
ಸಾಂದರ್ಭಿಕ ಚಿತ್ರ
ಮಳವಳ್ಳಿ: ಪಶು ಆಹಾರವೆಂದು ಯೂರಿಯಾ ಸೇವಿಸಿ ಮೂರು ಹಸುಗಳ ಸಾವು
ಮೂರು ಹಸುಗಳ ಪೈಕಿ ಎರಡು ರೈತ ಸಿದ್ದಲಿಂಗೇಗೌಡ ಅವರಿಗೆ ಸೇರಿದ್ದರೆ, ಮತ್ತೊಂದು ಹಸು ಮಹದೇವ ಅವರಿಗೆ ಸೇರಿದೆ. ಎಂದಿನಂತೆ ಹಸುಗಳನ್ನು ಮನೆಯ ಹೊರಗೆ ಕಟ್ಟಲಾಗಿದ್ದ ಸಂದರ್ಭದಲ್ಲಿ, ಸಮೀಪದಲ್ಲಿ ಇರಿಸಿದ್ದ ಯೂರಿಯಾ ಗೊಬ್ಬರವನ್ನು ಪಶು ಆಹಾರವೆಂದು ಸೇವಿಸಿವೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಚನ್ನೇಗೌಡನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಪಶು ಆಹಾರವೆಂದು ಭಾವಿಸಿ ಯೂರಿಯಾ ಗೊಬ್ಬರವನ್ನು ಸೇವಿಸಿದ ಪರಿಣಾಮ ಮೂರು ಹಸುಗಳು ಸಾವನ್ನಪ್ಪಿವೆ. ಈ ದುರ್ಘಟನೆಯಿಂದ ಜಾನುವಾರುಗಳನ್ನೇ ನಂಬಿ ಬದುಕುತ್ತಿದ್ದ ರೈತ ಕುಟುಂಬಗಳು ತೀವ್ರ ಆಘಾತಕ್ಕೊಳಗಾಗಿವೆ.
ಮೃತಪಟ್ಟ ಮೂರು ಹಸುಗಳ ಪೈಕಿ ಎರಡು ರೈತ ಸಿದ್ದಲಿಂಗೇಗೌಡ ಅವರಿಗೆ ಸೇರಿದ್ದರೆ, ಮತ್ತೊಂದು ಹಸು ಮಹದೇವ ಅವರಿಗೆ ಸೇರಿದೆ. ಎಂದಿನಂತೆ ಹಸುಗಳನ್ನು ಮನೆಯ ಹೊರಗೆ ಕಟ್ಟಲಾಗಿದ್ದ ಸಂದರ್ಭದಲ್ಲಿ, ಸಮೀಪದಲ್ಲಿ ಇರಿಸಿದ್ದ ಯೂರಿಯಾ ಗೊಬ್ಬರವನ್ನು ಪಶು ಆಹಾರವೆಂದು ಸೇವಿಸಿವೆ. ಯೂರಿಯಾ ತಿಂದ ಕೆಲವೇ ಕ್ಷಣಗಳಲ್ಲಿ ಹಸುಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಸ್ಥಳದಲ್ಲೇ ಮೃತಪಟ್ಟಿವೆ.
ಘಟನೆ ತಿಳಿದ ತಕ್ಷಣ ವಡ್ಡರಹಳ್ಳಿ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮೃತ ಹಸುಗಳ ವೈದ್ಯಕೀಯ ಪರೀಕ್ಷೆ ನಡೆಸಿದರು. ಈ ದುರಂತದಿಂದ ಆಘಾತಕ್ಕೊಳಗಾದ ರೈತ ಸಿದ್ದಲಿಂಗೇಗೌಡ ಅವರು, "ನಮ್ಮ ಕುಟುಂಬದ ಸಂಪೂರ್ಣ ಜೀವನ ಈ ಹಸುಗಳಿಂದಲೇ ನಡೆಯುತ್ತಿತ್ತು. ಈಗ ನಮ್ಮ ಬದುಕಿಗೆ ದಿಕ್ಕೇ ತೋಚದಂತಾಗಿದೆ," ಎಂದು ನೋವಿನಿಂದ ಹೇಳಿಕೊಂಡರು. ಜಾನುವಾರುಗಳನ್ನೇ ಕಳೆದುಕೊಂಡ ರೈತ ಕುಟುಂಬಗಳಿಗೆ ಇದರಿಂದ ದೊಡ್ಡ ಆರ್ಥಿಕ ನಷ್ಟ ಉಂಟಾಗಿದೆ.