Minister Lakshmi Hebbalkar makes a surprise visit to Balamandir and Womens Hostel
x

ಬಾಲ ಮಂದಿರಕ್ಕೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬಾಲಮಂದಿರ, ಮಹಿಳಾ ನಿಲಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ದಿಢೀರ್ ಭೇಟಿ

ಬಾಲಕರ ಬಾಲಮಂದಿರದಲ್ಲಿ ವಿವಿಧ ರಾಜ್ಯಗಳ 110 ಮಕ್ಕಳಿದ್ದು ಇಲಾಖೆಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು.


ಮಕ್ಕಳ ರಕ್ಷಣಾ ನಿರ್ದೇಶನಾಲಯದ ಬಾಲಕರ ಬಾಲಮಂದಿರ ಹಾಗೂ ಯಶೋಧರಮ್ಮ ದಾಸಪ್ಪ ರಾಜ್ಯ ಮಹಿಳಾ ನಿಲಯಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಬಾಲಮಂದಿರಕ್ಕೆ ಬುಧವಾರ(ಜು.30) ಭೇಟಿ ನೀಡಿದ ಅವರು, ಬಾಲಕರ ಬಾಲ ಮಂದಿರದಲ್ಲಿ ವಿವಿಧ ರಾಜ್ಯಗಳ 110 ಮಕ್ಕಳಿದ್ದು ಇಲಾಖೆಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು. ಮಹಿಳಾ ನಿಲಯ ಹಾಗೂ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೂ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಬಳಿಕ ಸರ್ಕಾರಿ ಶಿಶು ಮಂದಿರಕ್ಕೂ ಭೇಟಿ ನೀಡಿ, ಶಿಶುಗಳ ಪಾಲನೆ, ಪೋಷಣೆ ಹಾಗೂ ಪುಟಾಣಿಗಳ ಆರೈಕೆ ಕುರಿತು ಪರಿಶೀಲನೆ ನಡೆಸಿದರು. ಆರು ವರ್ಷದೊಳಗಿನ 46 ಮಕ್ಕಳು ಕೇಂದ್ರದಲ್ಲಿದ್ದಾರೆ. ಶಿಶುಗಳ ಉತ್ತಮ ಆರೈಕೆಯು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ. ಮಕ್ಕಳ ಪಾಲನೆ ಮಾಡುತ್ತಿರುವ ಸಿಬ್ಬಂದಿ ವರ್ಗದವರ ಕಾರ್ಯವೈಖರಿಗೆ ಸಚಿವೆ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳನ್ನು ಮುದ್ದಾಡಿದರು.

Read More
Next Story