30ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಲಾರಿ ಡಿಕ್ಕಿ; ಭಾರಿ ವಿದ್ಯುತ್ ವ್ಯತ್ಯಯ
x
ಖಜಂಗೊಂಡ ವಿದ್ಯುತ್‌ ಕಂಬಗಳು

30ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಲಾರಿ ಡಿಕ್ಕಿ; ಭಾರಿ ವಿದ್ಯುತ್ ವ್ಯತ್ಯಯ

ಚಿಕ್ಕಬಾಣಾವರ ಬಳಿ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 35ವಿದ್ಯುತ್‌ ಕಂಬಗಳಿಗೆ ಹಾನಿಯಾಗಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.


Click the Play button to hear this message in audio format

ಬೆಂಗಳೂರು ಹೊರವಲಯದ ಚಿಕ್ಕಬಾಣಾವರ ಬಳಿ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 35ವಿದ್ಯುತ್‌ ಕಂಬಗಳಿಗೆ ಹಾನಿಯಾಗಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಚಿಕ್ಕಬಾಣಾವರ ವೃತ್ತ ಮತ್ತು ದ್ವಾರಕಾನಗರ ನಡುವಿನ ಮಾರ್ಗದಲ್ಲಿ ಶನಿವಾರ ಬೆಳಗಿನ ಜಾವ 2:20ರ ಸುಮಾರಿಗೆ ಈ ಘಟನೆ ನಡೆದಿದೆ.

ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಅಕ್ಕಪಕ್ಕದ 35 ಕಂಬಗಳು ಧರೆಗೆ ಉರುಳಿದವು. ತಕ್ಷಣವೇ ಸ್ಥಳೀಯರು ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರಿಂದ ಅವರು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದರು. ಇದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ತುರ್ತು ಪ್ರತಿಕ್ರಿಯೆ ತಂಡಗಳು ಶನಿವಾರದ ಆರಂಭದಲ್ಲಿ ವಿದ್ಯುತ್‌ ಮರುಸ್ಥಾಪನೆಗೆ ಪ್ರಯತ್ನ ನಡೆಸಿದವು. ಸಂಜೆ 5 ಗಂಟೆ ಸುಮಾರಿಗೆ ಸುಮಾರು 85 ಪ್ರತಿಶತದಷ್ಟು ದುರಸ್ತಿಗಳು ಪೂರ್ಣಗೊಂಡವು.

ಬೆಸ್ಕಾಂ ಅಧಿಕಾರಿಗಳು ಒಟ್ಟು ರೂ 7 ರಿಂದ 8 ಲಕ್ಷದವರೆಗೆ ಹಾನಿಯಾಗಿದೆ ಎಂದು ಅಂದಾಜಿಸಿದ್ದಾರೆ. ಬಿದ್ದ ಕಂಬಗಳನ್ನು ಬದಲಾಯಿಸಲು ಮತ್ತು ಹಾನಿಗೊಳಗಾದ ಟ್ರಾನ್ಸ್‌ಫಾರ್ಮರ್‌ಗಳನ್ನು ಸರಿಪಡಿಸಲು ವೆಚ್ಚವನ್ನು ಭರಿಸಬೇಕಾಗುತ್ತದೆ. ಘಟನೆ ಸಂಬಂಧ ಲಾರಿ ಚಾಲಕನ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Read More
Next Story