
ಕರ್ನಾಟಕ ಸ್ಪಷ್ಟ ನಿಲುವು ತಳೆಯುವವರೆಗೂ ಮಹಾರಾಷ್ಟ್ರದಿಂದ ಬಸ್ ಸಂಚಾರ ಇಲ್ಲ: ಸಚಿವ
ಕರ್ನಾಟಕ ಸರ್ಕಾರ ನಮ್ಮ ಆಡಳಿತದೊಂದಿಗೆ ಚರ್ಚೆಯಲ್ಲಿ ತೊಡಗುವವರೆಗೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಸಚಿವ ಪ್ರತಾಪ್ ಸರ್‌ನಾಯಕ್ ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಸ್ಪಷ್ಟನೆ ಕೊಡುವ ತನಕ ರಾಜ್ಯದಿಂದ ಕರ್ನಾಟಕಕ್ಕೆ ತೆರಳುವ ಸರ್ಕಾರಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಕ್ ಹೇಳಿದ್ದಾರೆ.
ಅಲ್ಲಿನ ಸರ್ಕಾರ ನಮ್ಮ ಆಡಳಿತದೊಂದಿಗೆ ಚರ್ಚೆಯಲ್ಲಿ ತೊಡಗುವವರೆಗೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಏತನ್ರ್ಮಯೆ, ಪುಣೆಯಲ್ಲಿ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಬಸ್‌ಗಳಿಗೆ ಮಸಿ ಹಚ್ಚಿದ್ದಾರೆ.
ಮಹಾರಾಷ್ಟ್ರದ ಬಸ್ ಚಾಲಕನಿಗೆ ಮಸಿ
ಬೆಂಗಳೂರಿನಿಂದ ಮುಂಬೈನತ್ತ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ನ ಚಾಲಕನ ಮುಖಕ್ಕೆ ಶುಕ್ರವಾರ ರಾತ್ರಿ 9:10ರ ಸುಮಾರಿಗೆ ಚಿತ್ರದುರ್ಗದಲ್ಲಿ ಕನ್ನಡ ಪರ ಕಾರ್ಯಕರ್ತರು ಮಸಿ ಬಳಿದಿದ್ದರು. ಬಸ್ ಡ್ರೈವರ್ ಭಾಸ್ಕರ್ ಜಾಧವ್ ಮೇಲೆ ಹಲ್ಲೆ ನಡೆದಿದೆ ಎಂದೂ ಹೇಳಲಾಗುತ್ತಿದೆ.
ಘಟನೆಗೆ ಕಾರಣವೇನು?
ಕರ್ನಾಟಕದ ಸರ್ಕಾರಿ ಸಾರಿಗೆ ನಿಗಮದ ಬಸ್‌ವೊಂದರ ಕಂಡಕ್ಟರ್ ಮೇಲೆ ಬೆಳಗಾವಿಯ ಜಿಲ್ಲೆಯ ಹೊರವಲಯದಲ್ಲಿ ಹಲ್ಲೆ ಮಾಡಲಾಗಿತ್ತು. ಮರಾಠಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿತ್ತು. ಈ ಘಟನೆ ಬಳಿಕ ಗಡಿಭಾಗ ವಿವಾದದಿಂದಾಗಿ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಕಂಡಕ್ಟರ್ ಮದುವಪ್ಪ ಮಾಲಪ್ಪ ಹುಕ್ಕೇರಿ (51) ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಮರಾಠಿ ಭಾಷೆ ಕಲಿತಿಲ್ಲ . ಕನ್ನಡದಲ್ಲಿ ಮಾತನಾಡುವಂತೆ ಆಕೆಗೆ ಹೇಳಿದ್ದೆ. ಅದಕ್ಕೆ ಆಕೆ ಬೈದು ನಾನು ಮರಾಠಿ ಕಲಿಯುವಂತೆ ಒತ್ತಾಯಿಸಿದರು. ಬಳಿಕ ಏಕಾಏಕಿ ಸಾಕಷ್ಟು ಜನ ಕಲೆದು ನನ್ನನ್ನು ಹೊಡೆದರು,” ಎಂದು ದೂರಿದ್ದರು.
ಗಾಯಗೊಂಡ ಕಂಡಕ್ಟರ್ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದ್ದುಅವರ ಸ್ಥಿತಿ ಗಂಭೀವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ .
ಕಂಡೆಕ್ಟರ್ ವಿರುದ್ಧ ಗುಂಪು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.