
Honey Trap | ಮಲ್ಲಿಕಾರ್ಜುನ ಖರ್ಗೆ- ಸಿದ್ದರಾಮಯ್ಯ ಭೇಟಿ; ಹನಿ ಟ್ರ್ಯಾಪ್ ಹಿಂದಿನ ʼಪ್ರಭಾವಿ ರಾಜಕಾರಣಿʼ ಬಗ್ಗೆ ಚರ್ಚೆ
ಸ್ವತಃ "ಹನಿ ಟ್ರ್ಯಾಪ್ʼ ಅರೋಪ ಮಾಡಿದ ಬಳಿಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ʼಪ್ರಭಾವಿ ನಾಯಕ"ನ ಹಿನ್ನೆಲೆ ಹಾಗೂ ವಿವರ ಹೈಕಮಾಂಡ್ ಗಮನಕ್ಕೆ ಬಂದಿದೆ. ಅ "ಪ್ರಭಾವಿ ನಾಯಕ"ನ ವಿವರ ಗೊತ್ತಿದ್ದರೂ, ಬಹಿರಂಗಪಡಿಸಲು ಕಾಂಗ್ರೆಸ್ ಇನ್ನೂ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.
ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿರುವ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಆ ಪಕ್ಷದ ಮಟ್ಟಿಗೆ ತೀರಾ ಮುಜುಗರ ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ಇರಿಸುಮುರಿಸುಗೊಂಡಿರುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ರಾಜಣ್ಣ ಅವರೇ ಸ್ವತಃ "ಹನಿ ಟ್ರ್ಯಾಪ್ʼ ಅರೋಪ ಮಾಡಿದ ಬಳಿಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ʼಪ್ರಭಾವಿ ನಾಯಕ"ನ ಹಿನ್ನೆಲೆ ಹಾಗೂ ವಿವರ ಹೈಕಮಾಂಡ್ ಗಮನಕ್ಕೆ ಬಂದಿದೆ. ಅ "ಪ್ರಭಾವಿ ನಾಯಕ"ನ ವಿವರ ಗೊತ್ತಿದ್ದರೂ, ಬಹಿರಂಗಪಡಿಸಲು ಕಾಂಗ್ರೆಸ್ ಇನ್ನೂ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.
ಮುಖ್ಯಮಂತ್ರಿಗಳ ಕಚೇರಿ, "ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಮೊಣಕಾಲು ನೋವಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದರು," ಎಂದು ಹೇಳಿದೆ. ಮೇಲ್ನೋಟಕ್ಕ "ಅರೋಗ್ಯ ವಿಚಾರಿಸುವ" ಕಾರಣವನ್ನು ಕಾಂಗ್ರೆಸ್ ನೀಡಿದರೂ, ಪ್ರಮುಖವಾಗಿ ಹನಿಟ್ರ್ಯಾಪ್ ಪ್ರಕರಣ ಸಂಬಂಧ ಮಹತ್ವದ ಚರ್ಚೆ ನಡೆಸಲು ಖರ್ಗೆ ಅವರು ಸ್ವತಃ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಖರ್ಗೆಯವರು ಮುಖ್ಯಮಂತ್ರಿ ಅವರನ್ನೇ ತಮ್ಮ ಭೇಟಿಗೆ ಕರೆಸಿಕೊಳ್ಳಬಹುದು. ಮತ್ತು ಮುಖ್ಯಮಂತ್ರಿಯವರೇ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುವುದು ಸಂಪ್ರದಾಯವಾಗಿದೆ. ಸಿದ್ದರಾಮಯ್ಯ ಅವರು ಕಾಲಿನ ಮೊಣಕಾಲ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರೂ, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲೇ ಇದ್ದಾರೆ. ಹಾಗಾಗಿ ಖರ್ಗೆಯವನ್ನು ಸ್ವತಃ ಭೇಟಿಯಾಗದಷ್ಟು ಆರೋಗ್ಯ ಕೆಟ್ಟಿಲ್ಲ.
