ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ ವಕೀಲಿಕೆಗೆ ನಿರ್ಬಂಧ
x
ಕೆ ಎಸ್‌ ಭಗವಾನ್‌ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ

ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರ ವಕೀಲಿಕೆಗೆ ನಿರ್ಬಂಧ

ಪ್ರಗತಿಪರ ಚಿಂತಕ ಸಾಹಿತಿ ಕೆ ಎಸ್ ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಅವರಿಗೆ ಮೂರು ತಿಂಗಳ ಕಾಲ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸುವಂತಿಲ್ಲ ಎಂದು ರಾಜ್ಯ ವಕೀಲರ ಪರಿಷತ್‌ ಆದೇಶಿಸಿದೆ.


Click the Play button to hear this message in audio format


ಪ್ರಗತಿಪರ ಚಿಂತಕ ಸಾಹಿತಿ ಕೆ.ಎಸ್. ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿ ವಕೀಲೆ ಮೀರಾ ರಾಘವೇಂದ್ರ ಅವರಿಗೆ ಮೂರು ತಿಂಗಳ ಕಾಲ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸುವಂತಿಲ್ಲ ಎಂದು ರಾಜ್ಯ ವಕೀಲರ ಪರಿಷತ್‌ ಆದೇಶಿಸಿದೆ.

ಕೆ.ಎಸ್.ಭಗವಾನ್ ದಾಖಲಿಸಿದ್ದ ದೂರನ್ನು; ರಾಜ್ಯ ವಕೀಲರ ಪರಿಷತ್ತಿನ, 'ಶಿಸ್ತುಪಾಲನಾ ಸಮಿತಿ' ಅಧ್ಯಕ್ಷ ಎಸ್.ಮಹೇಶ್ ಮತ್ತು ಪರಿಷತ್ ಸದಸ್ಯ ಎಸ್.ಹರೀಶ್ ನೇತೃತ್ವದ ಸಮಿತಿ ವಿಚಾರಣೆ ನಡೆಸಿ, ವಕೀಲೆ ಮೀರಾ ವೃತ್ತಿ ದುರ್ನಡತೆ ತೋರಿದ್ದು, ವಕೀಲರ ಶಿಷ್ಟಾಚಾರಗಳಿಗೆ ಅವಮಾನ ಉಂಟು ಮಾಡಿದ್ದಾರೆ. ಸಮವಸ್ತ್ರ ಧಾರಿಣಿಯಾಗಿ ಮೀರಾ ಅವರು ಕ್ರಿಮಿನಲ್‌ ಪ್ರಕರಣವೊಂದರ ಆರೋಪಿಯಾದ ಕೆ. ಎಸ್‌. ಭಗವಾನ್‌ ಅವರಿಗೆ ನ್ಯಾಯಾಲಯ ಆವರಣದಲ್ಲಿ ಮುಖಕ್ಕೆ ಮಸಿ ಬಳಿಯುವ ಮೂಲಕ ದುರ್ನಡತೆ ತೋರಿದ್ದಾರೆ. ವೃತ್ತಿಗೆ ಬದ್ದರಾಗಿರದೆ ಶಿಷ್ಟಾಚಾರಗಳಿಗೆ ಅಪಮಾನ ಉಂಟು ಮಾಡಿದ್ದಾರೆ. ಹೀಗಾಗಿ, ಅವರು ಮೂರು ತಿಂಗಳ ಕಾಲ ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸಬಾರದು ಮತ್ತು ವಕಾಲತ್ತು ಸಲ್ಲಿಸಬಾರದು. ಅಲ್ಲಿಯವರೆಗೆ ಅವರ ಸನ್ನದನ್ನು ಅಮಾನತಿನಲ್ಲಿ ಇರಿಸಲಾಗಿದೆ” ಎಂದು ಸಮಿತಿಯು ತನ್ನ ಆದೇಶದಲ್ಲಿ ವಿವರಿಸಿದೆ.

ಪ್ರಕರಣವೇನು?

ಸಾಹಿತಿ ಕೆ ಎಸ್ ಭಗವಾನ್ ಅವರು ತಮ್ಮ ರಾಮ ಮಂದಿರ ಏಕೆ ಬೇಡ ಎಂಬ ಪುಸ್ತಕದಲ್ಲಿ ಶ್ರೀರಾಮನನ್ನು ಹೀಯಾಳಿಸಿದ್ದಾರೆ. ಅವಹೇಳನಕಾರಿ ಪದಗಳ ಬಳಕೆ ಮಾಡಿದ್ದಾರೆ. ಈ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿರುವ ವಕೀಲೆ ಮೀರಾ ರಾಘವೇಂದ್ರ ಅವರಯ ಕೆ ಎಸ್ ಭಗವಾನ್ ವಿರುದ್ಧ 2ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಈ ಪ್ರಕಣಕ್ಕೆ ಸಂಬಂಧಿಸಿದಂತೆ 2021ರ ಫೆಬ್ರವರಿ 4ರಂದು ನ್ಯಾಯಾಲಯಕ್ಕೆ ಷರತ್ತುಬದ್ಧ ಜಾಮೀನು ಪಡೆದು ಹೊರಬರುತ್ತಿದ್ದ ಕೆ ಎಸ್ ಭಗವಾನ್ ಅವರ ಮುಖಕ್ಕೆ ಮೀರಾ ರಾಘವೇಂದ್ರ ಮಸಿ ಬಳಿದು, ಎಂ ಎಂ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಅವರಂತೆ ನಿಮ್ಮನ್ನೂ ಹತ್ಯೆ ಮಾಡಲಾಗುವುದು ಎಂದು ಜೀವ ಬೆದರಿಕೆ ಹಾಕಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿಂತೆ ತಮ್ಮ ಮುಖಕ್ಕೆ ಮಸಿ ಬಳಿದಿದ್ದ ನಡವಳಿಕೆಯನ್ನು ಆಕ್ಷೇಪಿಸಿ ಭಗವಾನ್ ಅವರು ರಾಜ್ಯ ವಕೀಲರ ಪರಿಷತ್‌ನಲ್ಲಿ ಮೀರಾ ವಿರುದ್ಧ ದೂರು ದಾಖಲಿಸಿದ್ದರು.

Read More
Next Story