್ಯಾಗಾರವು ವಿಮಾನ ತಯಾರಿಕೆಗೆ ಸಂಬಂಧಿಸಿದ ಪ್ರಮುಖ ಘಟಕಗಳನ್ನು ಒಳಗೊಂಡಿದ್ದು, ಈ ಘಟನೆಯಿಂದಾಗಿ ಉತ್ಪಾದನಾ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಎಚ್​ಎಎಲ್​ ಅಧಿಕಾರಿಗಳು ತಿಳಿಸಿದ್ದಾರೆ.


ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನ ವಿಮಾನ ವಿಭಾಗದ ಪ್ರೊಸೆಸ್​ ಕಾರ್ಯಾಗಾರದಲ್ಲಿ (Process Shop) ಕಳೆದ ರಾತ್ರಿ ಸಣ್ಣ ಪ್ರಮಾಣದ ಬೆಂಕಿ ಅವಘಸ ಸಂಭವಿಸಿದೆ. ಈ ಮಾಹಿತಿಯನ್ನು ಎಚ್​​ಎಎಲ್​ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ. ಘಟನೆಯನ್ನು ಎಚ್​ಎಎಲ್​ನ ಅಗ್ನಿಶಾಮಕ ಸಿಬ್ಬಂದಿಯು ತಕ್ಷಣವೇ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಎಚ್​ಎಎಲ್​ನ ವಿಮಾನ ವಿಭಾಗದ ಪ್ರಕ್ರಿಯೆ ಕಾರ್ಯಾಗಾರವು ವಿಮಾನ ತಯಾರಿಕೆಗೆ ಸಂಬಂಧಿಸಿದ ಪ್ರಮುಖ ಘಟಕಗಳನ್ನು ಒಳಗೊಂಡಿದ್ದು, ಈ ಘಟನೆಯಿಂದಾಗಿ ಉತ್ಪಾದನಾ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಎಚ್​ಎಎಲ್​ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಉತ್ಪಾದನಾ ಕಾರ್ಯವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದೆ.

ಈ ಘಟನೆಯ ಕಾರಣಗಳನ್ನು ಕಂಡುಹಿಡಿಯಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಎಚ್​ಎಎಲ್​ ತಂಡವು ತನಿಖೆಯನ್ನು ಪ್ರಾರಂಭಿಸಿದೆ. ಬೆಂಕಿಯ ತೀವ್ರತೆ ಕಡಿಮೆ ಇದ್ದ ಕಾರಣ, ಯಾವುದೇ ಆರ್ಥಿಕ ನಷ್ಟ ಅಥವಾ ಉಪಕರಣಗಳ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಎಚ್​ಎಎಲ್​ಬನ ಅಗ್ನಿಶಾಮಕ ತಂಡದ ತ್ವರಿತ ಕ್ರಿಯೆ ಮತ್ತು ಸಮರ್ಪಕ ನಿರ್ವಹಣೆಯಿಂದ ಈ ಘಟನೆಯನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತನಿಖೆಯ ನಂತರ ಎಚ್​ಎಎಲ್​ ಒದಗಿಸಲಿದೆ ಎಂದು ತಿಳಿದುಬಂದಿದೆ.

ಈ ಘಟನೆಯಿಂದ ಎಚ್​ಎಎಲ್​​ನ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರದಿರುವುದು ಉದ್ಯಮದ ದೃಷ್ಟಿಯಿಂದ ಸಕಾರಾತ್ಮಕ ಸಂಗತಿಯಾಗಿದೆ. ಎಚ್​ಎಎಲ್​​ ತನ್ನ ಉತ್ಪಾದನಾ ಗುರಿಗಳನ್ನು ಸಾಧಿಸುವಲ್ಲಿ ಯಾವುದೇ ತೊಂದರೆ ಎದುರಿಸುವುದಿಲ್ಲ.

Read More
Next Story