ಆದರೂ, ಹನಿ ಟ್ರ್ಯಾಪ್ ಒಬ್ಬ ಕಾಂಗ್ರೆಸ್‌ನ "ಪ್ರಭಾವಿ ನಾಯಕ"ನಾಗಿರುವುದರಿಂದ ಮತ್ತು ಸಚಿವ ಕೆ.ಎನ್.ರಾಜಣ್ಣ ಅವರೇ ಆರೋಪಿಸಿರುವಂತೆ ಸುಮಾರು 48 ಮಂದಿ ಶಾಸಕರು, ರಾಜಕಾರಣಿಗಳನ್ನು ಆ ಪ್ರಭಾವಿ ನಾಯಕನ ಕಡೆಯವರು ಹನಿ ಟ್ರ್ಯಾಪ್ ಮಾಡಿದ್ದಾರೆ ಎಂಬ ಮಾತು ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿರುವುದರಿಂದ ಅದರ ಗಂಭೀರತೆಯನ್ನು ಸ್ವತಃ ಮಲ್ಲಿಕಾರ್ಜುನ ಖರ್ಗೆಯವರು ಮನಗಂಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಖರ್ಗೆಯವರು ಭೇಟಿಮಾಡಿ, ಹನಿ ಟ್ರ್ಯಾಪ್ ಪ್ರಕರಣ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ. ಈ ವೇಳೆ, ಸಿದ್ದರಾಮಯ್ಯ ಅವರು ಸದನದಲ್ಲಿ ಘೋಷಣೆ ಮಾಡಿರುವಂತೆ ʼಉನ್ನ ಮಟ್ಟದ ತನಿಖೆʼ ಯಾವ ರೀತಿಯಲ್ಲಿರಬೇಕು ಎಂಬ ಬಗ್ಗೆಯ ಚರ್ಚ ನಡೆದಿದೆ ಎನ್ನಲಾಗಿದೆ. ಜತೆಗೆ, ರಾಜಣ್ಣ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರು ಮುಖ್ಯಮಂತ್ರಿಗೆ ನೀಡಿರುವ ʼಹನಿ ಟ್ರ್ಯಾಪ ದಾಖಲೆʼಗಳ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಈ ನಡುವೆ ಹನಿಟ್ರ್ಯಾಪ್ ಪ್ರಕರಣದಲ್ಲಿ ತಮ್ಮದೇ ಪಕ್ಷದ ಹಿರಿಯ ಸಚಿವರು, ಮುಖಂಡರ ವಿರುದ್ಧ ತಮ್ಮದೇ ಪಕ್ಷದ ಪ್ರಮುಖರೇ ಖೆಡ್ಡಾ ತೋಡಲು ಯತ್ನಿಸಿರುವ ವಿಷಯ ರಾಜ್ಯ ಕಾಂಗ್ರೆಸ್ನಲ್ಲಿ ಮಡುಗಟ್ಟಿದ್ದ ಅಸಮಾಧಾನ, ಆಕ್ರೋಶ ಸ್ಫೋಟಗೊಳ್ಳಲು ಕಾರಣವಾಗಿದ್ದು ಹಲವು ಹಿರಿಯ ಸಚಿವರು ಪ್ರಕರಣದ ಕುರಿತು ಗಂಭೀರ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್ ಮೊರೆಹೋಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪಕ್ಷದ ಹಿರಿಯ ಸಚಿವರಾದ ಡಾ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ ಎಂ ಬಿ ಪಾಟೀಲ್, ಆರ್ ವಿ ದೇಶಪಾಂಡೆ ಸೇರಿದಂತೆ ಹಲವು ಹಿರಿಯ ಮುಖಂಡರು ಪ್ರಕರಣದ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಮೂಲಕ ಮತ್ತೆ ಇಂತಹ ಪ್ರಯತ್ನಗಳು ನಡೆಯಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಕೋರಿದ್ದಾರೆ. ಆ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗ ಹಾಗೂ ಸಿದ್ದರಾಮಯ್ಯ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.