
ವಿಮಾನ ನಿಲ್ದಾಣದಲ್ಲಿ ಭಾನುವಾರ ತಡರಾತ್ರಿ ವ್ಯಕ್ತಿಯೊಬ್ಬ ಟ್ಯಾಕ್ಸಿ ಚಾಲಕರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರ ಮೇಲೆ ಚಾಕು ಹಿಡಿದು ವ್ಯಕ್ತಿಯಿಂದ ದಾಳಿ
ಆರೋಪಿ ಸೊಹೈಲ್ ಅಹ್ಮದ್‌ನನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಘಟನೆಯು ಟರ್ಮಿನಲ್ 1ರ ಆಗಮನ ಲೇನ್ ಬಳಿ ನಡೆದಿದ್ದು, ಅಹ್ಮದ್ ಉದ್ದನೆಯ ಚಾಕುವನ್ನು ಬೀಸುತ್ತಾ ಟ್ಯಾಕ್ಸಿ ಚಾಲಕರತ್ತ ಓಡಿಬರುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ತಡರಾತ್ರಿ ವ್ಯಕ್ತಿಯೊಬ್ಬ ಟ್ಯಾಕ್ಸಿ ಚಾಲಕರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಸಿಐಎಸ್‌ಎಫ್ ಸಿಬ್ಬಂದಿಯ ಸಮಯೋಚಿತ ಕ್ರಮದಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.
ಸೋಮವಾರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಭಾನುವಾರ ರಾತ್ರಿ ಟ್ಯಾಕ್ಸಿ ಚಾಲಕರೊಂದಿಗೆ ನಡೆದ ತೀವ್ರ ವಾಗ್ವಾದದ ನಂತರ, ಸೊಹೈಲ್ ಅಹ್ಮದ್ ಎಂದು ಗುರುತಿಸಲಾದ ವ್ಯಕ್ತಿಯು ಇಬ್ಬರು ಚಾಲಕರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ, ಸ್ವಲ್ಪ ದೂರ ಬೆನ್ನಟ್ಟಿ ಆತನನ್ನು ಹಿಡಿದು ಬಂಧಿಸಿದ್ದಾರೆ.
ಆರೋಪಿ ಸೊಹೈಲ್ ಅಹ್ಮದ್‌ನನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಘಟನೆಯು ಟರ್ಮಿನಲ್ 1ರ ಆಗಮನ ಲೇನ್ ಬಳಿ ನಡೆದಿದ್ದು, ಅಹ್ಮದ್ ಉದ್ದನೆಯ ಚಾಕುವನ್ನು ಬೀಸುತ್ತಾ ಟ್ಯಾಕ್ಸಿ ಚಾಲಕರತ್ತ ಓಡಿಬರುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.
ವಿಮಾನ ನಿಲ್ದಾಣದಲ್ಲಿ ನಿಯೋಜನೆಗೊಂಡಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ, ಯಾವುದೇ ಹಾನಿ ಸಂಭವಿಸುವ ಮುನ್ನವೇ ಆರೋಪಿಯನ್ನು ಹಿಡಿದು, ಆಯುಧವನ್ನು ವಶಪಡಿಸಿಕೊಂಡಿದ್ದಾರೆ.
ಈ ಘಟನೆಯ ಕುರಿತು ಎಕ್ಸ್ (X) ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹಂಚಿಕೊಂಡಿರುವ ಸಿಐಎಸ್‌ಎಫ್, "ನವೆಂಬರ್ 16ರ ಮಧ್ಯರಾತ್ರಿ, ವ್ಯಕ್ತಿಯೊಬ್ಬ ಉದ್ದನೆಯ ಚಾಕು ಹಿಡಿದು ಬೆಂಗಳೂರು ವಿಮಾನ ನಿಲ್ದಾಣದ ಟಿ1 ಆಗಮನ ಪ್ರದೇಶದಲ್ಲಿದ್ದ ಇಬ್ಬರು ಟ್ಯಾಕ್ಸಿ ಚಾಲಕರತ್ತ ಧಾವಿಸಿದ್ದ. ಎಎಸ್‌ಐ/ಎಕ್ಸಿ ಸುನಿಲ್ ಕುಮಾರ್ ಮತ್ತು ತಂಡವು ಕೂಡಲೇ ಕಾರ್ಯಪ್ರವೃತ್ತರಾಗಿ ದಾಳಿಕೋರನನ್ನು ಹಿಡಿದು, ಚಾಕುವನ್ನು ವಶಪಡಿಸಿಕೊಂಡಿದೆ. ಇದರಿಂದ ಪ್ರಯಾಣಿಕರಿಗೆ ಅಥವಾ ಸಿಬ್ಬಂದಿಗೆ ಯಾವುದೇ ಹಾನಿಯಾಗುವುದನ್ನು ತಪ್ಪಿಸಲಾಗಿದೆ," ಎಂದು ಹೇಳಿದೆ.
ಆರೋಪಿ ಮತ್ತು ಘಟನೆಯಲ್ಲಿ ಭಾಗಿಯಾಗಿದ್ದ ಇತರರನ್ನು ಹೆಚ್ಚಿನ ಕ್ರಮಕ್ಕಾಗಿ ಕೆಐಎ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಹಿಂದಿನ ವಿವಾದವೊಂದರ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

