Namma Metro | ಮೆಟ್ರೋ ಪ್ರಯಾಣ ದರ ನಾಳೆಯಿಂದಲೇ ಏರಿಕೆ
Namma Metro: ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿ ಬಿಎಂಆರ್‌ಸಿಎಲ್ ಶನಿವಾರ ಆದೇಶ ಹೊರಡಿಸಿದೆ. ಭಾನುವಾರ(ಫೆ.9) ದಿಂದಲೇ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಲಿದೆ.
ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ದರ ಹೆಚ್ಚಳ ಬೆನ್ನಲ್ಲೇ ʼನಮ್ಮ ಮೆಟ್ರೋʼ (Namma Metro) ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ. ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿ ಬಿಎಂಆರ್‌ಸಿಎಲ್ ಶನಿವಾರ ಆದೇಶ ಹೊರಡಿಸಿದೆ. ಭಾನುವಾರ(ಫೆ.9) ದಿಂದಲೇ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಲಿದೆ.
2 ಕಿ.ಮೀ ಪ್ರಯಾಣಕ್ಕೆ ಕನಿಷ್ಠ ಪ್ರಯಾಣದ ಟಿಕೆಟ್ ದರ 10 ರೂ. ಹೆಚ್ಚಳ ಮಾಡಲಾಗಿದೆ. ಅದೇ ರೀತಿ 2 ರಿಂದ 4 ಕಿ.ಮೀ ಪ್ರಯಾಣಕ್ಕೆ 20 ರೂ, 4-6 ಕಿ.ಮೀ ಪ್ರಯಾಣಕ್ಕೆ 30 ರೂ, 6-8 ಕಿ.ಮೀ ಪ್ರಯಾಣಕ್ಕೆ 40 ರೂ, 8-10 ಕಿ.ಮೀ ಪ್ರಯಾಣಕ್ಕೆ 50 ರೂ, 10-15ಕಿ.ಮೀ ಪ್ರಯಾಣಕ್ಕೆ 60 ರೂ, 15-20 ಕಿ.ಮೀ ಪ್ರಯಾಣಕ್ಕೆ 70 ರೂ, 20-25 ಕಿ.ಮೀ ಪ್ರಯಾಣಕ್ಕೆ 80 ರೂ ಹಾಗೂ 30 ಕಿ.ಮೀ ಗಿಂತ ಹೆಚ್ಚಿನ ಪ್ರಯಾಣಕ್ಕೆ 90 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಈವರೆಗೆ ಸ್ಮಾರ್ಟ್ ಕಾರ್ಡ್ ಕನಿಷ್ಠ 50 ರೂ. ಇರಬೇಕಾಗಿತ್ತು. ಹೊಸ ಆದೇಶದ ಪ್ರಕಾರ ಈಗ ಕನಿಷ್ಠ 90 ಹೊಂದಿರಬೇಕಾಗುತ್ತದೆ. ಅಂದರೆ ಸ್ಮಾರ್ಟ್ ಕಾರ್ಡ್ ಮೇಲೂ 40 ರೂಪಾಯಿ ಹೆಚ್ಚಳ ಮಾಡಲಾಗಿದೆ.