ಜನರೇಟಿವ್ ಎಐ| ಮೈಕ್ರೋಸಾಫ್ಟ್ ಮತ್ತು ಕರ್ನಾಟಕ ಎಂಒಯು ಸಾಧ್ಯತೆ
x

ಜನರೇಟಿವ್ ಎಐ| ಮೈಕ್ರೋಸಾಫ್ಟ್ ಮತ್ತು ಕರ್ನಾಟಕ ಎಂಒಯು ಸಾಧ್ಯತೆ


ಬೆಂಗಳೂರು: ಜನರೇಟಿವ್ ಎಐ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ ಹೆಚ್ಚಿಸಲು ಮೈಕ್ರೋಸಾಫ್ಟ್ ಕಂಪನಿಯು ರಾಜ್ಯ ಸರ್ಕಾರದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಯೋಜಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಮೈಕ್ರೋಸಾಫ್ಟ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪುನೀತ್ ಚಂದೋಕ್ ನೇತೃತ್ವದ ನಿಯೋಗ ಮತ್ತು ಸಚಿವರ ನಡುವಿನ ಸಭೆ ನಂತರ ಈ ಹೇಳಿಕೆ ನೀಡಲಾಗಿದೆ.

ಮಂಗಳವಾರ ಸಚಿವರ ಕಚೇರಿ ಹೊರಡಿಸಿದ ಹೇಳಿಕೆ ಪ್ರಕಾರ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯಲ್ಲಿ ಹೂಡಿಕೆದಾರರ ಬೆಂಬಲ ಪ್ರಕ್ರಿಯೆಗಳಲ್ಲಿ ಎಐ ಅನ್ನು ಹೇಗೆ ಸಂಯೋಜಿಸಬಹುದು ಎಂಬುದನ್ನು ಅನ್ವೇಷಿಸಲು ಮೈಕ್ರೋಸಾಫ್ಟ್ ಪರಿಣತರನ್ನು ಕಳಿಸಲು ಉದ್ದೇಶಿಸಿದೆ. ಇನ್ವೆಸ್ಟ್ ಕರ್ನಾಟಕ ಸಹಯೋಗದಲ್ಲಿ ಮುಂಬರುವ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಮೈಕ್ರೋಸಾಫ್ಟ್ ಭಾಗವಹಿಸುವಿಕೆ ಕುರಿತ ಚರ್ಚೆಗಳು ನಡೆಯಲಿವೆ.

ಜಾಗತಿಕ ಹೂಡಿಕೆ ಸಮಾವೇಶವು 2025ರ ಫೆಬ್ರವರಿ 12 ರಿಂದ 14 ರವರೆಗೆ ನಡೆಯಲಿದೆ. ಮೈಕ್ರೋಸಾಫ್ಟ್‌ ನ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲು ಮತ್ತು ಕಂಪನಿಯ ಇತ್ತೀಚಿನ ತಂತ್ರಜ್ಞಾನಗಳನ್ನು ಪ್ರಸ್ತುತಪಡಿಸಲು ಯೋಜಿಸಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

Read More
Next Story