ಮಂಗಳೂರು ವಿಮಾನ ನಿಲ್ದಾಣ: ಆವರಣದಾಚೆಗೂ ಹೈಡ್ರಂಟ್‌ ಪಾಯಿಂಟ್‌
x

ಮಂಗಳೂರು ವಿಮಾನ ನಿಲ್ದಾಣ: ಆವರಣದಾಚೆಗೂ ಹೈಡ್ರಂಟ್‌ ಪಾಯಿಂಟ್‌


ಮಂಗಳೂರಿನ ಕೆಂಜಾರು ಸಮೀಪ ದುಬೈನಿಂದ ಬರುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ದುರಂತಕ್ಕೀಡಾಗಿದ್ದು ನೆನಪಿರಬಹುದು. 2010 ರ ಮೇ 22ರಂದು ಈ ದುರ್ಘಟನೆ ನಡೆದಿತ್ತು.

ಟೇಬಲ್‌ ಟಾಪ್‌ ವಿಮಾನ ನಿಲ್ದಾಣ ಎಂದೇ ಕರೆಸಿಕೊಳ್ಳುತ್ತಿರುವ ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಈಗ ಆದಾನಿ ಸಮೂಹದ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಆಡಳಿತಕ್ಕೆ ಒಳಪಟ್ಟಿದೆ) ಇದೀಗ ನಿಲ್ದಾಣದ ಆವರಣದ ಆಚೆಗೂ ಅಗ್ನಿಶಮನ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

2020ರ ಆ ದುರಂತ ವಿಮಾನ ನಿಲ್ದಾಣದ ಸುರಕ್ಷತೆಯ ಬಗ್ಗೆ ಸಾಕಷ್ಟು ಅಧ್ಯಯನಕ್ಕೆ ಕಾರಣವಾಯಿತು. ಇದೀಗ ವಿಮಾನ ನಿಲ್ದಾಣದ ರನ್‌ವೇಗೆ ಹೊಂದಿಕೊಂಡಂತಿರುವ ಕಣಿವೆ ಪ್ರದೇಶದಲ್ಲಿ ಅಗ್ನಿ ಶಮನಗೊಳಿಸುವ ನೀರು ಪೂರೈಕೆ ವ್ಯವಸ್ಥೆಯನ್ನು ಅಳವಡಿಸಿದೆ. ತುರ್ತು ಸಂದರ್ಭದಲ್ಲಿ ಈ ಪ್ರದೇಶದಲ್ಲಿ ತಕ್ಷಣಕ್ಕೆ ರಭಸವಾಗಿ ಚಿಮ್ಮುವ ನೀರು ಪೂರೈಕೆ ವ್ಯವಸ್ಥೆ ಇದು.

ಹೇಗಿದೆ ಕಾರ್ಯಾಚರಣೆ?

ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣವೇ ಸ್ಪಂದಿಸುವಂತೆ ಸ್ವಯಂ ಚಾಲಿತ ವ್ಯವಸ್ಥೆ ಹೊಂದಿರುವ 25 ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳು ಇವೆ. ಈ ಟ್ಯಾಂಕ್‌ಗಳಿಂದ ಹೊಸ ಪಾಯಿಂಟ್‌ಗಳಿಗೆ ನೀರನ್ನು ಪಂಪ್‌ ಮಾಡಲಾಗುತ್ತದೆ. ಅದಕ್ಕಾಗಿ 20ಎಚ್‌ಪಿ ಸಾಮರ್ಥ್ಯದ ಪಂಪ್‌ಗಳಿವೆ. ಈ ಪೈಪ್‌ಗಳಲ್ಲಿ ನೀರು ತುಂಬಿದ್ದು ಸನ್ನದ್ಧ ಸ್ಥಿತಿಯಲ್ಲಿ ಇರುತ್ತವೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಪೈಪ್‌ಲೈನ್‌ಗಳ ಕವಲುಗಳೂ ಇವೆ. ಎಷ್ಟೇ ಪಾಯಿಂಟ್‌ಗಳಿದ್ದರೂ ನೀರಿನ ಒತ್ತಡ ಕಡಿಮೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ಅಗ್ನಿ ಶಮನ ತಂಡಗಳು ಈ ಪಾಯಿಂಟ್‌ಗಳತ್ತ ಧಾವಿಸಲು ಅನುಕೂಲ ಮಾಡಲಾಗಿದೆ ಎಂದಿದ್ದಾರೆ ವಿಮಾನ ನಿಲ್ದಾಣದ ವಕ್ತಾರ ಜೈದೀಪ್‌ ಶೆಣೈ.

ಎರಡು ಜಲಪೂರಣ (ಹೈಡ್ರಂಟ್ ಪಾಯಿಂಟ್) ಪೈಪ್‌ಗಳು ಕಣಿವೆಯ ಇಳಿಜಾರಿನ ಮಧ್ಯದಲ್ಲಿವೆ ಮತ್ತು ಉಳಿದವು ಅಡ್ಯಪಾಡಿ ರಸ್ತೆಗೆ ಹೊಂದಿಕೊಂಡಿರುವ ಕಣಿವೆ ಇಳಿಜಾರಿನ ತಳದಲ್ಲಿವೆ. ಸುಮಾರು ೨೮೦ ಮೀಟರ್‌ ಇಳಿಜಾರಿನ ಪ್ರದೇಶಕ್ಕೆ ಕಬ್ಬಿಣ್‌ ಪೈಪ್‌ಗಳನ್ನು ಅಳವಡಿಸಲಾಗಿದೆ.

ಈ ಮೂಲಸೌಕರ್ಯವು ಏರೋಡ್ರೋಮ್ ರೆಸ್ಕ್ಯೂ ಮತ್ತು ಅಗ್ನಿ ಶಮನ ತಂಡಕ್ಕೆ ಈ ಕಣಿವೆಯಲ್ಲಿ ವಿಮಾನ ಅಥವಾ ನಿಲ್ದಾಣದ ಸಂಭವನೀಯ ತುರ್ತುಸ್ಥಿತಿಗಳನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನ್ನ ಸುರಕ್ಷತಾ ಶಿಫಾರಸುಗಳಲ್ಲಿ ಈ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಕಣಿವೆಯಲ್ಲಿ ಅಗ್ನಿಶಮನ ವ್ಯವಸ್ಥೆ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ತುರ್ತು ಪರಿಸ್ಥಿತಿಗೆ ರಕ್ಷಣಾ ತಂಡ ಅತ್ಯಂತ ವೇಗವಾಗಿ ಸ್ಪಂದಿಸಲು ಸಾಧ್ಯ ಎಂಬುದು ನಿಲ್ದಾಣ ಆಡಳಿತದ ಆಶಯ.

Read More
Next Story