ಮಂಡ್ಯ ಕೋಮು ಸಂಘರ್ಷ| ಬೆಳ್ಳೂರಿನಲ್ಲಿ ಪ್ರಕ್ಷುಬ್ಧ ಸ್ಥಿತಿ
ವೇಗದಲ್ಲಿ ಕಾರು ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಎರಡು ಕೋಮುಗಳ ನಡವೆ ತೀವ್ರ ಗಲಾಟೆ ನಡೆದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ
ಅಭಿಲಾಷ್ ಎಂಬುವರ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕರ ಗುಂಪೊಂದು ಹಲ್ಲೆ ಮಾಡಿದ್ದರು. ಗಂಭೀರವಾಗಿ ಪೆಟ್ಟು ತಿಂದಿರುವ ಅಭಿಲಾಷ್ ಅವರನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಬಳಿಕ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಟಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಹಾಸ ಪಟ್ಟದ್ದಾರೆ. ಸಧ್ಯ ಅಲ್ಲಿಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಕಳೆದ ಶುಕ್ರವಾರ ಒಂದು ಕೋಮಿನ ಯುವಕರ ಗುಂಪು ಬೆಳ್ಳೂರಿನ ಸಂತೆ ಬೀದಿಯಲ್ಲಿ ಅತಿ ವೇಗದಲ್ಲಿ ಪಟ್ಟಣದೊಳಗೆ ಕಾರು ಓಡಿಸಿಕೊಂಡು ಹೋಗಿದೆ. ಅಲ್ಲದೇ ಓವರ್ ಟೇಕ್ ಮಾಡುವಾಗ ಬೈಕ್‌ಗೆ ಟಚ್ ಆಗಿದೆ. ಇದನ್ನು ಹಲ್ಲೆಗೆ ಒಳಗಾಗಿರುವ ಅಭಿಲಾಷ್ ಹಾಗೂ ಅವರ ಜತೆಗಾರ ನಾಗೇಶ್ ಎಂಬುವರು ಪ್ರಶ್ನಿಸಿದ್ದರು. ಈ ವೇಳೆ ಸಣ್ಣ ಮಟ್ಟಿನ ಮಾತಿನ ಚಕಮಕಿ ನಡೆದಿತ್ತು. ಅದೇ ದ್ವೇಷವನ್ನು ಇಟ್ಟುಕೊಂಡಿದ್ದ ಯುವಕರು, ಸೋಮವಾರ (ಮೇ 28) ರಂದು ಇನ್ನಷ್ಟು ದೊಡ್ಡ ಗುಂಪನ್ನು ಕಟ್ಟಿಕೊಂಡು ಬಂದು ಅಭಿಲಾಷ್ ಹಲ್ಲೆ ಮಾಡಿದ್ದರು.
ಅಭಿಲಾಷ್ ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಅಭಿಲಾಷ್ ಮೇಲೆ ಹಲ್ಲೆ ಮಾಡುವುದನ್ನು ತಡೆಯಲು ಬಂದವರ ಮೇಲೂ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆ ಯುವಕರು ತಡರಾತ್ರಿ ಅಭಿಲಾಷ್ ಮಾವ ನಾಗೇಶ್ ಮನೆ ಬಳಿ ತೆರಳಿ ದಾಂಧಲೆ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನಾಗೇಶ್ ಪತ್ನಿ ರಶ್ಮಿ ಬಾಗಿಲು ಹಾಕಿಕೊಂಡರೂ ಬಿಡಿದ ಯುವಕರು, ಬಾಗಿಲು ಬಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ, ದಾಂಧಲೆಯನ್ನು ತೀರ್ವಗೊಳಿಸಿದ್ದಾರೆ. ಘಟನೆಯಿಂದ ನಾಗೇಶ್ ಕುಟುಂಬ ಆತಂಕದಲ್ಲಿದೆ. ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದು ಗಲಾಟೆ ಸಂಭವಿಸುವ ಸಾಧ್ಯತೆಗಳನ್ನು ಮನಗಂಡಿರುವ ಪೊಲೀಸರು ಬೆಳ್ಳೂರು ಪಟ್ಟಣ ಹಾಗೂ ಬಿಜಿಎಸ್ ಆಸ್ಪತ್ರೆಗೆ ಬಿಗಿ ಪೊಲೀಸ್ ಭದ್ರತೆ. ಒದಗಿಸಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.