
ಬರದ ನಡುವೆ ಸ್ಪೀಕರ್‌ಗೆ ಐಷಾರಾಮಿ ಕಾರು ಬೇಕಿತ್ತಾ: ಯತ್ನಾಳ್ ಕಿಡಿ
ಸ್ಪೀಕರ್ ಖಾದರ್ ಅವರು ತಮ್ಮ ಓಡಾಟಕ್ಕೆ ಐಷರಾಮಿ ಫಾರ್ಚೂನಾರ್ ಕಾರು ಖರೀದಿಸಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಭೀಕರ ಬರದಿಂದ ಜನಸಾಮಾನ್ಯರು ಕಂಗೆಟ್ಟಿರುವ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರು ತಮ್ಮ ಓಡಾಟಕ್ಕೆ ಐಷರಾಮಿ ಫಾರ್ಚೂನಾರ್ ಕಾರು ಖರೀದಿಸಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆ xನಲ್ಲಿ ದುಂದುವೆಚ್ಚಗಳನ್ನು ಕಡಿಮೆ ಮಾಡಿ, ಇರುವ ವಾಹನವನ್ನೇ ಮಾರ್ಪಾಡು ಮಾಡಿಕೊಂಡು ಬಳಸಿ ಬೊಕ್ಕಸಕ್ಕೆ ಹೊರೆಯಾಗದೆ ಇರುವ ಹಾಗೆ ಮಾಡಿ ಮೇಲ್ಪಂಕ್ತಿ ಹಾಕಿ ಕೊಡಬೇಕಾಗಿದ್ದ ಸಭಾಧ್ಯಕ್ಷರು ಸ್ವತಃ ತಾವೇ ಐಷಾರಾಮಿ ಕಾರನ್ನು ಖರೀದಿ ಮಾಡುವ ಅವಶ್ಯವಿರಲಿಲ್ಲ ಹಾಗೂ ರಾಜ್ಯ ಭೀಕರ ಬರದಿಂದ ಕಂಗೆಟ್ಟಿರುವ ಸಂದರ್ಭದಲ್ಲಿ, 223 ತಾಲೂಕುಗಳು ಬರ ಪೀಡಿತವೆಂದು ಸರ್ಕಾರವೇ ಘೋಷಣೆ ಮಾಡಿರುವಾಗ ಈ ರೀತಿಯಾದ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಬಹುದಾಗಿತ್ತು" ಎಂದು ಪೋಸ್ಟ್ ಮಾಡಿದ್ದಾರೆ.
ಮಂಗಳೂರು ಕ್ಷೇತ್ರದ ಶಾಸಕ ಹಾಗೂ ಸ್ವೀಕರ್ ಆಗಿರುವ ಯು.ಟಿ ಖಾದರ್ ಅವರಿಗೆ ನಲ್ವತ್ತೊಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಐಷಾರಾಮಿ ಸೌಲಭ್ಯ ಹೊಂದಿರುವ ಕಾರರನ್ನು ಸಚಿವಾಲಯ ಒದಗಿಸಿದೆ. ಈ ಕಾರು ಕಾರಿನ ಮುಂಭಾಗ ಮತ್ತು ಹಿಂಭಾಗ ಗಂಡಭೇರುಂಡ ಲಾಂಭನ ಇದ್ದು ಈ ಲಾಂಭನವನ್ನು ಕೇವಲ ರಾಜ್ಯಪಾಲರು ಮತ್ತು ಸ್ಪೀಕರ್ ಮಾತ್ರ ಬಳಸಬಹುದಾಗಿದೆ. ಆಕರ್ಷಕ ಎಲ್ ಇಡಿ ಬಲ್ಬ್ ಗಳು, ಮುನ್ನೂರ ಅರವತ್ತು ಡಿಗ್ರಿ ಕ್ಯಾಮೆರಾ, ಕಾರಿನವೊಳಗೆ ಹನ್ನೊಂದು ಜೆಬಿಎಲ್ ಸ್ಪೀಕರ್, ಎಂಟು ಇಂಚಿನ ಟಚ್ ಸ್ಕ್ರೀನ್ ವ್ಯವಸ್ಥೆ ಹೊಂದಿದೆ.